Lok Sabha Election 2024 ; ಕುಣಿಕುಣಿದಾಡಿದ ಕಂಗನಾ, ಕೊನೆಗೂ ನನಸಾಯಿತು ಬಾಲಿವುಡ್ ಕ್ವೀನ್ ಕನಸು..!
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರಭಾವಕ್ಕೊಳಗಾದವರಲ್ಲಿ ಕಂಗನಾ ರಣಾವತ್ ಪ್ರಮುಖರು ಹಾಗೂ ಮೊದಲಿಗರು. ಹಿಂದುತ್ವವನ್ನ ಕಣ ಕಣದಲ್ಲಿಯೂ ತುಂಬಿಕೊಂಡಿರುವ ಕಂಗನಾ ಹಾಗೇ ನೋಡಿದರೆ ಯಾವತ್ತೋ ರಾಜಕೀಯಕ್ಕೆ ಬರಬೇಕಿತ್ತು. ಅದಕ್ಕೆ ಅಷ್ಟೇ ಕಸರತ್ತನ್ನ ಬಾಲಿವುಡ್ ನ ಈ ಕ್ವೀನ್ ಮಾಡಿದ್ದರು ಕೂಡ.
ಆದರೆ ಈ ಹತ್ತು ವರ್ಷದಲ್ಲಿ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಇನ್ ಫ್ಯಾಕ್ಟ್ ಇವರ ದೇಶ ಪ್ರೇಮ ಜಗಜ್ಜಾಹೀರಾಗಲು ಸಮಯ ಬೇಕಿತ್ತು. ಇದೀಗ ಆ ಸಮಯ ಪೂರ್ಣಗೊಂಡಿದೆ. ಕಾಲ ಚಕ್ರ ಉರುಳಿದಂತೆ ರಾಜಕೀಯಕ್ಕೆ ಧುಮುಕಲು ಕಾಲ ಕೂಡ ಕೂಡಿ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೊನ್ನೆವರೆಗೆ ಬಿಜೆಪಿಯ ಅನಧಿಕೃತ ವಕ್ತಾರರಾಗಿದ್ದ ಕಂಗನಾ ಅವರನ್ನ ಈಗ ಬಿಜೆಪಿ ಪಕ್ಷ ಅಧಿಕೃತವಾಗಿ ಬರಮಾಡಿಕೊಂಡಿದೆ. ರತ್ನ ಗಂಬಳಿಯನ್ನ ಹಾಕಿ ಸ್ವಾಗತವನ್ನೂ ಕೋರಿದೆ. ವರ್ಷಗಳಿಂದ ಸರ್ಕಸ್ ಮಾಡ್ತಿದ್ದ ಕಂಗನಾಗೆ ಕೊನೆಗೂ ಚುನಾವಣೆಯ ಟಿಕೆಟ್ ಸಿಕ್ಕಿದೆ.

ಹೌದು. ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಬಾಹುಬಲಿಗಳ ಹೆಸರನ್ನ ಐದನೇ ಬಾರಿ ಇಂದು ಬಿಜೆಪಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ 111 ಅಭ್ಯರ್ಥಿಗಳ ಹೆಸರುಗಳಿವೆ. ಆದರೆ ಆ 111 ಅಭ್ಯರ್ಥಿಗಳಲ್ಲಿ ಎಲ್ಲರ ಕಣ್ಣು ಕುಕ್ಕಿದ್ದು ಕಂಗನಾ ಹೆಸರು ಮಾತ್ರ.
ಅಂದ್ಹಾಗೇ ಕಂಗನಾ ಹುಟ್ಟಿದ್ದು ಬೆಳೆದಿದ್ದು ಹಿಮಾಚಲ ಪ್ರದೇಶದಲ್ಲಿ. 55.650 ಕಿ.ಮೀನಷ್ಟು ವಿಸ್ತಾರ ಪ್ರದೇಶವನ್ನೊಂದಿರುವ ಹಿಮಾಚಲದ ಪ್ರತಿಯೊಂದು ಸಮಸ್ಯೆ ಕಂಗನಾಗೆ ಗೊತ್ತು. ಈ ಕಾರಣಕ್ಕೆ ಹಿಮಾಚಲ ಪ್ರದೇಶದಿಂದನೇ ಬಿಜೆಪಿ ಇವರನ್ನ ಕಣಕ್ಕಿಳಿಸಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಕಂಗನಾ ರಣಾವತ್ ಅವರನ್ನ ಕಣಕ್ಕಿಳಿಸಿದೆ. ಸಹಜವಾಗಿ ಈ ಸುದ್ದಿ ಕೇಳಿ ಕಂಗನಾ ರಣಾವತ್ ಸದ್ಯಕ್ಕೆ ಕ್ಲೌಡ್ ನೈನ್ ನಲ್ಲಿದ್ದಾರೆ. ಕಂಗನಾ ಅವರ ಅಸಂಖ್ಯಾತ.. ಅಗಣಿತ ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ.

