ಗಳಿಕೆಯಲ್ಲಿ ಹಿಂದೆ ಬಿದ್ದ ಕಂಗನಾ ಅಭಿನಯದ 'ಪಂಗಾ': 'ಚಪಾಕ್' ಸಿನಿಮಾಗಿಂತ ಕಡಿಮೆ ಕಲೆಕ್ಷನ್

ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಅಭಿನಯದ ಬಹುನಿರೀಕ್ಷೆಯ ಪಂಗಾ ಸಿನಿಮಾ ನಿನ್ನೆ ದೇಶದಾದ್ಯಂತ ತೆರೆಗೆ ಬಂದಿದೆ. ದೊಡ್ಡ ಮಟ್ಟದಲ್ಲಿ ರಿಲೀಸ್ ಆದ ಪಂಗಾ ಸಿನಿಮಾ ಮೊದಲ ದಿನದ ಕಲೆಕ್ಷನ್ ನಿರೀಕ್ಷೆ ಮಟ್ಟ ಮುಟ್ಟಲಿಲ್ಲ. ದೀಪಿಕಾ ಪಡುಕೋಣೆ ಅಭಿನಯದ ಚಪಾಕ್ ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕುವಲ್ಲಿ ಕಂಗನಾ ಸಿನಿಮಾ ವಿಫಲವಾಗಿದೆ.

ಹೌದು, ಕಂಗನಾ ಅಭಿನಯದ ಪಂಗಾ ಸಿನಿಮಾ ಮೊದಲ ದಿನ 2.50 ಕೋಟಿ ಬಾಚಿಕೊಂಡಿದೆ. ಪಂಗಾ ಸಿನಿಮಾ ದೇಶದಲ್ಲಿ ಒಟ್ಟು 1450 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ವಿದೇಶದಲ್ಲಿ ಸುಮಾರು 450 ಸ್ಕ್ರೀನ್ ಗಳಲ್ಲಿ ಪಂಗಾ ಸಿನಿಮಾ ಪ್ರದರ್ಶನವಾಗುತ್ತಿದೆ. ಒಟ್ಟು 1900 ಚಿತ್ರಮಂದಿರಗಳಲ್ಲಿ ಪಂಗಾ ರಿಲೀಸ್ ಆಗಿದೆ.

ಭಾರಿ ನಿರೀಕ್ಷೆಯೊಂದಿಗೆ ದೊಡ್ಡ ಮಟ್ಟದಲ್ಲಿ ತೆರೆಗೆ ಬಂದ ಪಂಗಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದೆ. ವಿಶೇಷ ಅಂದರೆ ದೀಪಿಕಾ ಪಡುಕೋಣೆ ಅಭಿನಯದ ಚಪಾಕ್ ಸಿನಿಮಾದ ಕಲೆಕ್ಷನ್ ಗಿಂತ ಪಂಗಾ ಸಿನಿಮಾ ಕಲೆಕ್ಷನ್ ಕಡಿಮೆ ಆಗಿದೆ. ಚಪಾಕ್ ಸಿನಿಮಾ ಮೊದಲ ದಿನ 4.77 ಕೋಟಿ ಕಲೆಕ್ಷನ್ ಮಾಡಿತ್ತು.

Kangana Ranaut Starrer Panga Film First Collection Less Than Chapak Film

ಇನ್ನು ಪಂಗಾ ರಿಲೀಸ್ ದಿನವೆ ವರುಣ್ ದವನ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಸ್ಟ್ರೀಟ್ ಡ್ಯಾನ್ಸರ್ 3 ಸಿನಿಮಾ ಕೂಡ ರಿಲೀಸ್ ಆಗಿದೆ. ಸ್ಟ್ರೀಟ್ ಡ್ಯಾನ್ಸರ್ 3 ಮೊದಲ ದಿನ 11 ಕೋಟಿ ಬಾಚಿಕೊಂಡಿದೆ. ಕಂಗನಾ ಅಭಿನಯದ ಈ ಹಿಂದಿನ ಜಡ್ಜ್ ಮೆಂಟಲ್ ಹೈ ಕ್ಯಾ ಸಿನಿಮಾ ಕೂಡ ಪಂಗಾ ಸಿನಿಮಾಗಿಂತ ಹೆಚ್ಚಿನ ಕಲೆಕ್ಷನ್ ಮಾಡಿದೆ.

ಇಂದು ಮತ್ತು ನಾಳೆ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಪಂಗಾ 32 ವರ್ಷದ ವಿವಾಹಿತ ಮಹಿಳೆ ಕಬ್ಬಡಿ ಚಾಂಪಿಯನ್ ಆಗುವ ಕಥೆ ಇದಾಗಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರು ಕಲೆಕ್ಷನ್ ನಲ್ಲಿ ಸಿನಿಮಾ ಚಿತ್ರತಂಡಕ್ಕೆ ತೀರ ನಿರಾಸೆ ಮೂಡಿಸಿದೆ.

More from Filmibeat

English summary
Bollywood Actress Kangana Ranaut starrer Panga film first collection less than Chapak Cinema.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X