ಜೈರಾಗೆ ಕಿರುಕುಳ: ಎಚ್ಚರಿಕೆಯ ಸಂದೇಶ ನೀಡಿದ ಕಂಗನಾ
ಬಾಲಿವುಡ್ ನ ಯುವ ನಟಿಗೆ ವಿಮಾನದಲ್ಲಿ ಕಿರುಕುಳ ನೀಡಿರುವ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಹಿಂದಿಯ ಮತ್ತೊಬ್ಬ ನಟಿ ಕಂಗನಾ, ಜೈರಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇತ್ತಿಚೆಗಷ್ಟೇ ವಿಮಾನದಲ್ಲಿ ಪ್ರಯಾಣ ಮಾಡುವಾಗ ನಟಿ ಜೈರಾಗೆ ವ್ಯಕ್ತಿಯೋರ್ವ ಕಿರುಕುಳ ನೀಡಿದ್ದರು ಎಂದು ಆ ನಟಿ ಆರೋಪಿಸಿದ್ದರು. ಆ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದರು. ಆದ್ರೆ, ನಟಿ ಜೈರಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಗರು ಟೀಕಿಸಿದ್ದರು.

ಪ್ರಚಾರಕ್ಕಾಗಿ ಜೈರಾ ಹೀಗೆ ಆರೋಪ ಮಾಡಿದ್ದಾರೆ ಎಂದು ಟ್ರೋಲ್ ಮಾಡಿದ್ದರು. ಇದು ಬರಿ ಸುಳ್ಳು ಆರೋಪ ಎಂದು ಕಾಲೆಳೆದಿದ್ದರು. ಇದನ್ನ ಖಂಡಿಸಿರುವ ನಟಿ ಕಂಗನಾ, ಜೈರಾ ವಿರುದ್ಧ ಕಾಮೆಂಟ್ ಮಾಡುವುದು ಸರಿಯಿಲ್ಲ ಎಂದು ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ.
''ಆಕೆಯ ಪರಿಸ್ಥಿತಿಯಲ್ಲಿ ಇದ್ದುಕೊಂಡು ಯೋಚನೆ ಮಾಡಿದರೇ ಅದರ ನೋವು ಏನು ಎಂಬುದು ಗೊತ್ತಾಗುತ್ತೆ. ಒಂದು ವೇಳೆ ನಾನು ಆ ಜಾಗದಲ್ಲಿ ಇದ್ದಿದ್ದರೇ, ಬಹುಶಃ ಆ ವ್ಯಕ್ತಿಯ ಕಾಲು ಮುರಿದುಬಿಡುತ್ತಿದ್ದೆ'' ಎಂದು ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click it and Unblock the Notifications











