For Quick Alerts
  ALLOW NOTIFICATIONS  
  For Daily Alerts

  ಆಮೀರ್ ಖಾನ್ ವಿಚ್ಛೇದನದ ಬಗ್ಗೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ

  |

  ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಮೊದಲ ಪತ್ನಿ ರೀನಾ ದತ್ತ ಜೊತೆ 16 ವರ್ಷ ಸಂಸಾರ ನಡೆಸಿ ವಿಚ್ಛೇದನ ನೀಡಿದ ಬಳಿಕ ಆಮೀರ್ ಖಾನ್ ಕಿರಣ್ ರಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2ನೇ ಪತ್ನಿ ಜೊತೆ 16 ವರ್ಷದ ಸಾಂಸಾರಿಕ ಜೀವನದ ಬಳಿಕ ಕಿರಣ್ ರಾವ್ ಅವರಿಂದನೂ ದೂರ ಆಗಿ ಅಚ್ಚರಿ ಮೂಡಿಸಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಆಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನ ವಿಚಾರ ಚರ್ಚೆಯ ಕೇಂದ್ರ ಬಿಂದುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಮೀರ್ ಖಾನ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಹಿಂದು ಯುವತಿಯರನ್ನು ಮದುವೆಯಾಗಿ ಮುಸ್ಲಿಂ ಮಕ್ಕಳನ್ನು ಜಾಸ್ತಿ ಮಾಡುತ್ತಿದ್ದಾರೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  ಇದೀಗ ಆಮೀರ್ ಖಾನ್ ವಿಚ್ಛೇದನ ವಿಚಾರವಾಗಿ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿರುವ ಕಂಗನಾ, ಹಿಂದು ಮತ್ತು ಮುಸ್ಲಿಂ ಅಂತರಧರ್ಮೀಯ ವಿವಾದವಾದರೆ ಮಕ್ಕಳು ಯಾಕೆ ಕೇವಲ ಮುಸ್ಲಿಂ ಧರ್ಮಕ್ಕೆ ಸೇರುತ್ತಾರೆ? ಮಹಿಳೆಯರು ಹಿಂದು ಆಗಿ ಮುಂದುವರೆಯಲು ಯಾಕೆ ಸಾಧ್ಯವಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಮುಂದೆ ಓದಿ..

  ಇನ್ಸ್ಟಾಗ್ರಾಮ್‌ನಲ್ಲಿ ಕಂಗನಾ ಸಖತ್ ಆಕ್ಟೀವ್

  ಇನ್ಸ್ಟಾಗ್ರಾಮ್‌ನಲ್ಲಿ ಕಂಗನಾ ಸಖತ್ ಆಕ್ಟೀವ್

  ಟ್ವಿಟ್ಟರ್ ಮೂಲಕ ಸದಾ ವಾಗ್ವಾದ ನಡೆಸುತ್ತಿದ್ದ ಕಂಗನಾ ಟ್ವಿಟ್ಟರ್‌ನಿಂದ ಬ್ಯಾನ್ ಆದ ಬಳಿಕ ಇನ್ಸ್ಟಾಗ್ರಾಮ್‌ನಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಆಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನದ ಬಗ್ಗೆ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ.

  ಆಮೀರ್ ವಿಚ್ಛೇದನದ ಬಗ್ಗೆ ಕಂಗನಾ ಪ್ರತಿಕ್ರಿಯೆ

  ಆಮೀರ್ ವಿಚ್ಛೇದನದ ಬಗ್ಗೆ ಕಂಗನಾ ಪ್ರತಿಕ್ರಿಯೆ

  "ಒಂದು ಹಂತದಲ್ಲಿ ಪಂಜಾಬ್‌ನಲ್ಲಿ ಹೆಚ್ಚಿನ ಕುಟುಂಬಗಳು ಒಬ್ಬ ಮಗನನ್ನು ಹಿಂದೂ ಮತ್ತು ಇನ್ನೊಬ್ಬ ಮಗನನ್ನು ಸಿಖ್ ಆಗಿ ಬೆಳೆಸುತ್ತಿದ್ದರು. ಆಮೀರ್ ಖಾನ್ ಸರ್ ಅವರ ಎರಡನೇ ವಿಚ್ಛೇದನ ನನಗೆ ಆಶ್ಚರ್ಯವಾಯಿತು. ಅಂತರಧರ್ಮೀಯ ಮದುವೆಯಲ್ಲಿ ಮಕ್ಕಳು ಏಕೆ ಮುಸ್ಲಿಂಮರು ಮಾತ್ರ ಆಗುತ್ತಾರೆ. ಮಹಿಳೆಯರು ಯಾಕೆ ಹಿಂದೂಗಳಾಗಿ ಮುಂದುವರೆಯಲು ಸಾಧ್ಯವಿಲ್ಲ?" ಎಂದು ಪ್ರಶ್ನೆ ಮಾಡಿದ್ದಾರೆ.

  ಬದಲಾಗುತ್ತಿರುವ ಸಮಯವಿದು

  ಬದಲಾಗುತ್ತಿರುವ ಸಮಯವಿದು

  "ಬದಲಾಗುತ್ತಿರುವ ಈ ಸಮಯದಲ್ಲಿ ನಾವು ಇದನ್ನು ಬದಲಾಯಿಸಬೇಕು. ಇದು ಪುರಾತನ ಮತ್ತು ಹಿಂಜರಿತವಾಗಿದೆ. ಒಂದು ಕುಟಂಬದಲ್ಲಿ ಹಿಂದೂ, ಜೈನ, ಬೌದ್ಧ, ಸಿಖ್ ಮತ್ತು ನಾಸ್ತಿಕರು ಒಟ್ಟಿಗೆ ಬದುಕಲು ಸಾಧ್ಯವಾದರೆ ಮುಸ್ಲಿಮರಿಗೆ ಯಾಕೆ ಸಾಧ್ಯವಿಲ್ಲ. ಮುಸ್ಲಿಮರನ್ನು ಮದುವೆಯಾಗಲು ಧರ್ಮ ಯಾಕೆ ಬದಲಾಯಿಸಬೇಕು?" ಎಂದು ಬರೆದುಕೊಂಡಿದ್ದಾರೆ.

  ಟ್ರೋಲ್ ಆಗುತ್ತಿರುವ ಆಮೀರ್ ಖಾನ್

  ಟ್ರೋಲ್ ಆಗುತ್ತಿರುವ ಆಮೀರ್ ಖಾನ್

  ಯಾವುದೇ ವಿಚಾರಕ್ಕೂ ಮೊದಲು ಪ್ರತಿಕ್ರಿಯೆ ನೀಡುವ ನಟಿ ಕಂಗನಾ. ಇದೀಗ ಆಮೀರ್ ಖಾನ್ ವಿಚಾರಕ್ಕೂ ಮಾತನಾಡಿ ಪ್ರಶ್ನೆ ಮಾಡಿದ್ದಾರೆ. ವಿಚ್ಛೇದನದ ಬಳಿಕ ಆಮೀರ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಲವ್ ಜಿಹಾದ್ ಆಮೀರ್ ಖಾನ್ ಸಿನಿಮಾ ನೋಡದಂತೆ ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ.

  ವಿಚ್ಛೇದನದ ಬಳಿಕ ಆಮೀರ್ ಖಾನ್ ಮೊದಲ ಪ್ರತಿಕ್ರಿಯೆ

  ವಿಚ್ಛೇದನದ ಬಳಿಕ ಆಮೀರ್ ಖಾನ್ ಮೊದಲ ಪ್ರತಿಕ್ರಿಯೆ

  ಇನ್ನು ಇಬ್ಬರೂ ದೂರ ಆದ ಬಳಿಕ ಆಮೀರ್ ಖಾನ್ ಮತ್ತು ಕಿರಣ್ ರಾವ್ ಇಬ್ಬರೂ ವಿಡಿಯೋ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇಬ್ಬರು ಅಕ್ಕ-ಪಕ್ಕದಲ್ಲೇ ಕುಳಿತು, ಕೈ ಕೈ ಹಿಡಿದು ವಿಡಿಯೋ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ''ನಮ್ಮ ನಿರ್ಣಯದಿಂದ ಕೆಲವರಿಗೆ ಶಾಕ್ ಆಗಿರಬಹುದು, ಕೆಲವರಿಗೆ ಬೇಸರ ಆಗಿರಬಹುದು. ಆದರೆ ನಾವು ನಿಮಗೆ ಹೇಳಲಿಚ್ಛಿಸುವುದು ಇಷ್ಟೆ ನಾವಿಬ್ಬರೂ ಆರಾಮವಾಗಿದ್ದೇವೆ. ಖುಷಿಯಾಗಿದ್ದೇವೆ. ನಾವು ಈಗಲೂ ಒಂದೇ ಕುಟುಂಬ ಆದರೆ ನಮ್ಮ ಸಂಬಂಧ ತುಸು ಬದಲಾಗಿದೆ ಅಷ್ಟೆ'' ಎಂದು ಅಮೀರ್ ಖಾನ್ ಹೇಳಿದ್ದಾರೆ.

  Rachita Ram Biography | ಬಿಂದಿಯಾ ರಾಮ್ ರಚಿತಾ ರಾಮ್ ಆದ ಕಥೆ | Rachita Ram real Life story | Filmibeat
  2005ರಲ್ಲಿ ಮದುವೆ, 2021ರಲ್ಲಿ ವಿಚ್ಛೇದನ

  2005ರಲ್ಲಿ ಮದುವೆ, 2021ರಲ್ಲಿ ವಿಚ್ಛೇದನ

  ಫೋನ್ ಕಾಲ್ ನಿಂದ ಪ್ರಾರಂಭವಾದ ಪ್ರೀತಿ ಬಳಿಕ ಇಬ್ಬರನ್ನು ಪತಿ-ಪತ್ನಿಯರಾಗಿ ಮಾಡಿತ್ತು. 2005 ಡಿಸೆಂಬರ್ 28ರಂದು ಆಮೀರ್ ಖಾನ್ ಮತ್ತು ಕಿರಣ್ ರಾವ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2011ರಲ್ಲಿ ಬಾಡಿಗೆ ತಾಯಿ ಮೂಲಕ ಮಗ ಅಜಾದ್ ರಾವ್ ಖಾನ್ ರನ್ನು ಸ್ವಾಗತಿಸಿದರು. 16 ವರ್ಷಗಳ ಸುಂದರ ದಾಂಪತ್ಯ ನಡೆಸಿದ ಆಮೀರ್ ಮತ್ತು ಕಿರಣ್ ರಾವ್ ಈಗ ಬೇರೆ ಆಗುವ ನಿರ್ಧಾರ ಮಾಡಿರುವುದು ನಿಜಕ್ಕೂ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

  English summary
  Bollywood Actress Kangana Ranaut strongly reacts to Aamir Khan and Kiran Rao divorce.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X