twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್‌ನ ಸೆಲೆಕ್ಟಿವ್ ಸೆಕ್ಯುಲರಿಸಂ ವಿರುದ್ಧ ಕಿಡಿಕಾರಿದ ಕಂಗನಾ

    |

    ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳ ಸೈದ್ಧಾಂತಿಕ ನಿಲುವುಗಳನ್ನು ಟೀಕಿಸುತ್ತಾ ಬಂದಿರುವ ನಟಿ ಕಂಗನಾ ರಣಾವತ್, ಆಯ್ಕೆಯಾಧಾರಿತ ಜಾತ್ಯತೀತತೆ ಪ್ರದರ್ಶಿಸುತ್ತಿದೆ ಎಂದು ಬಾಲಿವುಡ್ ವಿರುದ್ಧ ಕಿಡಿಕಾರಿದ್ದಾರೆ.

    ಜೂನ್ 8ರಂದು ಅನಂತ್ ನಾಗ್ ಜಿಲ್ಲೆಯಲ್ಲಿ ಅಜಯ್ ಪಂಡಿತ ಎಂಬ ಕಾಶ್ಮೀರಿ ಪಂಡಿತ್ ಸಮುದಾಯದ ಸರಪಂಚ್ ಹತ್ಯೆಯ ವಿಚಾರದಲ್ಲಿ ಬಾಲಿವುಡ್ ಮೌನವಹಿಸಿರುವುದನ್ನು ಕಂಗನಾ ಖಂಡಿಸಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಅಜಯ್ ಪಂಡಿತ ಅವರಿಗೆ ನ್ಯಾಯ ಸಿಗಬೇಕು ಎಂದು ಕಂಗನಾ ಆಗ್ರಹಿಸಿದ್ದಾರೆ. ಬೇರೆ ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುವ ಬಾಲಿವುಡ್ ಮಂದಿ ಕಾಶ್ಮೀರಿ ಪಂಡಿತನ ಹತ್ಯೆಗೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ ಎಂದು ಕಂಗನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

    ಜಯಲಲಿತಾ ಕುರಿತ ಚಿತ್ರ ಅಮೆಜಾನ್, ನೆಟ್ ಫ್ಲಿಕ್ಸ್ ಎರಡಕ್ಕೂ ಸೇಲ್: ನಿರ್ಮಾಪಕರು ಸೇಫ್ಜಯಲಲಿತಾ ಕುರಿತ ಚಿತ್ರ ಅಮೆಜಾನ್, ನೆಟ್ ಫ್ಲಿಕ್ಸ್ ಎರಡಕ್ಕೂ ಸೇಲ್: ನಿರ್ಮಾಪಕರು ಸೇಫ್

    ನಾನು ಹಿಂದೂಸ್ತಾನಿ

    ನಾನು ಹಿಂದೂಸ್ತಾನಿ

    ಸಾಮಾಜಿಕ ಜಾಲತಾಣದಲ್ಲಿ ಫಲಕವೊಂದನ್ನು ಹಿಡಿದು ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಕಂಗನಾ, ಸೆಲೆಕ್ಟಿವ್ ಸೆಕ್ಯುಲರಿಸಂ ಪ್ರದರ್ಶಿಸುವ ಬಾಲಿವುಡ್ ಮಂದಿ ವಿರುದ್ಧ ಹರಿಹಾಯ್ದಿದ್ದಾರೆ. 'ನಾನು ಹಿಂದೂಸ್ತಾನಿ, ನನಗೆ ನಾಚಿಕೆಯಾಗುತ್ತಿದೆ. ಅಜಯ್ ಪಂಡಿತಗೆ ನ್ಯಾಯ ಸಿಗಬೇಕು. ಅನಂತ್ ನಾಗ್‌ನಲ್ಲಿ ಕೊಲೆ. ಜಮ್ಮು ಕಾಶ್ಮೀರ' ಎಂದು ಫಲಕದಲ್ಲಿ ಬರೆಯಲಾಗಿದೆ.

    ಬಾಲಿವುಡ್ ಮೌನ

    ಬಾಲಿವುಡ್ ಮೌನ

    'ಬಾಲಿವುಡ್ ಮಂದಿಯಲ್ಲಿ ಮಾನವೀಯತೆಯು ಜಿಹಾದಿ ಅಜೆಂಡಾದ ಬೆಂಬಲವಿದ್ದಾಗ ಮಾತ್ರವೇ ಪುಟಿದೇಳುತ್ತದೆ. ಆದರೆ ಬೇರೆಯವರಿಗೆ ನ್ಯಾಯ ದೊರಕಿಸುವ ವಿಚಾರದಲ್ಲಿ ಅವರು ಸಂಪೂರ್ಣ ಮೌನ ವಹಿಸುತ್ತಾರೆ' ಎಂದು ಕಂಗನಾ ಸಿಟ್ಟಿನಿಂದ ಹೇಳಿದ್ದಾರೆ.

    ವಾವ್..! 48 ಕೋಟಿ ವೆಚ್ಚದ ಕಂಗನಾ ರಣಾವತ್ ಆಫೀಸ್ ಇದುವಾವ್..! 48 ಕೋಟಿ ವೆಚ್ಚದ ಕಂಗನಾ ರಣಾವತ್ ಆಫೀಸ್ ಇದು

    ಪಂಡಿತರಿಗೆ ನ್ಯಾಯ ಸಿಗಬೇಕು

    ಪಂಡಿತರಿಗೆ ನ್ಯಾಯ ಸಿಗಬೇಕು

    'ಕಾಶ್ಮೀರಿ ಪಂಡಿತರನ್ನು ಅವರ ರಾಜ್ಯಕ್ಕೆ ಮರಳಿ ಕಳುಹಿಸಬೇಕು. ಅವರ ಹಕ್ಕಿನಂತೆ ಅವರಿಗೆ ಜಮೀನನ್ನು ಹಿಂದಿರುಗಿಸಬೇಕು. ಅವರಿಗೆಲ್ಲ ನ್ಯಾಯ ಒದಗಿಸಬೇಕು. ಹಾಗೆಯೇ ಅಜಯ್ ಪಂಡಿತ ಅವರ ತ್ಯಾಗ ವ್ಯರ್ಥವಾಗಬಾರದು' ಎಂದಿದ್ದಾರೆ.

    ಪ್ರಧಾನಿ ಮೋದಿಗೆ ಮನವಿ

    ಪ್ರಧಾನಿ ಮೋದಿಗೆ ಮನವಿ

    ಲಿಬರಲ್ಸ್ ಎಂದು ಗುರುತಿಸಿಕೊಳ್ಳುವವರು ಮತ್ತು ಬಾಲಿವುಡ್‌ನ ಸೆಲೆಕ್ಟಿವ್ ಸೆಕ್ಯುಲರಿಸಂ ಅದನ್ನು ಕಂಗನಾ ಖಂಡಿಸಿದ್ದಾರೆ. ಕಾಶ್ಮೀರಿ ಪಂಡಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಹಾಗೆಯೇ ಅವರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲು ಸಹಾಯ ಮಾಡುವಂತೆ ಕೇಳಿದ್ದಾರೆ ಎಂದು ಕಂಗನಾ ಟೀಮ್ ಬರೆದುಕೊಂಡಿದೆ.

    ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ದೂರು ದಾಖಲುಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ದೂರು ದಾಖಲು

    English summary
    Bollywood star Kangana Ranaut slammed bollywood fraternity for their selective secularism and sought justice from Narendra Modi on Ajay Pandita's murder matter.
    Thursday, June 11, 2020, 9:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X