For Quick Alerts
  ALLOW NOTIFICATIONS  
  For Daily Alerts

  ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಏಕವಚನದ ವಾಗ್ದಾಳಿ

  |

  ಮಹಾರಾಷ್ಟ್ರ ಸರ್ಕಾರ, ಶಿವಸೇನೆ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ ನಟಿ ಕಂಗನಾ ರಣೌತ್.

  ಸುಶಾಂತ್ ಸಿಂಗ್ ಸಾವಿನ ನಂತರ ಕಂಗನಾ ರಣೌತ್ ಸತತವಾಗಿ ಒಬ್ಬರಲ್ಲಾ-ಒಬ್ಬರ ಮೇಲೆ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಬಾಲಿವುಡ್‌ ಸ್ಟಾರ್‌ಗಳು, ಮಹಾರಾಷ್ಟ್ರ ಸರ್ಕಾರ, ಶಿವಸೇನಾ ಪಕ್ಷ ಮುಖಂಡರು, ಕಾಂಗ್ರೆಸ್ ಪಕ್ಷದ ಮೇಲೆ ವಿಡಿಯೋ ಮೂಲಕ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ ಕಂಗನಾ.

  ಕಂಗನಾ ರಣೌತ್ ಜೊತೆಗೆ ಕೆಲಸ ಮಾಡುವ ಕಷ್ಟ ಬಿಚ್ಚಿಟ್ಟ ನಿರ್ದೇಶಕ

  ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದಿದ್ದ ಕಂಗನಾ ವಿರುದ್ಧ ಮುಂಬೈ ಮಹಾನಗರ ಪಾಲಿಕೆಯು ಪರೋಕ್ಷವಾಗಿ ಶಿಸ್ತು ಕ್ರಮ ಜರುಗಿಸಿತು. ಕಂಗನಾ ಗೆ ಸೇರಿದ್ದ ಕಚೇರಿಯನ್ನು ಒಡೆದು ಹಾಕಿತು ಬಿಎಂಸಿ. ನಂತರ ಮುಂಬೈನಿಂದ ಹಿಮಾಚಲಕ್ಕೆ ತೆರಳಿರುವ ಕಂಗನಾ ಕೆಲವು ಸಮಯದ ಬಿಡುವಿನ ಬಳಿಕ ಮತ್ತೆ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದು, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯನ್ನು ಏಕವಚನದಲ್ಲಿ ಬೈದಿದ್ದಾರೆ. ಸೋನಿಯಾ-ರಾಹುಲ್ ಹೆಸರನ್ನೂ ಸಹ ಪ್ರಸ್ತಾಪಿಸಿದ್ದಾರೆ.

  ಠಾಕ್ರೆ ನೀನು ನನ್ನನ್ನು ಬೈದಿದ್ದೀಯ: ಕಂಗನಾ

  ಠಾಕ್ರೆ ನೀನು ನನ್ನನ್ನು ಬೈದಿದ್ದೀಯ: ಕಂಗನಾ

  ವಿಡಿಯೋದಲ್ಲಿ ಮಾತನಾಡಿರುವ ಕಂಗನಾ, ಉದ್ಧವ್ ಠಾಕ್ರೆ, ನೀನು ನಿನ್ನೆ ನಿನ್ನ ಭಾಷಣದಲ್ಲಿ ನನ್ನನ್ನು ಬೈದಿದ್ದೀಯಾ. ನನ್ನನ್ನು 'ನಮಕ್ ಹರಾಮ್' ಎಂದಿದ್ದೀಯಾ. ಇದಕ್ಕೆ ಮುನ್ನಾ ಸಹ ಸೋನಿಯಾ ಸೇನೆಯು ನನಗೆ ಕೆಟ್ಟದಾಗಿ ಬೈದಿದ್ದಾರೆ. ನನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಮಹಿಳಾ ಸಶಸ್ತ್ರೀಕರಣದ ಬಗ್ಗೆ ಮಾತನಾಡುವವರು ಈ ಬಗ್ಗೆ ಗಮನ ಹರಿಸುವುದಿಲ್ಲ' ಎಂದಿದ್ದಾರೆ ಕಂಗನಾ.

