For Quick Alerts
  ALLOW NOTIFICATIONS  
  For Daily Alerts

  ಕಂಗನಾ ಮನೆ ಕೆಡವಲು ಮುಂಬೈ ಪಾಲಿಕೆ ಇಷ್ಟೊಂದು ಹಣ ಖರ್ಚು ಮಾಡಿದೆಯಾ?

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮತ್ತೆ ಗುಡುಗಿದ್ದಾರೆ. ಕಂಗನಾ ಮುಂಬೈ ಬಂಗಲೆಯನ್ನು ಒಡೆಯಲು ಮುಂದಾಗಿದ್ದ ಮುಂಬೈ ಪಾಲಿಕೆಯ ವಿರುದ್ಧ ಬಾಲಿವುಡ್ ನಟಿ ಮತ್ತೆ ಸಿಡಿದೆದ್ದಿದ್ದಾರೆ. ಮುಂಬೈನ ಬಾಂದ್ರಾದಲ್ಲಿದ್ದ ಕಂಗನಾ ಮನೆಯನ್ನು ಅಕ್ರಮ ನಿರ್ಮಾಣ ಆರೋಪದಡಿ ಮುಂಬೈ ಪಾಲಿಕೆ ಭಾಗಶಃ ನೆಲಸಮ ಮಾಡಿದೆ. ಕಂಗನಾ ಮನೆಯನ್ನು ಕೆಡವಲು ಮುಂಬೈ ಪಾಲಿಕೆ 82 ಲಕ್ಷ ಖರ್ಚು ಮಾಡಿದೆಯಂತೆ.

  ಈ ವಿಚಾರ ತಿಳಿದ ಕಂಗನಾ ಉದ್ಧವ್ ಠಾಕ್ರೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಬಿಎಂಸಿ ಹಿರಿಯ ವಕೀಲ ಆಸ್ಪಿ ಚಿನೋಯ್ ಅವರಿಗೆ ಕಾನೂನು ಶುಲ್ಕವಾಗಿ 82 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದು ಬಹಿರಂಗವಾಗಿದೆ. ಸೆಪ್ಟಂಬರ್ 22ರಂದು 22.50 ಲಕ್ಷ, ಅಕ್ಟೋಬರ್ 7ರಂದು 60 ಲಕ್ಷ, ಒಟ್ಟು 82.50ಲಕ್ಷ ಖರ್ಚು ಮಾಡಿದೆ ಎಂದು ವರದಿಯಾಗಿದೆ.

  ಮದುವೆಯಾಗಲು ನಿರಾಕರಿಸಿದ ನಟಿಗೆ ಚಾಕು ಇರಿದ ಪ್ರಕರಣ: ಕಂಗನಾ ರಣಾವತ್ ಪ್ರತಿಕ್ರಿಯೆಮದುವೆಯಾಗಲು ನಿರಾಕರಿಸಿದ ನಟಿಗೆ ಚಾಕು ಇರಿದ ಪ್ರಕರಣ: ಕಂಗನಾ ರಣಾವತ್ ಪ್ರತಿಕ್ರಿಯೆ

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ಇದು ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದಾರೆ. 'ಮುನ್ಸಿಪಾಲ್ ಕಾರ್ಪೋರೇಟ್ ಇದುವರೆಗೆ ನನ್ನ ಮನೆಯನ್ನು ನೆಲಸಮ ಮಾಡಲು ವಕೀಲರಿಗೆ 82 ಲಕ್ಷ ಖರ್ಚು ಮಾಡಿದೆ. ಹೆಣ್ಣು ಹುಡುಗಿಗೆ ಕಾಟ ಕೊಡಲು ಪಪ್ಪು ಗ್ಯಾಂಗ್ ಸಾರ್ವಜನಿಕರ ಹಣವನ್ನು ಖರ್ಚು ಮಾಡಿದೆ. ಮಹಾರಾಷ್ಟ್ರ ಇಂದು ಇಲ್ಲಿಯೇ ನಿಂತಿದೆ. ತುಂಬಾ ದುರದೃಷ್ಟಕರ' ಎಂದು ಹೇಳಿದ್ದಾರೆ.

  Mahabharata ಧಾರವಾಹಿ ವೀಕ್ಷಕರಿಗೆ ಕಹಿ ಸುದ್ದಿ | Filmibeat Kannada

  ಬಿಎಂಸಿ ಭಾರತದ ಶ್ರೀಮಂತ ಪುರಸಭೆಯಾಗಿದೆ ಮತ್ತು ನಗರದ ಆಡಳಿತ ಜವಾಬ್ದಾರಿಯನ್ನು ಹೊಂದಿದೆ. ಆದರೆ ಬಿಎಂಸಿ ಮನೆ ಒಡೆಯುವ ಸಮಯದಲ್ಲಿ ದುಬಾರಿ ವರ್ಣಚಿತ್ರಗಳು, ಸಂಗ್ರಹಣೆಗಳು ಮತ್ತು ಅಪರೂಪದ ಪುಸ್ತಕಗಳನ್ನು ಹಾನಿಗೊಳಿಸಿದೆ ಎಂದು ಕಂಗನಾ ಆರೋಪ ಮಾಡಿದ್ದಾರೆ.

  English summary
  Actress Kangana Ranaut slams BMC for spending Rs 82 lakh fees to fight her over demolition case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X