ಒಲಪಿಂಕ್ಸ್‌ನಲ್ಲಿ ದಾಖಲೆ ಬರೆದರೂ ''ಹೆಣ್ಣು ಹುಲಿ''ಯನ್ನೂ ಕೆಣಕಿದ ಕಂಗನಾ..!
ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ವಿನೇಶ್ ಫೋಗಟ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 50 ಕೆ.ಜಿ ಪ್ರಿಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಖ್ಯಾತನಾಮರನ್ನೆಲ್ಲ ನೆಲಕ್ಕುರಿಳಿಸಿ ಭಾರತ ಪ್ರತಿಯೊಬ್ಬರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ನಿಜಾ .. ವಿನೇಶ್ ಫೋಗಟ್ ಈಗ ಅನರ್ಹರಾಗಿದ್ಧಾರೆ. ಕೇವಲ ನೂರೇ ನೂರು ಗ್ರಾಂ ಹೆಚ್ಚಾಗಿದ್ದಕ್ಕೆ ಸ್ಫರ್ಧೆಯಿಂದ ಹೊರ ಬಿದ್ದಿದ್ದಾರೆ.ಆದರೂ ವಿನೇಶ್ ಫೋಗಟ್ ಈ ದೇಶದ ಹೆಣ್ಣು ಹುಲಿ.
ಯಾಕೆಂದರೆ .. ಕಳೆದ 14 ವರ್ಷಗಳಲ್ಲಿ ಕೇವಲ ಮೂರೇ ಮೂರು ಪಂದ್ಯ ಸೋತಿರುವ ಜಪಾನ್‌ನ ಯೂಯಿ ಸುಸಾಕಿಯನ್ನು ಮಣ್ಣು ಮುಕ್ಕಿಸುವುದು ಅಂದರೆ ಅದು ತಮಾಷೆ ಅಲ್ಲ. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್‌ನ ಮೂರು ಬಾರಿ ಕಾಮನ್ ವೆಲ್ತ್ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ಒಕ್ಸಾನಾ ಲಿವೀಚ್ ಅವರನ್ನೂ ಬಗ್ಗು ಬಡಿಯುವುದು ಸುಲಭ ಅಲ್ಲ. ಸೆಮಿಫೈನಲ್ ಪಂದ್ಯದಲ್ಲಿ ಯುಸ್ನಿಲಿಸ್ ಗುಜ್ಮಾನ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸುವುದು ಕೂಡ ಸಾಮಾನ್ಯ ಸಾಧನೆಯಲ್ಲ.

ಹೀಗಾಗಿಯೇ ಇಡೀ ದೇಶ ವಿನೇಶ್ ಫೋಗಟ್ ಅವರ ಈ ಸಾಧನೆಗೆ ಸಲಾಂ ಹೊಡೆಯುತ್ತಿದೆ. ವಿನೇಶ್ ಫೋಗಟ್ ಅವರನ್ನು ಕೊಂಡಾಡುತ್ತಿದೆ. ಆದರೆ, ಕೆಲವರು ಮಾತ್ರ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ವಿನೇಶ್ ಫೋಗಟ್ ಅವರ ಬಗ್ಗೆ ವ್ಯಂಗ್ಯವಾದ ಮಾತುಗಳನ್ನಾಡುತ್ತಿದ್ದಾರೆ. ಉದಾಹರಣೆಗೆ ಕಂಗನಾ ರಣಾವತ್.
ಹೌದು, ವಿನೇಶ್ ಫೋಗಟ್ ನಿನ್ನೆ ಫೈನಲ್ ಪ್ರವೇಶಿಸಿದ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಭಾರತಕ್ಕೆ ಮೊದಲ ಚಿನ್ನ ಸಿಗಲಿ ಎಂದು ನಾನು ಪ್ರಾರ್ಥಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದ ಕಂಗನಾ, ಅದೇ ಫೋಸ್ಟ್‌ನಲ್ಲಿ ಹಿಂದೊಮ್ಮೆ ವಿನೇಶ್ ಫೋಗಟ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಮೋದಿ ನಿನ್ನ ಸಮಾಧಿ ತೋಡಲಾಗುತ್ತದೆ ಎಂದು ಘೋಷಣೆಯನ್ನೂ ಕೂಗಿದ್ದರು. ಆದರೂ ಒಲಪಿಂಕ್ಸ್‌ನಲ್ಲಿ ದೇಶವನ್ನೂ ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಅತ್ಯುತ್ತಮ ತರಬೇತಿ ಸಿಕ್ಕಿದೆ. ಸೌಲಭ್ಯಗಳು ಸಿಕ್ಕಿವೆ. ಇದು ಭಾರತದ ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ಶ್ರೇಷ್ಠ ನಾಯಕನ ಗುಣ ಎಂಬ ಸಾಲುಗಳನ್ನೂ ಗೀಚಿದ್ದಾರೆ.
ಕಂಗನಾ ಅವರ ಈ ಸಾಲುಗಳು ಈಗ ಅನೇಕರನ್ನು ಕೆರಳಿಸಿವೆ. ಯಾಕೆಂದರೆ, ಕಂಗನಾ ಈಗ ಕೇವಲ ಚಿತ್ರರಂಗದ ನಾಯಕಿ ಅಲ್ಲ. ನಿರ್ದೇಶಕಿ ಅಲ್ಲ. ಬದಲಿಗೆ ಸಂಸದೆಯೂ ಹೌದು. ಜವಾಬ್ಧಾರಿಯುತ ಸ್ಥಾನದಲ್ಲಿರುವ ಕಂಗನಾ ರಣಾವತ್, ವಿನೇಶ್ ಫೋಗಟ್ ಅವರ ಈ ಅದ್ವೀತಿಯ ಸಾಧನೆಯನ್ನು ಕೊಂಡಾಡಬೇಕಿತ್ತು, ಆದರೆ ಕೊಂಡಾಡುವ ಬದಲು ಕಂಗನಾ ಇಲ್ಲಿಯೂ ರಾಜಕೀಯ ಬೆರಸುತ್ತಿದ್ದಾರೆ.
ಹೀಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಕಂಗನಾ ವಿರುದ್ಧ ಆಕ್ರೋಶದ ಅಲೆ ಎದ್ದಿದೆ. ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದವರನ್ನು ಹೊಗಳುವ ಬದಲು ನಿಮ್ಮ ಪಕ್ಷದ ನಾಯಕನ ಗುಣಗಾನ ಮಾಡುವ ಅವಶ್ಯಕತೆ ಏನಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ವಿನೇಶ್ ಫೋಗಟ್ ಅವರ ಈ ಐತಿಹಾಸಿಕ ಸಾಧನೆಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಕಾರಣ ಎಂದು ಹೇಳ್ತೀರಾ ಅಂದರೆ ನಿಮಗೇನು ಹೇಳಬೇಕು ಎಂಬ ಮಾತುಗಳನ್ನೂ ಒಂದು ವರ್ಗ ಹೇಳುತ್ತಿದೆ. ಕಂಗನಾ ಅವರನ್ನು ಟ್ರೋಲ್ ಕೂಡ ಮಾಡುತ್ತಿದೆ.



Click it and Unblock the Notifications











