For Quick Alerts
  ALLOW NOTIFICATIONS  
  For Daily Alerts

  ಆದಿತ್ಯ ಠಾಕ್ರೆಗೆ ಕರಣ್ ಜೋಹರ್ ಬೆಸ್ಟ್ ಫ್ರೆಂಡ್: ಕಂಗನಾ ತೆರೆದಿಟ್ಟ ಹೊಸ ಸಂಗತಿ

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಹೊಸ ಬೆಳವಣಿಗೆಯಾಗಿದೆ. ಸತತ ಒತ್ತಡ, ಆಗ್ರಹಗಳ ಬಳಿಕ ನಿರ್ದೇಶಕ ಮಹೇಶ್ ಭಟ್ ಅವರ ವಿಚಾರಣೆಗೆ ಕೊನೆಗೂ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ. ಜತೆಗೆ ವಿವಾದಾತ್ಮಕ ನಿರ್ಮಾಪಕ ಕರಣ್ ಜೋಹರ್ ಅವರ ಮ್ಯಾನೇಜರ್‌ಗೆ ಕೂಡ ಸಮನ್ಸ್ ಕಳಹಿಸಲಾಗಿದೆ, ಅಗತ್ಯ ಬಿದ್ದರೆ ಕರಣ್ ಜೋಹರ್ ಅವರನ್ನು ಸಹ ವಿಚಾರಣೆ ಮಾಡಲಾಗುವುದಾಗಿ ಹೇಳಲಾಗಿದೆ.

  ದರ್ಶನ್ ಅಭಿಮಾನಿಗಳು ಫುಲ್ ಹ್ಯಾಪಿ | Roberrt Poster | Filmibeat Kannada

  ಆದರೆ ಮುಂಬೈ ಪೊಲೀಸರ ಈ ಕ್ರಮ ತೀವ್ರ ಟೀಕೆಗೆ ಒಳಗಾಗಿದೆ. ಇಲ್ಲಿ ಆರೋಪ ಬಂದಿರುವುದೇ ಕರಣ ಜೋಹರ್ ಮೇಲೆ. ಆದರೆ ಅವರನ್ನು ವಿಚಾರಣೆ ಮಾಡದೆ ಅವರ ಮ್ಯಾನೇಜರ್ ಅನ್ನು ಕರೆಸಲಾಗಿದೆ. ಇದರಲ್ಲಿಯೇ ಮುಂಬೈ ಪೊಲೀಸರು ಬಾಲಿವುಡ್‌ನ ಪ್ರಭಾವಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಮತ್ತು ತನಿಖೆಯ ದಿಕ್ಕು ತಪ್ಪಿಸುತ್ತಿರುವುದು ಗೊತ್ತಾಗುತ್ತದೆ ಎಂದಿದ್ದಾರೆ.

  ತಾಪ್ಸಿಯನ್ನು 'ಬಿ ಗ್ರೇಡ್' ನಟಿ ಎಂದು ಕರೆದಿದ್ದೇಕೆ?: ಕಂಗನಾ ರಣಾವತ್ ನೀಡಿದ ವಿವರಣೆತಾಪ್ಸಿಯನ್ನು 'ಬಿ ಗ್ರೇಡ್' ನಟಿ ಎಂದು ಕರೆದಿದ್ದೇಕೆ?: ಕಂಗನಾ ರಣಾವತ್ ನೀಡಿದ ವಿವರಣೆ

  ಬಾಲಿವುಡ್‌ನ ಪ್ರಭಾವಿಗಳ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿರುವ ನಟಿ ಕಂಗನಾ ರಣಾವತ್, ಈ ವಿಚಾರವಾಗಿ ನೇರ ಮಹಾರಾಷ್ಟ್ರ ಸರ್ಕಾರದ ವಿರುದ್ಧವೇ ಹರಿಹಾಯ್ದಿದ್ದಾರೆ. ಮುಂದೆ ಓದಿ...