ಟಿಕೆಟ್ ಟು ಪಾಲಿಟಿಕ್ಸ್ ಸಿಕ್ಕ ಬೆನ್ನಲ್ಲಿಯೇ, ತಮ್ಮ ಮನದ ಮಾತುಗಳಿಗೆ ಅಕ್ಷರದ ರೂಪವನ್ನ ಕೊಟ್ಟಿರುವ ಕಂಗನಾ, ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲು ನನಗೆ ಸಿಕ್ಕಾಪಟ್ಟೆ ಖುಷಿಯಾಗುತ್ತಿದೆ. ನಾನು ಯೋಗ್ಯ ಕಾರ್ಯಕರ್ತೆ ಮತ್ತು ವಿಶ್ವಾಸಾರ್ಹ ಸಾರ್ವಜನಿಕ ಸೇವಕಿಯಾಗಲು ತುದಿಗಾಲಿನಲ್ಲಿ ನಿಂತಿದ್ದೇನೆ ಎಂದಿದ್ದಾರೆ
ಇದೇ ಸೂಕ್ತ ಸಮಯ ಅಂದಿದ್ದ ಕಂಗನಾ..
ಇತ್ತೀಚೆಗಷ್ಟೇ ಟಿವಿ 09ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ' ಕಾನ್ಕ್ಲೇವ್ನ ಸಂವಾದದಲ್ಲಿ ಭಾಗಿಯಾಗಿದ್ದ ಕಂಗನಾ, ದೇಶಕ್ಕಾಗಿ ಏನನ್ನಾದರೂ ಮಾಡಲು ನನಗೆ ಸೀಟ್ ಆಗಲಿ ಟಿಕೆಟ್ ಆಗಲಿ ಅಥವಾ ಅಧಿಕಾರ ಆಗಲಿ ಯಾವುದು ಬೇಕಿಲ್ಲ ಎಂದಿದ್ದರು. ನಾನು ನಟಿಯಾಗಿಯೇ ರಾಜಕೀಯ ಪಕ್ಷಗಳನ್ನ ಎದುರು ಹಾಕಿಕೊಂಡಿದ್ದೇನೆ ಎಂದಿದ್ದ ಕಂಗನಾ ಇದೇ ಸಮಯದಲ್ಲಿ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದರು.
ನಾನು ರಾಜಕೀಯಕ್ಕೆ ಬರಬೇಕು ಎಂದರೆ ಇದು ಸರಿಯಾದ ಸಮಯ ಎಂದಿದ್ದರು. ಕಂಗನಾ ಅವರ ಈ ಮಾತುಗಳನ್ನ ಕೇಳಿದ್ದ ಅನೇಕರು ಅವತ್ತೇ ಈ ಬಾರಿ ಕಂಗನಾ ಚುನಾವಣೆಯ ಕಣಕ್ಕಿಳಿಯುವ ಖಚಿತ ನಿಶ್ಚಿತ ಎಂಬ ಭವಿಷ್ಯವಾಣಿ ನುಡಿದಿದ್ದರು. ಆ ಭವಿಷ್ಯವಾಣಿ ಈಗ ನಿಜವಾಗಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಂಗನಾಗೆ ಟಿಕೆಟ್ ಸಿಕ್ಕಿದೆ.
ಒಟ್ನಲ್ಲಿ ಸದ್ಯಕ್ಕೆ ಕಂಗನಾ ಕನಸು ನನಸಾಗಿದೆ. ಹಿಮಾಚಲ ಪ್ರದೇಶದ ಮಂಡಿಯಿಂದ ಕಂಗನಾಗೆ ಟಿಕೆಟ್ ಸಿಕ್ಕಿದೆ. ಚಿತ್ರರಂಗದಲ್ಲಿ ಮೋಡಿ ಮಾಡಿದ ಕಂಗನಾ, ಪೊಲಿಟಿಕಲ್ ಫೀಲ್ಡ್ ನಲ್ಲಿಯೂ ಮೋಡಿ ಮಾಡ್ತಾರಾ..? ಸ್ವಜನಪಕ್ಷಪಾತ ಹಾಗೂ ಹಿಂದಿ ಚಿತ್ರರಂಗದ ರಾಜಕೀಯದ ಬಗ್ಗೆ ಧ್ವನಿ ಎತ್ತಿ ರೆಬೆಲ್ ಹೀರೋಯಿನ್ ಅನಿಸಿಕೊಂಡ ಕಂಗನಾ, ರಾಜಕೀಯದಲ್ಲಿಯೂ ರೆಬೆಲ್ ಆಗ್ತಾರಾ..? ಲೆಟ್ಸ್ ಸೀ..!


Click it and Unblock the Notifications











