For Quick Alerts
  ALLOW NOTIFICATIONS  
  For Daily Alerts

  ತನ್ನ ಮೇಲಾದ ಆಸಿಡ್ ದಾಳಿಯ ದಾರುಣ ಕಥೆ ಬಿಚ್ಚಿಟ್ಟ ನಟಿ ಕಂಗನಾ ಸಹೋದರಿ ರಂಗೋಲಿ

  |

  ದೇಶದಾದ್ಯಂತ ಸದ್ಯ ನಟಿ ದೀಪಿಕಾ ಪಡುಕೋಣೆ ಅಭಿನಯದ 'ಚಪಾಕ್' ಸಿನಿಮಾ ಸಂಚಲನ ಸೃಷ್ಟಿಮಾಡಿದೆ. ಆಸಿಡ್ ದಾಳಿಗೆ ಒಳಗಾದ ಮುದ್ದಾದ ಹೆಣ್ಣುಮಗಳು ಲಕ್ಷ್ಮಿ ಅಗರ್ವಾಲ್ ಕಥೆಯನ್ನು ಈ ಚಪಾಕ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದಿಡಲಾಗುತ್ತಿದೆ. ಆಸಿಡ್ ದಾಳಿ ನಡೆದ ಸಂದರ್ಭ, ನಂತರ ಆ ಹೆಣ್ಣುಮಗಳು ಅನುಭವಿಸಿದ ನೋವು, ಸಂಕಟ, ಲಕ್ಷ್ಮಿ ಜೊತೆ ಸಮಾಜ ನಡೆದುಕೊಂಡ ರೀತಿ ಎಲ್ಲವನ್ನು ಚಪಾಕ್ ಮೂಲಕ ಕಟ್ಟಿಕೊಡಲಾಗಿದೆ.

  2005 ಲಕ್ಷ್ಮಿ ಅಗರ್ವಾಲ್ ಅವರಿಗಿನ್ನು 15 ವರ್ಷ. 32 ವರ್ಷದ ನದೀಮ್ ಖಾನ್ ಎಂಬಾತ ಮದುವೆ ಆಗುವುದಾಗಿ ಪೀಡಿಸುತ್ತಿದ್ದ. ಆದರೆ ಲಕ್ಷ್ಮಿ ನಿರಾಕರಿಸಿದರು ಎನ್ನುವ ಒಂದೇ ಒಂದು ಕಾರಣಕ್ಕೆ ನದೀಮ್ ಖಾನ್ ಆಕೆಯ ಸುಂದರ ಮುಖದ ಮೇಲೆ ಆಸಿಡ್ ಎರಚಿ ಸುಟ್ಟು ಬಿಡುತ್ತಾನೆ.

  ಕಂಗನಾ ರಣಾವತ್ ನಿರ್ಮಾಣದಲ್ಲಿ 'ಅಯೋಧ್ಯೆ' ವಿವಾದ ಕುರಿತ ಸಿನಿಮಾಕಂಗನಾ ರಣಾವತ್ ನಿರ್ಮಾಣದಲ್ಲಿ 'ಅಯೋಧ್ಯೆ' ವಿವಾದ ಕುರಿತ ಸಿನಿಮಾ

  ಲಕ್ಷ್ಮಿ ಅಗರ್ವಾಲ್ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಚಿತ್ರದ ಫಸ್ಟ್ ಮತ್ತು ಟ್ರೈಲರ್ ಮೂಲಕ ಚಿತ್ರಾಭಿಮಾನಿಗಳ ಕುತೂಹಲ ಹೆಚ್ಚಿಸಿದ್ದ ಚಪಾಕ್ ಇಂದು ದೇಶದಾದ್ಯಂತ ರಿಲೀಸ್ ಆಗಿದೆ. ದೀಪಿಕಾ ಅಭಿನಯಕ್ಕೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಈ ಸಮಯದಲ್ಲಿ ಬಾಲಿವುಡ್ ನ ಖ್ಯಾತ ನಟಿ ಕಂಗನಾ ರಣಾವತ್ ಸಹೋದರಿ ರಂಗೋಲಿ ಚಾಂದೇಲ್ ನನ್ನ ಮೇಲಾದ ಆಸಿಡ್ ದಾಳಿಯ ದಾರುಣ ಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ.

  ಕಂಗನಾ ಸಹೋದರಿಯ ದಾರುಣ ಕಥೆ

  ಕಂಗನಾ ಸಹೋದರಿಯ ದಾರುಣ ಕಥೆ

  ನಟಿ ಕಂಗನಾ ರಣಾವತ್ ಮತ್ತು ಸಹೋದರಿ ರಂಗೋಲಿ ಚಾಂದೇಲ್ ಈ ಇಬ್ಬರು ಸಹೋದರಿಯರು ಬಾಲಿವುಡ್ ನಲ್ಲಿ ತುಂಬ ಫೇಮಸ್. ಬಾಲಿವುಡ್ ನ ಅನೇಕ ಮಂದಿಯ ವಿರುದ್ಧ ಕಿರುಕ್ ಮಾಡಿಕೊಳ್ಳುವ ರಂಗೋಲಿ ಈಗ ತನ್ನ ಮೇಲಾದ ಆಸಿಡ್ ದಾಳಿಯ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ರಂಗೋಲಿ ಕಥೆ ಕೇಳಿ ನೆಟ್ಟಿಗರು ಅನುಕಂಪ ತೋರಿ ಆರೋಪಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

  ಅಮಿತಾಬ್ ಬಚ್ಚನ್ ಪ್ರಕಾರ ಬಾಲಿವುಡ್ 'ನಂ. 1' ನಟಿಯಾರು ಗೊತ್ತಾ?ಅಮಿತಾಬ್ ಬಚ್ಚನ್ ಪ್ರಕಾರ ಬಾಲಿವುಡ್ 'ನಂ. 1' ನಟಿಯಾರು ಗೊತ್ತಾ?

