For Quick Alerts
  ALLOW NOTIFICATIONS  
  For Daily Alerts

  ಜಯಲಲಿತಾ ಆಯ್ತು, ಇನ್ನೊಂದು ಲೆಜೆಂಡರಿ ಪಾತ್ರಕ್ಕೆ ಸಜ್ಜಾಗುತ್ತಿರುವ ಕಂಗನಾ

  |

  ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಜೀವನ ಆಧರಿಸಿ ತಯಾರಾಗಿರುವ ಚಿತ್ರದಲ್ಲಿ ಕಂಗನಾ ರಣಾವತ್ 'ತಲೈವಿ' ಆಗಿ ಮಿಂಚಿದ್ದಾರೆ. ಸಂಪೂರ್ಣವಾಗಿ ಸಿನಿಮಾ ಮುಗಿದಿದ್ದು, ರಿಲೀಸ್‌ಗೆ ರೆಡಿಯಾಗಿದೆ. ಈ ಚಿತ್ರ ತೆರೆಗೆ ಬರುವುದಕ್ಕೂ ಮೊದಲೇ ಮತ್ತೊಂದು ಮೆಗಾ ಚಿತ್ರಕ್ಕೆ 'ಕ್ವೀನ್' ಕಂಗನಾ ಚಾಲನೆ ಕೊಟ್ಟಿದ್ದಾರೆ.

  ಭಾರತದ ಪ್ರಪ್ರಥಮ ಮಹಿಳಾ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದು, ಈ ಪಾತ್ರಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಇದರ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದಿರಾ ಪಾತ್ರಕ್ಕೆ ಸಿದ್ದತೆ ನಡೆಯುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  ಇಂದಿರಾ ಪಾತ್ರಕ್ಕಾಗಿ ಲುಕ್ ಟೆಸ್ಟ್

  ಇಂದಿರಾ ಪಾತ್ರಕ್ಕಾಗಿ ಲುಕ್ ಟೆಸ್ಟ್

  ಯಾವುದೇ ಪಾತ್ರ ಆಗಲಿ, ಆ ಪಾತ್ರಕ್ಕಾಗಿ ಕಂಗನಾ ರಣಾವತ್ 100 ಪರ್ಸೆಂಟ್ ಕೆಲಸ ಮಾಡ್ತಾರೆ. ಪ್ರತಿಯೊಂದು ವಿಚಾರದಲ್ಲೂ ಆ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸುತ್ತಾರೆ. ಜಯಲಲಿತಾ ಪಾತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ಈಗ ತಲೈವಿ ಮುಗಿಸಿರುವ ಕಂಗನಾ, ಇಂದಿರಾ ಗಾಂಧಿ ಆಗ್ತಿದ್ದಾರೆ. ಈ ಪಾತ್ರಕ್ಕಾಗಿ ಲುಕ್ ಟೆಸ್ಟ್ ಮಾಡಲಾಗಿದೆ. ಇಂದಿರಾ ಪಾತ್ರಕ್ಕೆ ಕಂಗನಾ ಹೇಗೆ ಕಾಣಿಸಿಕೊಳ್ಳಬೇಕು ಎನ್ನುವ ಅಂಶಗಳ ಬಗ್ಗೆ ಪರೀಕ್ಷೆ ನಡೆದಿದೆ. ಈ ವಿಷಯವನ್ನು ಸ್ವತಃ ಕಂಗನಾ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ.

  ಇಂದಿರಾ ಗಾಂಧಿ ಪಾತ್ರದಲ್ಲಿ ನಟಿ ಕಂಗನಾ ರಣಾವತ್ ನಟನೆ?ಇಂದಿರಾ ಗಾಂಧಿ ಪಾತ್ರದಲ್ಲಿ ನಟಿ ಕಂಗನಾ ರಣಾವತ್ ನಟನೆ?

