twitter
    For Quick Alerts
    ALLOW NOTIFICATIONS  
    For Daily Alerts

    'ಅವರ ಕೈಗಳಲ್ಲಿ ರಕ್ತ ಅಂಟಿಕೊಂಡಿದೆ, ನಾನು ಯಾವ ಮಟ್ಟದ ಹೋರಾಟಕ್ಕೂ ಸಿದ್ಧ': ಕಂಗನಾ

    By Avani Malnad
    |

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಬಾಲಿವುಡ್‌ನ ಕುಟುಂಬಗಳ ಸ್ವಜನಪಕ್ಷಪಾತ ಮತ್ತು ದರ್ಬಾರಿನ ವಿರುದ್ಧ ಸಿಡಿದೆದ್ದಿರುವ ನಟಿ ಕಂಗನಾ ರಣಾವತ್, ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ. ಇದರಲ್ಲಿ ಸುಶಾಂತ್ ವಿರುದ್ಧ ಮಾಧ್ಯಮಗಳು ಪಕ್ಷಪಾತಿ ಧೋರಣೆ ತೋರಿಸಿದ್ದವು ಎಂದು ಆರೋಪಿಸಿರುವ ಅವರು, ರಾಕೇಶ್ ರೋಷನ್ ಕುಟುಂಬದ ಮೇಲೆಯೂ ಕಿಡಿಕಾರಿದ್ದಾರೆ.

    Recommended Video

    ಸುಶಾಂತ್ ಸಾವು ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದ ಕಂಗನ | Kangana Ranaut | Oneindia Kannada

    'ಒಂದು ಸಲ ನನ್ನನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದ ಜಾವೇದ್ ಅಖ್ತರ್, ರಾಕೇಶ್ ರೋಷನ್ ಮತ್ತು ಅವರ ಕುಟುಂಬದವರು ಬಹಳ ದೊಡ್ಡ ಜನರು. ನೀನು ಅವರಿಗೆ ಕ್ಷಮೆ ಕೋರದೆ ಹೋದರೆ ನಿನಗೆ ಬೇರೆ ಎಲ್ಲಿಯೂ ಹೋಗಲು ದಾರಿಯೇ ಸಿಗುವುದಿಲ್ಲ. ಅವರು ನಿನ್ನನ್ನು ಜೈಲಿಗೆ ಕಳುಹಿಸುತ್ತಾರೆ. ಇಷ್ಟೆಲ್ಲ ನಾಶವಾದ ಬಳಿಕ ನಿನ್ನ ಮುಂದೆ ಉಳಿಯುವುದು ಒಂದೇ ದಾರಿ. ನೀನು ಆತ್ಮಹತ್ಯೆ ಮಾಡಿಕೊಳ್ಳುತ್ತೀಯ ಎಂದು ಹೇಳಿದ್ದರು.

    ಸಾಲು ಸಾಲು ದುರ್ಘಟನೆಗಳು: ಸುಶಾಂತ್ ಸಾವಿನಿಂದ ಮನನೊಂದು ಜೀವ ತೆಗೆದುಕೊಂಡ ಬಾಲಕಿಸಾಲು ಸಾಲು ದುರ್ಘಟನೆಗಳು: ಸುಶಾಂತ್ ಸಾವಿನಿಂದ ಮನನೊಂದು ಜೀವ ತೆಗೆದುಕೊಂಡ ಬಾಲಕಿ

    ನಾನು ಹೃತಿಕ್ ರೋಷನ್‌ಗೆ ಕ್ಷಮೆ ಕೋರದೆ ಹೋದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅವರು ಏಕೆ ಆಲೋಚಿಸಿದ್ದರು? ಅವರು ಕೂಗಾಡಿ ನನ್ನ ಮೇಲೆ ರೇಗಿದ್ದರು. ಅವರ ಮನೆಯಲ್ಲಿ ನಾನು ಗಡಗಡ ನಡುಗಿದ್ದೆ' ಎಂದು ಕಂಗನಾ ಹೇಳಿದ್ದಾರೆ. ಮುಂದೆ ಓದಿ...

