»   » ನಿರ್ದೇಶಕಿ ಆಗಲಿದ್ದಾರೆ ಬಾಲಿವುಡ್ 'ಕ್ವೀನ್' ಕಂಗನಾ ರಣಾವತ್

ನಿರ್ದೇಶಕಿ ಆಗಲಿದ್ದಾರೆ ಬಾಲಿವುಡ್ 'ಕ್ವೀನ್' ಕಂಗನಾ ರಣಾವತ್

Posted By:
Subscribe to Filmibeat Kannada

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಪ್ರತಿಭಾವಂತ ನಟಿ ಎನ್ನುವುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ತಮ್ಮ ಅಮೋಘ ನಟನೆಗೆ ಅವರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ ಈಗ ಕಂಗನಾ ಒಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕಿ ಆಗುವುದಕ್ಕೆ ಹೊರಟಿದ್ದಾರೆ.

ಹೃತಿಕ್ ರೋಷನ್ ಬಗ್ಗೆ ಬೆಚ್ಚಿಬೀಳಿಸುವ ಸಂಗತಿ ಬಿಚ್ಚಿಟ್ಟ ಕಂಗನಾ

ಯಶಸ್ವಿ ನಾಯಕಿ ಆಗಿರುವ ಕಂಗನಾ ಈಗ ನಿರ್ದೇಶಕಿ ಆಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಹಿಂದೆಯೇ ಕಂಗನಾ ತಮಗೆ ನಿರ್ದೇಶನದಲ್ಲಿ ಆಸಕ್ತಿ ಇದೆ ಎಂದು ಹೇಳಿಕೊಂಡಿದ್ದರು. ಅದೇ ರೀತಿ ಈಗ ಚಿತ್ರವೊಂದನ್ನು ನಿರ್ದೇಶನ ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ. ತಮ್ಮ ಮೊದಲ ಸಿನಿಮಾವನ್ನು ಕಂಗಾನ ಮಕ್ಕಳ ಚಿತ್ರದ ಮೂಲಕ ಶುರು ಮಾಡುತ್ತಿರುವುದು ವಿಶೇಷವಾಗಿದೆ.

Kangana Ranaut to make her directinon debut through 'Theju' movie.

ಸದ್ಯ ಕಂಗನಾ ನಟನೆಯ 'ಸಿಮ್ರನ್' ಸಿನಿಮಾ ಬಿಡುಗಡೆಯ ಹಂತದಲ್ಲಿದೆ. ಆ ಚಿತ್ರದ ನಂತರ 'ಮಣಿಕರ್ಣಿಕಾ' ಸಿನಿಮಾ ಶುರುವಾಗಿದೆ. ಈ ಎರಡು ಚಿತ್ರದ ಬಳಿಕ ಕಂಗನಾ ಮಕ್ಕಳ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾಗೆ 'ತೇಜು' ಎಂಬ ಟೈಟಲ್ ಇಡಲಾಗಿದ್ದು, ಸದ್ಯ ಚಿತ್ರದ ಚಿತ್ರಕಥೆಯ ತಯಾರಿ ನಡೆಯುತ್ತಿದೆ.

English summary
Bollywood actress Kangana Ranaut to make her directinon debut through 'Theju' movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada