twitter
    For Quick Alerts
    ALLOW NOTIFICATIONS  
    For Daily Alerts

    ಸವಾಲೆಸೆದ ಬೆನ್ನಲ್ಲೆ ಕಂಗನಾ ರಣಾವತ್‌ಗೆ ಆಘಾತ ನೀಡಿದ ಮುಂಬೈ ಪಾಲಿಕೆ

    |

    ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಸರ್ಕಾರ ಹಾಗೂ ಪೊಲೀಸರ ಕ್ರಮವನ್ನು ಖಂಡಿಸಿದ ನಟಿ ಕಂಗನಾ ರಣಾವತ್‌ಗೆ ಮುಂಬೈ ಮಹಾನಗರ ಪಾಲಿಕೆ ಮತ್ತೊಂದು ಆಘಾತ ನೀಡಿದೆ.

    Recommended Video

    Medical ಹಾಗು Industrial ದೃಷ್ಟಿಯಿಂದ Ganja ಕಾನೂನು ಬದ್ಧವಾಗಬೇಕು - Rakesh Adiga | Filmibeat Kannada

    ಮುಂಬೈನಲ್ಲಿರುವ ಕಂಗನಾ ಅವರ ಸಿನಿಮಾ ಕಚೇರಿಯನ್ನು ನೆಲಸಮ ಮಾಡಲು ಮುಂದಾಗಿದ್ದು, ಅಧಿಕಾರಿಗಳ ತಂಡವೂ ಈಗಾಗಲೇ ಕಂಗನಾ ಕಚೇರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದೆ ಎಂದು ಕಂಗನಾ ಆರೋಪಿಸಿದ್ದಾರೆ. ಮುಂದೆ ಓದಿ....

    ಹಿಮಾಚಲ ಪ್ರದೇಶ ಸರ್ಕಾರದಿಂದ ನಟಿ ಕಂಗನಾಗೆ ಭದ್ರತೆ: ಸಿಎಂ ಜೈರಾಮ್ ಠಾಕೂರ್ಹಿಮಾಚಲ ಪ್ರದೇಶ ಸರ್ಕಾರದಿಂದ ನಟಿ ಕಂಗನಾಗೆ ಭದ್ರತೆ: ಸಿಎಂ ಜೈರಾಮ್ ಠಾಕೂರ್

    ಮಣಿಕರ್ಣಿಕಾ ಕಚೇರಿ ಇನ್ಮುಂದೆ ಬರಿ ಕನಸು

    ಮಣಿಕರ್ಣಿಕಾ ಕಚೇರಿ ಇನ್ಮುಂದೆ ಬರಿ ಕನಸು

    ''ನಾನು ಹದಿನೈದು ವರ್ಷಗಳ ಕಠಿಣ ಪರಿಶ್ರಮದ ನಂತರ ಸಂಪಾದಿಸಿದ್ದು ಮುಂಬೈನ ಮಣಿಕರ್ಣಿಕಾ ಸಿನಿಮಾ ಕಚೇರಿ. ನಾನು ನಿರ್ದೇಶಕಿ ಆದ್ಮೇಲೆ ನನಗೆ ಇದ್ದ ಕನಸು ಸ್ವಂತ ಕಚೇರಿ ಮಾಡ್ಬೇಕು ಎನ್ನುವುದು. ಆಗ ನಿರ್ಮಾಣವಾಗಿದ್ದು ಈ ಕಚೇರಿ. ಆದರೆ ಶೀಘ್ರದಲ್ಲೇ ನನ್ನು ಕನಸು ನೆಲಕ್ಕೆ ಉರುಳಲಿದೆ. ಇಂದು ಮುಂಬೈ ಪಾಲಿಕೆಗೆ ಸಂಬಂಧಿಸದ ಕೆಲವು ವ್ಯಕ್ತಿಗಳನ್ನು ನನ್ನ ಕಚೇರಿಗೆ ಭೇಟಿ ನೀಡಿದ್ದಾರೆ'' ಎಂದು ಕಂಗನಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

    ನಾಳೆ ಕಚೇರ ನೆಲಸಮ ಆಗಲಿದೆ

    ನಾಳೆ ಕಚೇರ ನೆಲಸಮ ಆಗಲಿದೆ

    ''ಕೆಲವು ಅಧಿಕಾರಿಗಳು ಬಲವಂತವಾಗಿ ಕಚೇರಿ ಪ್ರವೇಶಿಸಿದ್ದು, ಆಫೀಸ್‌ ಸ್ಥಳವನ್ನು ಅಳತೆ ಮಾಡಿದ್ದಾರೆ. ಪ್ರಶ್ನಿಸಿದ ನೆರೆಹೊರೆಯವರ ವಿರುದ್ಧ ದೌರ್ಜನ್ಯ ಮಾಡಿದ್ದಾರೆ. ನಾಳೆ ನನ್ನೆ ಕಚೇರಿ ನೆಲಸಮ ಆಗಲಿದೆ ಎಂದು ನಾನು ನಿಮಗೆ ತಿಳಿಸುತ್ತಿದ್ದೇನೆ'' ಎಂದು ಕಚೇರಿಯಲ್ಲಿ ಕೆಲವು ಅಧಿಕಾರಿಗಳು ಕುಳಿತಿರುವುದನ್ನು ಕಂಗನಾ ಟ್ವೀಟ್ ಮಾಡಿದ್ದಾರೆ.