    ಸುಶಾಂತ್‌ಗೂ ಆಗಿರಬಹುದು

    ಸುಶಾಂತ್‌ಗೂ ಆಗಿರಬಹುದು

    'ಆ ಜನರು ಸುಶಾಂತ್ ಅವರನ್ನೂ ಕರೆಸಿದ್ದರೇ? ಅಂತಹ ಅಲೋಚನೆಗಳನ್ನು ಸುಶಾಂತ್ ಮನಸಿನಲ್ಲಿಯೂ ಆ ಜನರು ಬಿತ್ತಿದ್ದರೇ? ನನಗೆ ಅದರ ಬಗ್ಗೆ ತಿಳಿದಿಲ್ಲ. ಆದರೆ ಖಂಡಿತವಾಗಿಯೂ ಅವರು ಅದೇ ರೀತಿಯ ಸನ್ನಿವೇಶಕ್ಕೆ ಸಿಲುಕಿದ್ದರು. ಸ್ವಜನಪಕ್ಷಪಾತ ಮತ್ತು ಪ್ರತಿಭೆ ಒಟ್ಟಿಗೆ ಇರಲು ಸಾಧ್ಯವಿಲ್ಲ. ಏಕೆಂದರೆ ಸೂಕ್ತ ಪ್ರತಿಭೆ ಬೆಳೆಯಲು ಅವರು ಬಿಡುವುದಿಲ್ಲ ಎಂದು ಸುಶಾಂತ್ ಒಂದು ಸಂದರ್ಶನದಲ್ಲಿ ಹೇಳಿದ್ದರು. ನಾನೂ ಅದಕ್ಕೆ ನನ್ನನ್ನು ರಿಲೇಟ್ ಮಾಡಿಕೊಳ್ಳಬಲ್ಲೆ. ಹಾಗಾಗಿ ನಾನು ಪ್ರಶ್ನೆಗಳನ್ನು ಎತ್ತುತ್ತಿದ್ದೇನೆ. ಈ ಪರಿಸ್ಥಿತಿಯಲ್ಲಿ ಯಾವ ವ್ಯಕ್ತಿ ಈ ಕೆಲಸ ಮಾಡಿದ್ದರು ಎಂಬುದನ್ನು ತಿಳಿಯಲು ಬಯಸಿದ್ದೇನೆ ಎಂದಿದ್ದಾರೆ.

    ಅವರ ಕೈಯಲ್ಲಿ ನೆತ್ತರು ಅಂಟಿಕೊಂಡಿದೆ

    ಅವರ ಕೈಯಲ್ಲಿ ನೆತ್ತರು ಅಂಟಿಕೊಂಡಿದೆ

    'ಆದಿತ್ಯ ಚೋಪ್ರಾ ಜತೆಗೆ ಸುಶಾಂತ್ ದೊಡ್ಡ ಕಿತ್ತಾಟ ಮಾಡಿಕೊಂಡಿದ್ದರು ಎನ್ನುವುದು ನನಗೆ ಗೊತ್ತು. ನಾನು 'ಸುಲ್ತಾನ್' ಚಿತ್ರ ತಿರಸ್ಕರಿಸಿದ್ದಾಗ ನನ್ನ ಜತೆ ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಅಂದಿನಿಂದಲೂ ನಮ್ಮ ಉದ್ಯಮ ನನ್ನ ವಿರುದ್ಧ ಗುಂಪುಗಟ್ಟಿಕೊಂಡಿದೆ. ನಾನು ಅನೇಕ ಬಾರಿ ನಿಜಕ್ಕೂ ಒಂಟಿಯೆಂದು ಅನಿಸಿದ್ದಿದೆ. ನನಗೆ ಏನಾಗಲಿದೆಯೋ ಎಂಬ ಭಯ ಕಾಡಿದ್ದಿದೆ.

    ಸುಶಾಂತ್ ಸಿಂಗ್ ಆತ್ಮಹತ್ಯೆ ಪೂರ್ವನಿರ್ಧಾರಿತವೇ? ಅನುಮಾನಕ್ಕೆ ಕಾರಣವಾದ ಸಿಬ್ಬಂದಿ ಹೇಳಿಕೆಸುಶಾಂತ್ ಸಿಂಗ್ ಆತ್ಮಹತ್ಯೆ ಪೂರ್ವನಿರ್ಧಾರಿತವೇ? ಅನುಮಾನಕ್ಕೆ ಕಾರಣವಾದ ಸಿಬ್ಬಂದಿ ಹೇಳಿಕೆ

