twitter
    For Quick Alerts
    ALLOW NOTIFICATIONS  
    For Daily Alerts

    ಪ್ಲಾಸ್ಟಿಕ್, ಪಿಪಿಇ ಕಿಟ್ ಎಸೆದು ಪರಿಸರ ಹಾಳುಮಾಡಿದ ಕರಣ್ ಧರ್ಮ ಸಂಸ್ಥೆ: ಕಂಗನಾ ಕಿಡಿ

    |

    ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಈಗ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕರಣ್ ಧರ್ಮ ಪ್ರೊಡಕ್ಷನಲ್ಲಿ ನಿರ್ಮಾಣವಾಗುತ್ತಿರುವ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣ ಕಳೆದ ಒಂದು ತಿಂಗಳಿಂದ ಗೋವಾದಲ್ಲಿ ನಡೆಯುತ್ತಿತ್ತು. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾಗೆ ಶಕುನ್ ಭಾತ್ರಾ ಆಕ್ಷನ್ ಕಟ್ ಹೇಳಿದ್ದಾರೆ.

    ಸುಮಾರು ಒಂದು ತಿಂಗಳುಗಳಿಗೂ ಅಧಿಕ ಸಮಯ ಚಿತ್ರತಂಡ ಗೋವಾದಲ್ಲಿ ಬೀಡುಬಿಟ್ಟಿತ್ತು. ಗೋವಾದ ಗೋವಾನ್ ಹಳ್ಳಿಯಲ್ಲಿ ಚಿತ್ರೀಕರಣ ಮಾಡಿದ ಸಿನಿಮಾತಂಡ, ತ್ಯಾಜ್ಯವನ್ನು ಸುಂದರ ಪರಿಸರದ ಮಧ್ಯೆಯೇ ಎಸೆದಿದ್ದಾರೆ. ಕಸದ ರಾಶಿ ನೋಡಿ ಪರಿಸರವಾದಿಗಳು, ಸ್ಥಳಿಯರು ಸಿಟ್ಟಿಗೆದ್ದಿದ್ದಾರೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಕರಣ್ ಜೋಹರ್ ಮತ್ತು ಬಾಲಿವುಡ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಮುಂದೆ ಓದಿ..

    ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಏಕವಚನದ ವಾಗ್ದಾಳಿಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಏಕವಚನದ ವಾಗ್ದಾಳಿ

    ಕರಣ್ ಮತ್ತು ಬಾಲಿವುಡ್ ವಿರುದ್ಧ ಆಕ್ರೋಶ

    ಕರಣ್ ಮತ್ತು ಬಾಲಿವುಡ್ ವಿರುದ್ಧ ಆಕ್ರೋಶ

    ಶಕುನ್ ಭಾತ್ರಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ ಸಿದ್ಧಾರ್ಥ್ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಇಡೀ ಚಿತ್ರತಂಡ ಒಂದು ತಿಂಗಳಕಾಲ ಗೊವಾದಲ್ಲಿ ಬೀಡುಬಿಟ್ಟಿತ್ತು. ಚಿತ್ರತಂಡ ಕಸವನ್ನು ಅಲ್ಲೇ ಎಸೆದು ಪರಿಸರವನ್ನು ಹಾಳು ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಸ್ಥಳಿಯರು ಚಿತ್ರತಂಡ ಮತ್ತು ಕರಣ್ ಜೋಹರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ಲಾಸ್ಟಿಕ್, ಪಿಪಿಇ ಕಿಟ್, ಗ್ಲೌಸ್ ಸೇರಿದಂತೆ ಎಲ್ಲವನ್ನು ಗೋವಾನ್ ಹಳ್ಳಿಯಲ್ಲಿ ಎಸೆದಿದ್ದಾರೆ.

    ಕರಣ್ ವರ್ತನೆ ಭಯಾನಕವಾಗಿದೆ

    ಕರಣ್ ವರ್ತನೆ ಭಯಾನಕವಾಗಿದೆ

    ಕರಣ್ ಜೋಹರ್ ವಿರುದ್ಧ ಮತ್ತೊಂದು ಟ್ವೀಟ್ ಮಾಡಿ, 'ಅವರ ಸೂಕ್ಷ್ಮವಲ್ಲದ ಮತ್ತು ವಿವೇಚನೆಯಿಲ್ಲದ ವರ್ತನೆ ತುಂಬಾ ಭಯಾನಕವಾಗಿದೆ. ಚಲನಚಿತ್ರ ಘಟಕಗಳಿಗೆ ಮಹಿಳೆಯರ ಸುರಕ್ಷತೆ, ಆಧುನಿಕ ಪರಿಸರ ಪರಿಹಾರಗಳು, ಉತ್ತಮ ವೈದ್ಯಕೀಯ ಸೌಲಭ್ಯಗಳು ಮತ್ತು ಕಾರ್ಮಿಕರ ಆಹಾರ ಗುಣಮಟ್ಟದ ಪರಿಶೀಲನೆ ಬಗ್ಗೆ ಕಟ್ಟುನಿಟ್ಟಿನ ನಿಯಮಗಳು ಬೇಕಾಗಿದೆ. ಇದನ್ನೆಲ್ಲ ಪರೀಕ್ಷಿಸಲು ನಮಗೆ ಸರಿಯಾದ ಇಲಾಖೆಯ ಅಗತ್ಯವಿದೆ' ಎಂದು ಹೇಳಿದ್ದಾರೆ.

    English summary
    Kangana Ranaut slams of Karan Johar’s Dharma productions dumping waste in Goan village.
    Wednesday, October 28, 2020, 9:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X