ವೆಬ್ ಸರಣಿ 'ಮಿರ್ಜಾಪುರ್' ಮೇಲೆ ಕಂಗನಾ ಕೆಂಗಣ್ಣು

ವೆಬ್ ಸರಣಿ 'ಮಿರ್ಜಾಪುರ್' ಎರಡನೇ ಸೀಸನ್ ಬಿಡುಗಡೆ ಆಗಿ ಕೆಲವು ದಿನಗಳಷ್ಟೆ ಆಗಿದೆ. ಅಮೇಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಿದ್ದ ಮೊದಲ ಸರಣಿ ಸಖತ್ ಹಿಟ್ ಆಗಿತ್ತು. ಎರಡನೇ ಸರಣಿಯು ಹಿಟ್ ಎನಿಸಿಕೊಂಡಿದೆ.

ಆದರೆ ನಟಿ ಕಂಗನಾ ರಣೌತ್ ಯಾಕೊ 'ಮಿರ್ಜಾಪುರ್' ವೆಬ್ ಸರಣಿ ಮೇಲೆ ತಮ್ಮ ಕೆಂಗಣ್ಣು ಬೀರಿದ್ದಾರೆ. 'ಮಿರ್ಜಾಪುರ್' ಅಂಥಹಾ ವೆಬ್ ಸರಣಿಗಳನ್ನು ಬ್ಯಾನ್ ಮಾಡಬೇಕು ಎಂಬ ಅಭಿಪ್ರಾಯ ಪ್ರಕಟಿಸಿದ್ದಾರೆ.

ಕೆಲವು ದಿನಗಳ ಹಿಂದೆ ಫರೀದಾಬಾದ್‌ನಲ್ಲಿ ತೌಸಿಫ್ ಎಂಬುವನ ಬಂದೂಕಿನ ಗುಂಡಿಗೆ ಬಲಿಯಾದ ನಿಕಿತಾ ತೋಮರ್ ಬಗ್ಗೆ ಟ್ವೀಟ್ ಮಾಡುತ್ತಾ, ಮಿರ್ಜಾಪುರ್ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ ನಟಿ ಕಂಗನಾ ರಣೌತ್.

ನಿಕಿತಾ ಕೊಲೆಗಾರ 'ಮಿರ್ಜಾಪುರ್' ನಿಂದ ಪ್ರೇರಿತನಾಗಿದ್ದನಂತೆ

ನಿಕಿತಾ ಕೊಲೆಗಾರ 'ಮಿರ್ಜಾಪುರ್' ನಿಂದ ಪ್ರೇರಿತನಾಗಿದ್ದನಂತೆ

ನಿಕಿತಾ ತೋಮರ್ ಅನ್ನು ಹಾಡುಹಗಲೆ ಶೂಟ್ ಮಾಡಿ ಕೊಂದ ತೌಸಿಫ್ ಪೊಲೀಸರ ವಿಚಾರಣೆಯಲ್ಲಿ, ತಾನು ಮಿರ್ಜಾಪುರ್ ವೆಬ್ ಸರಣಿಯ 'ಮುನ್ನಾ' ಪಾತ್ರದಿಂದ ಪ್ರೇರಣೆ ಹೊಂದಿ ಕೊಲೆ ಮಾಡಿದೆ ಎಂದು ಹೇಳಿದ್ದಾನೆ. ಹೀಗಾಗಿಯೇ ಕಂಗನಾ ಮಿರ್ಜಾಪುರ್ ವೆಬ್ ಸರಣಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಅಪರಾಧಿಗಳನ್ನು ವೈಭವೀಕರಿಸಿದರೆ ಹೀಗೆಯೇ ಆಗುತ್ತದೆ

ಅಪರಾಧಿಗಳನ್ನು ವೈಭವೀಕರಿಸಿದರೆ ಹೀಗೆಯೇ ಆಗುತ್ತದೆ

ಕ್ರೌರ್ಯವನ್ನು, ಅಪರಾಧಿಗಳನ್ನು ಸಿನಿಮಾ, ವೆಬ್ ಸರಣಿಗಳಲ್ಲಿ ವೈಭವೀಕರಿಸುವುದರಿಂದ ಹೀಗೆಯೇ ಆಗುತ್ತದೆ. ಸ್ಪುರಧ್ರೂಪಿ ಯುವಕರ ಕೈಲಿ ನೆಗೆಟಿವ್ ಪಾತ್ರಗಳನ್ನು ಮಾಡಿಸಲಾಗುತ್ತದೆ, ಅವರನ್ನು ಖಳನಾಯಕ ಎನ್ನುವ ಬದಲಿಗೆ ಪ್ರತಿನಾಯಕ ಎಂದು ಕರೆಯಲಾಗುತ್ತದೆ, ಅದರ ಫ್ರತಿಫಲ ಹೀಗೆ ಆಗುತ್ತದೆ ಎಂದಿದ್ದಾರೆ ಕಂಗನಾ.

'ಬಾಲಿವುಡ್‌ ನಿಂದ ಸಮಾಜದ ಮೇಲೆ ಒಳ್ಳೆ ಪರಿಣಾಮವಾಗಿಲ್ಲ'

'ಬಾಲಿವುಡ್‌ ನಿಂದ ಸಮಾಜದ ಮೇಲೆ ಒಳ್ಳೆ ಪರಿಣಾಮವಾಗಿಲ್ಲ'

ಬಾಲಿವುಡ್‌ ಬಗ್ಗೆಯೂ ಸಿಟ್ಟು ಹೊರಹಾಕಿರುವ ಕಂಗನಾ ರಣೌತ್, 'ಬಾಲಿವುಡ್ ಯಾವಾಗಲೂ ಒಳ್ಳೆಯದಕ್ಕಿಂತಲೂ ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನೇ ಬೀರಿದೆ' ಎಂದಿದ್ದಾರೆ.

Recommended Video

ಅಣ್ಣನನ್ನು ನೆನೆದು ವೇದಿಕೆ ಮೇಲೆ ಕಣ್ಣೀರಿಟ್ಟ Jote Joteyali ಅನು | Filmibeat Kannada
ಶೂಟ್ ಮಾಡಿ ಕೊಲ್ಲುತ್ತಾನೆ ಮುನ್ನಾ

ಶೂಟ್ ಮಾಡಿ ಕೊಲ್ಲುತ್ತಾನೆ ಮುನ್ನಾ

ಮಿರ್ಜಾಪುರ್ ವೆಬ್ ಸರಣಿಯಲ್ಲಿ ತನ್ನನ್ನು ಮದುವೆಯಾಗಲು ನಿರಾಕರಿಸುವ ಯುವತಿಯನ್ನು ಶೂಟ್ ಮಾಡಿ ಕೊಲ್ಲುತ್ತಾನೆ 'ಮುನ್ನಾ' ಪಾತ್ರಧಾರಿ. ಮಿರ್ಜಾಪುರ್ ವೆಬ್ ಸರಣಿಯಲ್ಲಿ ಸಾಕಷ್ಟು ರಕ್ತಪಾತ, ವಿಲನ್‌ಗಳನ್ನು ವೈಭವೀಕರಿಸುವ ದೃಶ್ಯಗಳಿವೆ.

More from Filmibeat

English summary
Actress Kangana Ranaut slams Mirzapur web series for glorifying crime and criminals.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X