  'ಹಿಮಾಚಲ ಪ್ರದೇಶವನ್ನೂ ಬೈದಿದ್ದಾನೆ ಉದ್ಧವ್ ಠಾಕ್ರೆ'

  'ಹಿಮಾಚಲ ಪ್ರದೇಶವನ್ನೂ ಬೈದಿದ್ದಾನೆ ಉದ್ಧವ್ ಠಾಕ್ರೆ'

  ನನ್ನನ್ನು ಬೈದ ನಂತರ ದೇವಿ ಪಾರ್ವತಿ ಜನ್ಮಭೂಮಿಯಾದ ಹಿಮಾಚಲ ಪ್ರದೇಶವನ್ನು, ಶಿವನ ಕರ್ಮಭೂಮಿ ಎಂದು ಕರೆಯಲ್ಪಡುವ ಹಿಮಾಚಲ ಪ್ರದೇಶವನ್ನು ನೀವು ಅತ್ಯಂತ ತುಚ್ಛ ಭಾಷೆಯಲ್ಲಿ ಬೈದಿದ್ದೀರಿ. ಒಬ್ಬ ಸಿಎಂ ಆಗಿ ನೀವು ಇಡೀಯ ರಾಜ್ಯದ ಗೌರವ ಕಳೆದಿದ್ದೀರಿ. ನಿಮಗೆ ನನ್ನ ಮೇಲೆ ಸಿಟ್ಟಿದೆ, ನಾನು ನಿಮ್ಮ ಮಗನ ವಯಸ್ಸಿನವಳು ಅಷ್ಟೆ' ಎಂದಿದ್ದಾರೆ ಕಂಗನಾ.

  ಕಂಗನಾ ವಿರುದ್ಧ ಮತ್ತೊಂದು ದೇಶದ್ರೋಹ ಪ್ರಕರಣ ದಾಖಲು: ಜೈಲಿಗೆ ಹೋಗಲು ಸಿದ್ಧ ಎಂದ ನಟಿ

  'ಮುಂಬೈ ನಲ್ಲಿ ಸ್ವತಂತ್ರ್ಯ ಕಾಶ್ಮೀರದ ಘೋಷಣೆ ಮೊಳಗಿತ್ತು'

  'ಮುಂಬೈ ನಲ್ಲಿ ಸ್ವತಂತ್ರ್ಯ ಕಾಶ್ಮೀರದ ಘೋಷಣೆ ಮೊಳಗಿತ್ತು'

  'ಮುಂಬೈನಲ್ಲಿ ಸ್ವತಂತ್ರ್ಯ ಕಾಶ್ಮೀರದ ಘೋಷಣೆಗಳು ಮೊಳಗಿದ್ದವು. ಆಗ ನಿಮ್ಮದೇ ಸೋನಿಯಾ ಸೇನೆ ಅದನ್ನು ಸಮರ್ಥಿಸಿಕೊಂಡಿದ್ದರು. ಹಾಗಾಗಿ ನಾನು ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದೆ. ಆಗ ಸಂವಿಧಾನ ರಕ್ಷಕರು ಎದ್ದೆದ್ದು ನನ್ನ ವಿರುದ್ಧ ಬಂದಿದ್ದರು' ಎಂದಿದ್ದಾರೆ ಕಂಗನಾ.

  ಕತ್ತಿ ಹಿಡಿದು ಕುದುರೆ ಏರಿದ ಶ್ರೀಲೀಲಾ ಲುಕ್ ನೋಡಿ ಎಲ್ಲರೂ ಶಾಕ್ | SreeLeela Photoshoot | Filmibeat Kannada
  ಭಾರತವನ್ನು ಪಾಕಿಸ್ತಾನದ ಜೊತೆಗೆ ಹೋಲಿಸಿದ್ದೀರಾ: ಕಂಗನಾ

  ಭಾರತವನ್ನು ಪಾಕಿಸ್ತಾನದ ಜೊತೆಗೆ ಹೋಲಿಸಿದ್ದೀರಾ: ಕಂಗನಾ

  ಆದರೆ, ನಿನ್ನೆ ನೀವು ಮಾಡಿದ ಭಾಷಣದಲ್ಲಿ ಭಾರತವನ್ನು ಪಕ್ಕದ ಪಾಕಿಸ್ತಾನದ ಜೊತೆಗೆ ಮಾಡಿದ್ದೀರಿ, ಆದರೆ ಈಗ ಆ ಸಂವಿಧಾನ ರಕ್ಷಕರು ಮುಂದೆ ಬರುವುದಿಲ್ಲ ಏಕೆಂದರೆ ಅವರ ಬಾಯಲ್ಲಿ ಯಾರೂ ಸಹ ಹಣ ತುರುಕಿಲ್ಲ. ಒಬ್ಬ ಸಿಎಂ ಸಾರ್ವಜನಿಕವಾಗಿ ಒಬ್ಬ ಯುವತಿಯನ್ನು ಬೈದಿದ್ದಾರೆ ಆದರೆ ಈ ಬಗ್ಗೆ ಯಾರೂ ಸಹ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ನಟಿ ಕಂಗನಾ.

  ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಅತ್ಯಾಚಾರ ಬೆದರಿಕೆ

  English summary
  Kangana Ranaut talks about Maharashtra CM and Sonia Gandhi. She said Maharashtra CM talked badly about her and Himachal Pradesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X