For Quick Alerts
  ALLOW NOTIFICATIONS  
  For Daily Alerts

  'ತೇಜಸ್' ಮತ್ತು 'ಧಾಕಡ್' ಗಾಗಿ ಕಂಗನಾ ತರಬೇತಿ: ವಿಡಿಯೋ ವೈರಲ್

  |

  ನಟಿ ಕಂಗನಾ ರಣಾವತ್ ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕಳೆದ ನಾಲ್ಕೈದು ತಿಂಗಳಿಂದ ಕಂಗನಾ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ವಿವಾದಗಳ ಮೂಲಕವೇ ಸದ್ದು ಮಾಡುತ್ತಿರುವ ಕಂಗನಾ ಇದೀಗ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ.

  ಇತ್ತೀಚಿಗೆ ತೂಕ ಇಳಿಸಿಕೊಳ್ಳುತ್ತಿರುವುದಾಗಿ ಹೇಳಿ, ಯೋಗ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದ ಕಂಗನಾ ಇದೀಗ ಮುಂದಿನ ಸಿನಿಮಾ ತಯಾರಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮುಂದಿನ ಚಿತ್ರಕ್ಕಾಗಿ ಕಂಗನಾ ಹೇಗೆ ತಯಾರಾಗುತ್ತಿದ್ದಾರೆ ಎಂದು ನೋಡಿ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ.

  ತೂಕ ಇಳಿಸಿಕೊಳ್ಳುತ್ತಿರುವ ನಟಿ ಕಂಗನಾ ರಣಾವತ್: ಫೋಟೋ ವೈರಲ್

  ಆಕ್ಷನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕಂಗನಾ ಆಕ್ಷನ್ ತರಬೇತಿ ಪಡೆಯುತ್ತಿದ್ದಾರೆ. ಅಂದ್ಹಾಗೆ ಕಂಗನಾ ತೇಜಸ್ ಮತ್ತು ದಾಕಡ್ ಸಿನಿಮಾದಲ್ಲಿ ಕಾಣಿಕೊಳ್ಳುತ್ತಿದ್ದಾರೆ. ತೇಜನ್ ಚಿತ್ರದಲ್ಲಿ ಕಂಗನಾ ವಾಯುಪಡೆಯ ಪೈಟಲ್ ಪಾತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ದಾಕಡ್ ಚಿತ್ರದಲ್ಲಿ ಸ್ಪೈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಗಳಿಗಾಗಿ ಕಂಗನಾ ಸಖತ್ ತಯಾರಿ ನಡೆಸುತ್ತಿದ್ದಾರೆ.

  ತರಬೇತಿಯ ವಿಡಿಯೋವನ್ನು ಶೇರ್ ಮಾಡಿ, " ನನ್ನ ಮುಂಬರುವ ಆಕ್ಷನ್ ಸಿನಿಮಾಗಳಾದ ತೇಜಸ್ ಮತ್ತು ದಾಕಡ್ ಗಾಗಿ ನಾನು ತರಬೇತಿ ಪಡೆಯುತ್ತಿದ್ದೇನೆ. ತೇಜಸ್ ಸಿನಿಮಾದಲ್ಲಿ ಸೈನಿಕಳಾಗಿ ಕಾಣಿಸಿಕೊಳ್ಳುತ್ತಿದ್ದೇನೆ, ಧಾಕಡ್ ಚಿತ್ರದಲ್ಲಿ ಸ್ಪೈ ಪಾತ್ರ ಮಾಡುತ್ತಿದ್ದೇನೆ. ಬಾಲಿವುಡ್ ನನಗೆ ಸಾಕಷ್ಟು ನೀಡಿದೆ. ಆದರೆ ಮಣಿಕರ್ಣಿಕಾ ಯಶಸ್ಸಿನ ನಂತರ ನಾನು ಬಾಲಿವುಡ್ ಗೆ ಆಕ್ಷನ್ ನಾಯಕಿ ನೀಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

  ತೇಜಸ್ ಸಿನಿಮಾದ ಚಿತ್ರೀಕರಣ ಡಿಸೆಂಬರ್ ನಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಬಳಿಕ ಧಾಕಡ್ ಸಿನಿಮಾ ಆರಂಭಿಸುವ ಸಾಧ್ಯತೆ ಇದೆ. ಸದ್ಯ ಕಂಗನಾ ಜಯಲಲಿತಾ ಬಯೋಪಿಕ್ ತಲೈವಿಯಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ ಕಾಯುತ್ತಿದೆ.

  English summary
  Kangana Ranaut starts training for her upcoming Tejas and Dhaakad movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X