For Quick Alerts
  ALLOW NOTIFICATIONS  
  For Daily Alerts

  ಕರೀನಾ ಬದಲು ಸೀತೆ ಪಾತ್ರಕ್ಕೆ ಆಯ್ಕೆಯಾದ ನಟಿ ಕಂಗನಾ: ಚಿತ್ರದ ಬಗ್ಗೆ ಹೇಳಿದ್ದೇನು?

  |

  ಖ್ಯಾತ ನಿರ್ದೇಶಕ ರಾಜಮೌಳಿ ತಂದೆ, ಬರಹಗಾರ ಕೆ.ವಿ ವಿಜಯೇಂದ್ರ ಪ್ರಸಾದ್ ಅವರ 'ಸೀತಾ' ಸಿನಿಮಾ ಕಳೆದ ಕೆಲವು ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಸೀತೆಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಜೋರಾಗಿತ್ತು. ಇತ್ತೀಚಿಗಷ್ಟೆ ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಕರೀನಾ ಪಾತ್ರಕ್ಕಾಗಿ ಬರೋಬ್ಬರಿ 12 ಕೋಟಿ ರೂ. ಬೇಡಿಕೆ ಇಟ್ಟರು ಎನ್ನುವ ಕಾರಣಕ್ಕೆ ಸಿನಿಮಾದಿಂದ ಕೈಬಿಡಲಾಗಿದೆ ಎನ್ನುವ ಮಾತು ಕೇಳಿಬಂದಿತ್ತು.

  ಬಳಿಕ ಸಾಕಷ್ಟು ನಟಿಯರ ಹೆಸರು ಕೇಳಿಬಂದಿತ್ತು. ದೀಪಿಕಾ ಹೆಸರು ಸಹ ಸೀತೆ ಪಾತ್ರದ ಲಿಸ್ಟ್ ನಲ್ಲಿತ್ತು. ಕೊನೆಗೂ ಸೀತೆ ಪಾತ್ರಕ್ಕೆ ನಾಯಕಿ ಫಿಕ್ಸ್ ಆಗಿದ್ದಾರೆ. ವಿಜಯೇಂದ್ರ ಪ್ರಸಾದ್ ಅವರ ಕನಸಿನ ರಾಮಾಯಣದಲ್ಲಿ ಸೀತೆಯಾಗಿ ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಪೌರಾಣಿಕ ಪಾತ್ರಕ್ಕೆ ಕರೀನಾ ಇಷ್ಟು ದೊಡ್ಡ ಮೊತ್ತದ ಹಣ ಬೇಡಿಕೆ ಇಟ್ಟಿದ್ದಾರಾ ಎಂದು ನೆಟ್ಟಿಗರು ಕರೀನಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಬಳಿಕ ಸಿನಿಮಾತಂಡ ಬೇರೆ ನಾಯಕಿಯ ಹುಡುಕಾಟದಲ್ಲಿದ್ದರು. ಕೊನೆಗೆ ಕಂಗನಾ ಫಿಕ್ಸ್ ಆಗಿದ್ದಾರೆ. ಅಂದಹಾಗೆ ಕಂಗನಾ ಹೆಸರನ್ನು ಸೂಚಿಸಿದ್ದು ಸ್ವತಃ ವಿಜಯೇಂದ್ರ ಪ್ರಸಾದ್ ಅವರೇ ಎಂದು ಹೇಳಲಾಗುತ್ತಿದೆ. ಕರೀನಾ ರಿಜೆಕ್ಟ್ ಆದ ಬಳಿಕ ಸೀತೆ ಪಾತ್ರಕ್ಕೆ ಕಂಗನಾ ಸೂಕ್ತ ಎಂದು ವಿಜಯೇಂದ್ರ ಪ್ರಸಾದ್ ಅಭಿಪ್ರಾಯ ಪಟ್ಟಿದ್ದರಂತೆ. ಇದೀಗ ವಿಜಯೇಂದ್ರ ಪ್ರಸಾದ್ ಅವರ ಆಸೆಯಂತೆ ಕಂಗನಾ ಆಯ್ಕೆಯಾಗಿದ್ದಾರೆ.

  ಈ ಬಗ್ಗೆ ಕಂಗನಾ ಇನ್ಸ್ಟಾಗ್ರಾಮ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಸೀತೆ ಮಾಡುವ ಬಗ್ಗೆ ಅಧಿಕೃತಗೊಳಿಸಿರುವ ಕಂಗನಾ, "ಅವತಾರ ಸೀತೆ. ಪ್ರತಿಭಾನ್ವಿತ ತಂಡದೊಂದಿಗೆ ಸೀತೆ ಪಾತ್ರದದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಂತಸವಾಗಿದೆ. ಸೀತಾ ರಾಮನ ಆಶೀರ್ವಾದದೊಂದಿಗೆ" ಎಂದು ಬರೆದುಕೊಂಡಿದ್ದಾರೆ.

  ಸೀತಾ ಸಿನಿಮಾಗೆ ಅಲೌಕಿಕ್ ದೇಸಾಯಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆದಿದ್ದಾರೆ. ಸಲೋನಿ ಶರ್ಮಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ವಿಶೇಷ ಎಂದರೆ ಸೀತಾ ಸಿನಿಮಾ ಐದು ಭಾಷೆಯಲ್ಲಿ ಮೂಡಿಬರುತ್ತಿದೆ. ಅಂದಹಾಗೆ ಉಳಿದಂತೆ ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವುದು ಬಾರಿ ಕುತೂಹಲ ಮೂಡಿಸಿದೆ. ರಾಮನಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ. ಈ ಮೊದಲು ಬಾಲಿವುಡ್ ನಟ ರಣವೀರ್ ಸಿಂಗ್ ಹೆಸರು ಕೇಳಿಬಂದಿತ್ತು. ಆದರೆ ರಣವೀರ್ ಗ್ರೀನ್ ಸಿಗ್ನಲ್ ನೀಡಿದ್ದಾರಾ ಎನ್ನುವುದು ಇನ್ನು ಅಧಿಕೃತವಾಗಿಲ್ಲ. ಕಂಗನಾ ಎಂಟ್ರಿಯಿಂದ ಚಿತ್ರದ ಮೇಲಿನ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ.

  English summary
  Bollywood Actress Kangana Ranaut to play sita role in KV Vijayendra Prasad's Sita movie.
  Tuesday, September 14, 2021, 18:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X