  ಸಮನ್ಸ್ ನೀಡುವುದರಲ್ಲಿಯೂ ಸ್ವಜನಪಕ್ಷಪಾತ

  ಸಮನ್ಸ್ ನೀಡುವುದರಲ್ಲಿಯೂ ಸ್ವಜನಪಕ್ಷಪಾತ

  ಸಮನ್ಸ್ ನೀಡುವುದರಲ್ಲಿಯೂ ಮುಂಬೈ ಪೊಲೀಸರು ನಾಚಿಕೆ ಇಲ್ಲದವರಂತೆ ಸ್ವಜನಪಕ್ಷಪಾತ ಮಾಡಲು ಹೇಗೆ ಸಾಧ್ಯ? ಪೊಲೀಸರು ಕಂಗನಾಗೆ ಸಮನ್ಸ್ ನೀಡಿದ್ದಾರೆಯೇ ವಿನಾ ಆಕೆಯ ಮ್ಯಾನೇಜರ್‌ಗೆ ಅಲ್ಲ. ಆದರೆ ಮುಖ್ಯಮಂತ್ರಿಯ ಮಗನ ಆತ್ಮೀಯ ಗೆಳೆಯನ ಮ್ಯಾನೇಜರ್‌ನನ್ನು ಪ್ರಶ್ನಿಸಲು ಕರೆಸಲಾಗಿದೆ. ಏಕೆ? ಇದರಿಂದ ಸಾಹೇಬರಿಗೆ ಕಷ್ಟವಾಗುತ್ತದೆಯೇ? ಎಂದು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.

  ಸುಶಾಂತ್ ಕೇಸ್‌ನಲ್ಲಿ ಜೋಕ್ ಮಾಡಬೇಡಿ

  ಸುಶಾಂತ್ ಕೇಸ್‌ನಲ್ಲಿ ಜೋಕ್ ಮಾಡಬೇಡಿ

  ಮತ್ತೊಂದು ಟ್ವೀಟ್ ಮಾಡಿರುವ ಕಂಗನಾ, ಕರಣ್ ಜೋಹರ್ ಮ್ಯಾನೇಜರ್‌ಗೆ ಸಮನ್ಸ್ ನೀಡಲಾಗಿದೆ. ಆದರೆ ಆದಿತ್ಯ ಠಾಕ್ರೆ ಅವರ ಬೆಸ್ಟ್ ಫ್ರೆಂಡ್‌ ಕರಣ್ ಜೋಹರ್‌ಗೆ ಅಲ್ಲ. ಮುಂಬೈ ಪೊಲೀಸರೇ, ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನು ನಗೆಪಾಟಲಿಗೀಡು ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ.

  ಅಚ್ಚರಿಯ ಬೆಳವಣಿಗೆ: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ ಶತ್ರುಘ್ನ ಸಿನ್ಹಾಅಚ್ಚರಿಯ ಬೆಳವಣಿಗೆ: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ ಶತ್ರುಘ್ನ ಸಿನ್ಹಾ

  ಕಂಗನಾ ಹೇಳಿದ್ದು ಸತ್ಯ ಇರಬಹುದು- ಸೋನು ನಿಗಂ

  ಕಂಗನಾ ಹೇಳಿದ್ದು ಸತ್ಯ ಇರಬಹುದು- ಸೋನು ನಿಗಂ

  ಸಿನಿಮಾದಲ್ಲಿ ಸಹಿ ಹಾಕಲು ನಿರಾಕರಿಸಿದ್ದಕ್ಕೆ ತನ್ನ ಮೇಲೆ ಮಹೇಶ್ ಭಟ್ ಚಪ್ಪಲಿ ಎಸೆದಿದ್ದರು ಎಂಬ ಸಂಗತಿಯನ್ನು ಕಂಗನಾ ಇತ್ತೀಚೆಗೆ ತಿಳಿಸಿದ್ದರು. ಇದು ಸತ್ಯ ಇರಬಹುದು ಎಂದು ಗಾಯಕ ಸೋನು ನಿಗಂ, ಕಂಗನಾ ಬೆಂಬಲಕ್ಕೆ ಬಂದಿದ್ದಾರೆ. ನಾನು 25-30 ವರ್ಷದಿಂದ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ. ನನಗೆ ಅಂತಹ ಅನುಭವ ಆಗಿಲ್ಲ. ಆದರೆ ಜನರು ಆಕೆಯ ವಿಚಾರವಾಗಿ ಈ ರೀತಿ ಮಾಡಿರಬಹುದು. ಕಂಗನಾ ಹಾಗೆ ಹೇಳುತ್ತಿದ್ದಾರೆ ಎಂದರೆ ನಂಬುತ್ತೇನೆ. ಏಕೆಂದರೆ ಇಂತಹ ಸಂಗತಿಗಳಲ್ಲಿ ಕಥೆ ಹೆಣೆಯಲು ಅವರು ಹುಚ್ಚರಲ್ಲ ಎಂದು ಸೋನು ನಿಗಂ ಹೇಳಿದ್ದಾರೆ.