  ಇದು ಬಯೋಪಿಕ್ ಅಲ್ಲ

  ಇದು ಬಯೋಪಿಕ್ ಅಲ್ಲ

  ಇಂದಿರಾ ಗಾಂಧಿ ಪಾತ್ರ ಎಂದಾಕ್ಷಣ ಇದು ಬಯೋಪಿಕ್ ಸಿನಿಮಾ ಎಂದುಕೊಳ್ಳಬೇಡಿ. ಇದು ರಾಜಕೀಯ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಈ ಚಿತ್ರದಲ್ಲಿ ಒಂದು ಪಾತ್ರ ಇಂದಿರಾ ಗಾಂಧಿ. ಇಡೀ ಸಿನಿಮಾ ಈ ಪಾತ್ರದ ಸುತ್ತಾ ಸಾಗುವುದಿಲ್ಲ. ಇದೊಂದು ಕಾಲಘಟ್ಟದ ಚಿತ್ರ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬರುವ ಪಾತ್ರಗಳ ಸುತ್ತ ಕಥೆ ಮಾಡಲಾಗಿದೆ. ಇದರಲ್ಲಿ ಇಂದಿರಾ ಪಾತ್ರವೂ ಒಂದು ಎಂಬ ವಿಷಯ ವರದಿಯಾಗಿದೆ.

  ಇಂದಿರಾ ಪಾತ್ರ ಮಾಡುವ ಆಸೆ ಇತ್ತು

  ಇಂದಿರಾ ಪಾತ್ರ ಮಾಡುವ ಆಸೆ ಇತ್ತು

  ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ನಟಿಸಬೇಕು ಎನ್ನುವುದು ಕಂಗನಾ ರಣಾವತ್ ಅವರಿಗೆ ಮೊದಲಿನಿಂದಲೂ ಆಸೆ ಇತ್ತು. ವೃತ್ತಿ ಜೀವನದ ಆರಂಭದಲ್ಲಿ ಇಂದಿರಾ ಗಾಂಧಿಯಂತೆ ಮೇಕಪ್ ಮಾಡಿ ಫೋಟೋಶೂಟ್ ಸಹ ಮಾಡಿಸಿದ್ದರು. ಆ ಫೋಟೋ ಈಗ ವೈರಲ್ ಆಗಿದೆ. ಒಂದಲ್ಲ ಒಂದು ದಿನ ಈ ಪಾತ್ರ ಮಾಡುತ್ತೇನೆ ಎಂದು ಮನಸ್ಸಿನಲ್ಲಿ ನಿರ್ಧರಿಸಿದ್ದರಂತೆ. ಈಗ, ಆ ಸಮಯ ಬಂದಿದೆ.

  Hamsalekha - ರವಿಚಂದ್ರನ್ ದಾಖಲೆ ಯಾರಿಂದಲೂ ಅಳಿಸೋಕೆ ಸಾಧ್ಯವಿಲ್ಲ | Oneindia Kannada
  ಸಾಯಿ ಕಬೀರ್ ನಿರ್ದೇಶನ

  ಸಾಯಿ ಕಬೀರ್ ನಿರ್ದೇಶನ

  ಇದುವರೆಗೂ ಈ ಚಿತ್ರಕ್ಕೆ ಹೆಸರು ಅಂತಿಮ ಆಗಿಲ್ಲ. ಸದ್ಯಕ್ಕೆ 'ಎಮರ್ಜೆನ್ಸಿ' ಎಂದು ಹೇಳಲಾಗುತ್ತಿದೆ. ಅಂದ್ಹಾಗೆ, ಈ ಚಿತ್ರವನ್ನು ಸಾಯಿ ಕಬೀರ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಕಂಗನಾ ನಟಿಸಿದ್ದ 'ರಿವಾಲ್ವರ್ ರಾಣಿ' ಚಿತ್ರವನ್ನು ಕಬೀರ್ ನಿರ್ದೇಶಿಸಿದ್ದರು. ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಶೀಘ್ರದಲ್ಲೇ ಶೂಟಿಂಗ್ ಆರಂಭಿಸಲಿದ್ದಾರೆ.

  English summary
  Bollywood actress Kangana Ranaut start preparation for Indira Gandhi role in Sai Kabir's next.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X