    ನಾನು ಬಂದೇ ಬರ್ತೀನಿ, ತಾಕತ್ ಇದ್ದರೆ ತಡೆಯಿರಿ: ನಟಿ ಕಂಗನಾ ಸವಾಲ್ನಾನು ಬಂದೇ ಬರ್ತೀನಿ, ತಾಕತ್ ಇದ್ದರೆ ತಡೆಯಿರಿ: ನಟಿ ಕಂಗನಾ ಸವಾಲ್

    ನನ್ನ ಬಳಿಕ ಎಲ್ಲ ದಾಖಲೆಗಳಿವೆ

    ನನ್ನ ಬಳಿಕ ಎಲ್ಲ ದಾಖಲೆಗಳಿವೆ

    ''ನನ್ನ ಬಳಿ ಎಲ್ಲಾ ದಾಖಲೆಗಳಿವೆ. ಬಿಎಂಸಿ ಅನುಮತಿ ಸೇರಿದಂತೆ ನನ್ನ ಆಸ್ತಿಯಲ್ಲಿ ಯಾವುದೇ ಅಕ್ರಮ ಹಾಗೂ ಕಾನೂನುಬಾಹಿರವಾಗಿ ಏನೂ ಮಾಡಿಲ್ಲ. ಮುಂಬೈ ಪಾಲಿಕೆ ಅಕ್ರಮ ನಿರ್ಮಾಣ ಎನ್ನುವುದಾದರೇ ಅದಕ್ಕೆ ನೋಟಿಸ್ ನೀಡಬೇಕು. ಆದರೆ, ಯಾವುದೇ ನೋಟಿಸ್ ನೀಡದೆ ಇಂದು ನನ್ನ ಕಚೇರಿ ಮೇಲೆ ದಾಳಿ ಮಾಡಿದ್ದು, ನಾಳೆ ನೆಲಸಮ ಮಾಡಲು ಮುಂದಾಗಿದ್ದಾರೆ'' ಎಂದು ನಟಿ ಕಂಗನಾ ಆಕ್ರೋಶ ಹೊರಹಾಕಿದ್ದಾರೆ.

    ಮುಂಬೈ ಪಾಲಿಕೆ ನಡೆಗೆ ನೆಟ್ಟಿಗರು ವಿರೋಧ

    ಮುಂಬೈ ಪಾಲಿಕೆ ನಡೆಗೆ ನೆಟ್ಟಿಗರು ವಿರೋಧ

    ಕಂಗನಾ ರಣಾವತ್ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಮುಂಬೈ ಪಾಲಿಕೆ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಕಷ್ಟಪಟ್ಟು ಸಂಪಾದನೆ ಮಾಡಿರುವ ಆಸ್ತಿಯನ್ನು ಹೇಗೆ ನೆಲಸಮ ಮಾಡುತ್ತಾರೆ ಎಂದು ಪ್ರಶ್ನಿಸಿ ಪ್ರಧಾನಿ ಕಚೇರಿ ಮತ್ತು ಅಮಿತ್ ಶಾ ಅವರನ್ನು ಪ್ರಶ್ನಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಗೂಂಡಾಗಿರಿ ಸರ್ಕಾರ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪಾಕ್ ಆಕ್ರಮಿತ ಮುಂಬೈ ಎಂದ ಕಂಗನಾ

    ಪಾಕ್ ಆಕ್ರಮಿತ ಮುಂಬೈ ಎಂದ ಕಂಗನಾ

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರ ತನಿಖೆಯನ್ನು ಪ್ರಶ್ನಿಸಿದ್ದ ಕಂಗನಾ, ಪಾಕ್ ಆಕ್ರಮಿತ ಮುಂಬೈ ಎಂದು ಸಂಬೋದಿಸಿದ್ದರು. ಇದರಿಂದ ಕಂಗನಾ ವಿರುದ್ಧ ತೀವ್ರ ಟೀಕೆ ವ್ಯಕ್ತವಾಯಿತು. 'ಮುಂಬೈಗೆ ಬರಬೇಡಿ' ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ, 'ಮುಂಬೈಗೆ ನಾನು ಬಂದೇ ಬರ್ತೀನಿ ಯಾರಪ್ಪನಿಂದಲಾದರೂ ಸಾಧ್ಯವಾದರೆ ತಡೆಯಿರಿ' ಎಂದು ಸವಾಲ್ ಹಾಕಿದ್ದರು. ಇದರ ಬೆನ್ನಲ್ಲೆ ಕಂಗನಾ ಕಚೇರಿ ವಿಚಾರದಲ್ಲಿ ಈ ಬೆಳವಣಿಗೆ ನಡೆದಿರುವುದು ಅನುಮಾನಕ್ಕೆ ಎಡೆ ಮಾಡಿದೆ.

    English summary
    Bollywood actress Kangana Ranaut syaing BMC officials will be Demolishing her Mumbai office, Watch Video.
    Tuesday, September 8, 2020, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X