    ಈ ದೊಡ್ಡ ಜನರು ಏಕೆ ಯಾರೊಂದಿಗಾದರೂ ಕೆಲಸ ಮಾಡುವುದಿಲ್ಲ ಎಂದು ಹೇಳುವ ಅಧಿಕಾರ ಹೊಂದಬೇಕು? ಯಾರೊಂದಿಗಾದರೂ ಕೆಲಸ ಮಾಡಬೇಕೋ ಅಥವಾ ಬೇಡವೋ ಎನ್ನುವುದು ನಿಮ್ಮ ಆಯ್ಕೆ. ಆದರೆ ಅದನ್ನು ಜಗತ್ತಿಗೆ ಹೇಳಿ, ಗುಂಪು ಕಟ್ಟಿಕೊಂಡು ಇದನ್ನು ಮಾಡಿದರೆ? ಈ ದಣಿಗಳನ್ನು ಪ್ರಶ್ನಿಸಬೇಕಿದೆ. ಅವರ ಕೈಗಳಲ್ಲಿ ನೆತ್ತರು ಅಂಟಿಕೊಂಡಿದೆ. ಅವರು ಉತ್ತರ ನೀಡಬೇಕಿದೆ. ಈ ಜನರ ಮುಖವಾಡ ಕಳಚಲು ನಾನು ಯಾವ ಹಂತಕ್ಕೆ ಹೋಗಲೂ ಸಿದ್ಧ. ಏಕೆಂದರೆ ಇದುವರೆಗೆ ನಡೆದಿದ್ದು ಸಾಕು.

    ಸುಶಾಂತ್‌ಗೆ ಸಾಧ್ಯವಾಗಲಿಲ್ಲ

    ಸುಶಾಂತ್‌ಗೆ ಸಾಧ್ಯವಾಗಲಿಲ್ಲ

    ಆರಂಭದಲ್ಲಿ ಜನರು ನನ್ನ ಮನೆಗೆ ಬಂದಾಗಿನ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ಆಗ ಅವರಿಗೆ ನೀರು ಕೊಡಲೂ ನನಗೆ ಮುಜುಗರವಾಗುತ್ತಿತ್ತು. ನಾನು ಹೊಂದಿದ್ದ ಒಂದು ಸಂಬಂಧ ಹಾಳಾದ ಬಳಿಕ ಮತ್ತೆ ರಿಲೇಷನ್ ಶಿಪ್ ಬೆಳೆಸುವುದು ಅಥವಾ ಡೇಟಿಂಗ್ ಮಾಡುವುದನ್ನು ಮರೆತೇ ಬಿಟ್ಟೆ. 'ಮಣಿಕರ್ಣಿಕಾ' ಬಿಡುಗಡೆ ಸಂದರ್ಭದಲ್ಲಿಯೂ ಅವರು ನನಗೆ ಏನು ಮಾಡಿದ್ದರು ಎಂದು ನಾನು ಕಲ್ಪಿಸಿಕೊಳ್ಳಬಲ್ಲೆ. ಆದರೆ ಇದನ್ನು ಸಹಿಸಿಕೊಳ್ಳಲು ಬಹುಶಃ ಸುಶಾಂತ್‌ಗೆ ಸಾಧ್ಯವಾಗಲಿಲ್ಲ.

    ಸುಶಾಂತ್ ಯಾರೆಂದು ಗೊತ್ತಾಯಿತು

    ಸುಶಾಂತ್ ಯಾರೆಂದು ಗೊತ್ತಾಯಿತು

    ಅಂತಹ ಕೆಟ್ಟ ಶೋಗಳಲ್ಲಿ (ಕಾಫಿ ವಿತ್ ಕರಣ್) ಸುಶಾಂತ್ ಬಗ್ಗೆ ನಿರಂತವಾಗಿ ಟೀಕಿಸುತ್ತಾ, ಅವರನ್ನು ಸಾಯಿಸಬೇಕು ಎನ್ನುವ ಮತ್ತು ಅವರು ಕಳಪೆ ನಟ ಎನ್ನುವಂತಹ ದಾಳಿಗಳ ನಡುವೆಯೂ ನಿಮ್ಮ 'ಗಲ್ಲಿ ಬಾಯ್'ಗಿಂತಲೂ ಅವರ ಸಿನಿಮಾಗಳು ಹೆಚ್ಚಿನ ಬಿಜಿನೆಸ್ ಗಳಿಸಿದ್ದವು. ಸಲ್ಮಾನ್ ಖಾನ್ ಅವರಂತಹ ಜನರು ಸುಶಾಂತ್ ಸಿಂಗ್ ಎಂದರೆ ಯಾರು ಎಂದು ಕೇಳಿದ್ದರು. ಸುಶಾಂತ್ ಎಂದರೆ ಯಾರು ಎಂಬುದನ್ನು 'ಎಂಎಸ್ ಧೋನಿ' ಚಿತ್ರ ಎಲ್ಲರಿಗೂ ಗೊತ್ತಾಯಿತು. ಇದನ್ನೆಲ್ಲ ನಾವು ತಡೆಯಲೇಬೇಕಾಗಿದೆ.