  ಆಸಿಡ್ ದಾಳಿ ಮಾಡಿದ್ದು ಅವಿನಾಶ್ ಶರ್ಮಾ

  ಆಸಿಡ್ ದಾಳಿ ಮಾಡಿದ್ದು ಅವಿನಾಶ್ ಶರ್ಮಾ

  "ಟ್ವಿಟ್ಟರ್ ನಲ್ಲಿ ಒಬ್ಬರು ಕೇಳಿದ ಪ್ರಶ್ನೆಗ ಉತ್ತರಿಸಿರುವ ರಂಗೋಲಿ, ನನ್ನ ಮೇಲೆ ಆಸಿಡ್ ದಾಳಿ ಮಾಡಿದವನ ಹೆಸರು ಅವಿನಾಶ್ ಶರ್ಮಾ. ಆತ ನಾನು ಓದುತ್ತಿದ್ದ ಕಾಲೇಜಿನಲ್ಲಿಯೆ ಓದುತ್ತಿದ್ದ. ಅಲ್ಲದೆ ನನ್ನ ಗೆಳೆಯರ ಬಳಗದಲ್ಲಿಯೆ ಗುರುತಿಸಿಕೊಂಡಿದ್ದ. ಒಂದು ದಿನ ನನಗೆ ಪ್ರಪೋಸ್ ಮಾಡಿದ. ಆದರೆ ನಾನು ಆತನ ಪ್ರಪೋಸ್ ಅನ್ನು ತಿರಸ್ಕರಿಸಿದೆ. ಅಲ್ಲದೆ ಆತನಿಂದ ಅಂತರ ಕಾಯ್ದು ಕೊಂಡೆ. ಆತ ಮಾತ್ರ ನನ್ನನ್ನೇ ಮದುವೆಯಾಗುತ್ತೀನಿ ಅಂತ ಪೀಡಿಸುತ್ತ. ಎಲ್ಲಾ ಬಳಿಯೂ ಹೇಳಿಕೊಂಡುತಿರುಗಾಡುತ್ತಿದ್ದ"

  ಮದುವೆಗೆ ಒಪ್ಪದ ಕಾರಣ ಆಸಿಡ್ ದಾಳಿ

  ಮದುವೆಗೆ ಒಪ್ಪದ ಕಾರಣ ಆಸಿಡ್ ದಾಳಿ

  "ಅಷ್ಟರಲ್ಲೆ ನಮ್ಮ ಮನೆಯಲ್ಲಿ ನನಗೆ ನೌಕಾ ಸೇನೆಯ ಅಧಿಕಾರಿಯ ಜೊತೆ ನಿಶ್ಚಿತಾರ್ಥ ಮಾಡಿದರು. ಮದುವೆಯಾಗುವಂತೆ ಪೀಡಿಸಲು ಶುರುಮಾಡಿದ. ಇದಕ್ಕೆ ನಾನು ಒಪ್ಪಲಿಲ್ಲ. ಆಸಿಡ್ ಹಾಕುತ್ತೇನೆ ಅಂತ ಬೆದರಿಸುತ್ತಿದ್ದ. ಇದ್ಯಾವುದಕ್ಕೂ ನಾನೂ ತಲೆ ಕೆಡಿಸಿಕೊಳ್ಳದೆ, ಈ ಬಗ್ಗೆ ನನ್ನ ಮನೆಯಲ್ಲಾಗಲಿ ಅತವಾ ಪೊಲೀಸರಿಗಾಗಲಿ ಮಾಹಿತಿ ನೀಡದೆ ಇದ್ದದ್ದು ನನ್ನ ಜೀವನದ ಅತೀ ದೊಡ್ಡ ದುರಂತ" ಎಂದು ಹೇಳಿದ್ದಾರೆ.

  ಜಗ್ ತುಂಬಾಇದ್ದ ಆಸಿಡ್ ಚಪಾಕ್ ಅಂತ ಎರಚಿದ್ದ

  ಜಗ್ ತುಂಬಾಇದ್ದ ಆಸಿಡ್ ಚಪಾಕ್ ಅಂತ ಎರಚಿದ್ದ

  "ನಾನು ನನ್ನ ಜನ ಗೆಳತಿಯರ ಜೊತೆ ಪಿಜಿಯಲ್ಲಿ ಇದ್ದೆ. ನನ್ನ ಹುಡುಕಿಕೊಂಡು ಬಂದಿದ್ದ ಒಬ್ಬ ವ್ಯಕ್ತಿ. ಗೆಳತಿ ವಿಜಯಾ ಬಳಿ ನಾನೆಲ್ಲಿ ಅಂತ ಕೇಳಿದ. ವಿಜಯಾ ಬಂದು ನಿನ್ನನೂ ಯಾರೊ ಕೇಳಿಕೊಂಡು ಬಂದಿದ್ದಾರೆ ಅಂತ ಹೇಳಿದ್ದಳು. ನಾನು ಯಾರು ಅಂತ ನೋಡಲು ಬಾಗಿಲು ತೆಗೆಯುತ್ತಿದ್ದಂತೆ ತನ್ನ ಕೈಯಲ್ಲಿದ್ದ ಒಂದು ಜಗ್ ಪೂರ್ತಿ ತಂದಿದ್ದ ಆಸಿಡ್ ಅನ್ನು ಚಪಾಕ್ ಅಂತ ಎರಚಿದ್ದ" ಎಂದು ರಂಗೋಲಿ ಆಸಿಡ್ ದಾಳಿಯ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

  English summary
  Bollywood actress Kangana Ranaut sister Rangoli Chandel revealed her Acid Attack story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X