  ಕಂಗನಾ ರಣಾವತ್ ಬೆಳೆದಿದ್ದೇ ನೆಪೋಟಿಸಂ ಪಿಲ್ಲರ್ ಮೇಲೆ: ನಟಿ ನಗ್ಮಾ ಟೀಕೆಕಂಗನಾ ರಣಾವತ್ ಬೆಳೆದಿದ್ದೇ ನೆಪೋಟಿಸಂ ಪಿಲ್ಲರ್ ಮೇಲೆ: ನಟಿ ನಗ್ಮಾ ಟೀಕೆ

  ತಾಪ್ಸಿ ವಿರುದ್ಧ ವಾಗ್ದಾಳಿ

  ತಾಪ್ಸಿ ವಿರುದ್ಧ ವಾಗ್ದಾಳಿ

  ತಾಪ್ಸಿ ವಿರುದ್ಧ ಕೂಡ ಕಂಗನಾ ಮತ್ತೊಮ್ಮೆ ಗುಡುಗಿದ್ದಾರೆ. ಟಿಆರ್‌ಪಿಗಾಗಿ ನಾಟಕ ಮಾಡಲು ತಮ್ಮಿಂದಾಗದು ಎಂದು ತಾಪ್ಸಿ ಹೇಳಿದ್ದಾರೆ. ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕೆಂದು ಇಡೀ ದೇಶ ಬಯಸಿದ್ದರೆ ಅದನ್ನು ಕೆಡಿಸಲು ತಾಪ್ಸಿ ಅವರ ಅಸ್ತಿತ್ವದಲ್ಲಿಯೇ ಇರದ ವೃತ್ತಿ ಪ್ರಯತ್ನಿಸುತ್ತಿದೆ. ಟಿಆರ್‌ಪಿಗಾಗಿ ಅರ್ಹ ಅಂಶಗಳು, ಮೆದುಳು, ಉತ್ತಮ ತಿಳಿವಳಿಕೆ ಮತ್ತು ಸ್ಪಷ್ಟತೆ ಇರಬೇಕು. ಕಂಗನಾರಂತಹ ಮಹಾನ್ ಮಹಿಳೆಯ ಹೆಣಗಾಟಗಳ ಮೇಲೆ ದಾಳಿ ಮಾಡುತ್ತಿದ್ದೀರಷ್ಟೇ. ಕಂಗನಾ ತನ್ನ ಅದ್ಭುತ ವೃತ್ತಿ ಬದುಕನ್ನು ಉನ್ನತದಲ್ಲಿ ಇರಿಸಿರುವುದಷ್ಟೇ ಅಲ್ಲ, ತನ್ನ ಜೀವವನ್ನು ಅಪಾಯದಲ್ಲಿ ಇರಿಸಿಕೊಂಡಿದ್ದಾರೆ. ಅಂತಹ ಕೆಟ್ಟ ವ್ಯಕ್ತಿಗಳಿಗೆ ನಾಚಿಕೆಯಾಗಬೇಕು ಎಂದು ಕಂಗನಾ ತಂಡ ಹೇಳಿದೆ.

  English summary
  Kangana Ranaut slams Mumbai police for Summoning Karan Johar's manager instead of the producer in Sushant Singh Rajput's case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X