    ಮಾಧ್ಯಮಗಳಿಂದಲೂ ದಾಳಿ

    ಮಾಧ್ಯಮಗಳಿಂದಲೂ ದಾಳಿ

    ಮಾಧ್ಯಮಗಳೂ ಸುಶಾಂತ್ ಅವರನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸಿದ್ದವು. ನಟನ ಕುರಿತು ಸೂಕ್ತವಲ್ಲದ ಮತ್ತು ತಪ್ಪಾದ ಹೇಳಿಕೆಗಳನ್ನು ಒಳಗೊಂಡ ಲೇಖನಗಳನ್ನು ಪ್ರಕಟಿಸಲಾಗಿತ್ತು ಎಂದು ಹರಿಹಾಯ್ದ ಕಂಗನಾ, ಸುಶಾಂತ್ ಬಗ್ಗೆ ಪ್ರಕಟವಾಗಿದ್ದ ಕೆಲವು ವರದಿಗಳ ಹೆಡ್ಡಿಂಗ್‌ಗಳನ್ನು ಓದಿದರು. ಇಂತಹ ಕುರುಡು ಬರಹಗಳನ್ನು 'ನೆಪೋ ಕಿಡ್ಸ್' ಮೇಲೆ ಏಕೆ ಬರೆಯವುದಿಲ್ಲ ಎಂದು ಪ್ರಶ್ನಿಸಿದರು.

    ನನ್ನನ್ನೂ ಹತ್ತಿಕ್ಕಲು ನೋಡಿದ್ದರು

    ನನ್ನನ್ನೂ ಹತ್ತಿಕ್ಕಲು ನೋಡಿದ್ದರು

    ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಲಕ್ಷ್ಮಿ ಬಾಯಿ ವಿರುದ್ಧ ಕೆಟ್ಟದಾಗಿ ಬರೆದಿದ್ದ ಪತ್ರಕರ್ತನ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ರಾತ್ರೋರಾತ್ರಿ ನಾಲ್ವರು ಹಿರಿಯ ಪತ್ರಕರ್ತರು ಸೇರಿ ನನ್ನ ಚಿತ್ರಗಳನ್ನು ನಿಷೇಧಿಸಬೇಕು ಎಂದು ಘೋಷಿಸಿದರು, ಆದರೆ ಫ್ಲಾಪ್ ಆದರು. ಒಬ್ಬ ಮಹಿಳೆ ವಿರುದ್ಧ ಮೂರು ಸಾವಿರ ಪತ್ರಕರ್ತರು ಗುಂಪು ಕಟ್ಟಿಕೊಂಡಾಗಲೂ ಸಮಾಜ ಏನೂ ಹೇಳಲಿಲ್ಲ, ಕಾನೂನೂ ಹೇಳಲಿಲ್ಲ. ಸಿನಿಮಾ ಬಿಡುಗಡೆಯಾಯಿತು. ಅವರೆಲ್ಲ ಮಾಯವಾದರು ಎಂದು ಲೇವಡಿ ಮಾಡಿದರು.

    8 ಮಂದಿಯನ್ನು ಬಿಟ್ಟು ಎಲ್ಲಾ ಸೆಲಿಬ್ರಿಟಿಗಳನ್ನು ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿದ ಕರಣ್ ಜೋಹರ್8 ಮಂದಿಯನ್ನು ಬಿಟ್ಟು ಎಲ್ಲಾ ಸೆಲಿಬ್ರಿಟಿಗಳನ್ನು ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿದ ಕರಣ್ ಜೋಹರ್

    English summary
    Actress Kangana Ranaut slammed bollywood gang and said Sushant Singh might have faced similar situation that she have gone through.
    Saturday, June 20, 2020, 14:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X