ಸ್ವಂತ ತಂದೆಯ ಮೇಲೆಯೇ ಕೈ ಎತ್ತಿದ್ದೇಕೆ ನಟಿ ಕಂಗನಾ ರಣಾವತ್?
ಒಂದಲ್ಲೊಂದು ವಿಚಾರದ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ಇದೀಗ ಸ್ವಂತ ತಂದೆಯ ಮೇಲೆ ಕೈ ಎತ್ತಿದ ಘಟನೆಯ ಬಗ್ಗೆ ಬಹಿರಂಗ ಪಡಿಸಿ ಮತ್ತೆ ಸುದ್ದಿಯಾಗಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಂಗನಾ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ರೆಬಲ್ ವ್ಯಕ್ತಿತ್ವ ಹೊಂದಿದವಳಾಗಿದ್ದೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.
ಶಾಲಾ ದಿನಗಳಲ್ಲಿ ಕಂಗನಾ ಹೇಗಿದ್ದರು ಎನ್ನುವುದನ್ನು ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 15ನೇ ವಯಸ್ಸಿನಲ್ಲಿ ಮನೆ ಬಿಟ್ಟು ಬಂದ ತಾನು ಬಾಘಿ ರಜಪೂತ್ ಮಹಿಳೆ ಎಂದು ಹೆಮ್ಮೆಯಿಂದ ತನ್ನನ್ನು ಹೊಗಳಿಕೊಂಡಿದ್ದಾರೆ. ಶಾಲೆ ದಿನಗಳಲ್ಲಿ ಗ್ಯಾಂಗ್ ಕಟ್ಟಿಕೊಂಡು ಹೊಡೆದಾಟ ಮಾಡುತ್ತಿದ್ದರಂತೆ. ಅಂದೇ ರೆಬಲ್ ವ್ಯಕ್ತಿತ್ವ ಹೊಂದಿದ್ದ ಕಂಗನಾ ಇಂದು ಖ್ಯಾತಿ, ಹಣ, ಹೆಸರು ಸಿಕ್ಕ ಮೇಲೆ ಮತ್ತಷ್ಟು ಬಲಗೊಂಡಿರುವುದಾಗಿ ಹೇಳಿದ್ದಾರೆ. ಮುಂದೆ ಓದಿ.

ತಂದೆಗೆ ಹೊಡೆಯಲು ಹೋಗಿದ್ದ ಕಂಗನಾ
ವಿದ್ಯಾಭ್ಯಾಸದ ಬಗ್ಗೆ ಹೇಳಿದ್ದಕ್ಕೆ ತಂದೆಯ ಮೇಲೆಯೆ ಕೈ ಎತ್ತಲು ಮುಂದಾಗಿದ್ದೆ ಎಂದು ಕಂಗನಾ ಹೇಳಿದ್ದಾರೆ. ಅಪ್ಪನಿಗೆ ನನ್ನನ್ನು ಡಾಕ್ಟರ್ ಮಾಡಬೇಕು ಎನ್ನುವ ಆಸೆ ಇತ್ತು. ಉತ್ತಮ ಶಾಲೆಗೆ ಸೇರಿಸಿ ಕ್ರಾಂತಿಕಾರಿ ತಂದೆ ಎನಿಸಿಕೊಳ್ಳಬೇಕು ಎಂದುಕೊಂಡಿದ್ದರು. ಆದರೆ ನನಗೆ ಅದು ಇಷ್ಟವಿರಲಿಲ್ಲ. ಹಾಗಾಗಿ ನನಗೆ ಹೊಡೆಯಲು ಬಂದರು. ಆಗ ನಾನು ನನಗೆ ಹೊಡೆದರೆ ನಾನು ನಿಮಗೆ ತಿರುಗಿ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದೆ. ಅವತ್ತೇ ಸಂಬಂಧ ಕೊನೆಯಾಯಿತು' ಎಂದಿದ್ದಾರೆ.

ನನ್ನನ್ನು ಯಾರು ಪಂಜರದಲ್ಲಿ ಇರಿಸಲು ಸಾಧ್ಯವಿಲ್ಲ
'ನಾನು ನನ್ನ ಗಡಿ ಮೀರಿದೆ ಎನ್ನುವುದು ಗೊತ್ತಾಯಿತು. ಆ ಘಟನೆ ನನ್ನ ದೃಷ್ಟಿಯಿಂದ ಏನೋ ಬದಲಾವಣೆ ಆಯಿತು. ಸ್ವಾತಂತ್ರ್ಯಕ್ಕಾಗಿ ನಾನು ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲೆ ಎಂಬುದನ್ನು ಈ ಘಟನೆಯಿಂದ ಅರ್ಥ ಮಾಡಿಕೊಳ್ಳಬಹುದು. ನನ್ನನ್ನು ಯಾರು ಪಂಜರದಲ್ಲಿ ಇಡಲು ಸಾಧ್ಯವಿಲ್ಲ' ಎಂದಿದ್ದಾರೆ.

ದೇಶದ ಪ್ರಭಾವಿ ಧ್ವನಿಗಳಲ್ಲಿ ನನ್ನದು ಒಂದು
ಯಶಸ್ಸು ನನ್ನ ತೆಲೆಗೆ ಏರಿದೆ ಎಂದು ಈ ಚಿಲ್ಲರ್ ಇಂಡಸ್ಟ್ರಿ ತಿಳಿದುಕೊಂಡಿದೆ. ನನ್ನನ್ನು ನಿಯಂತ್ರಿಸಬಹುದು ಎಂದುಕೊಂಡಿದ್ದಾರೆ. ಯಶಸ್ಸಿನ ನಂತರ ನನ್ನ ಧ್ವನಿ ಬದಲಾಯಿತು. ಇಂದು ದೇಶದ ಪ್ರಭಾವಿ ಧ್ವನಿಗಳಲ್ಲಿ ಒಂದಾಗಿದೆ. ನನ್ನನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದುಕೊಂಡ ಬಂದವರನ್ನು ನಾನೆ ಹದ್ದುಬಸ್ತಿನಲ್ಲಿ ಇಟ್ಟಿದ್ದೇನೆ' ಎಂದು ಹೇಳಿದ್ದಾರೆ.
Recommended Video

ಮಾಫಿಯಾ ಕೈಗೆ ಸಿಕ್ಕಿ ಹಾಕಿಕೊಂಡಿದ್ದ ಕಂಗನಾ
ಅವಕಾಶಕ್ಕಾಗಿ ಮುಂಬೈನಲ್ಲಿ ಅಲೆಯುತ್ತಿದ್ದ ಕಂಗನಾ ರಣೌತ್ ತಮ್ಮ 16ನೇ ವಯಸ್ಸಿಗೆ ಭೂಗತಲೋಕದ ಮಾಫಿಯಾ ಕೈಗೆ ಸಿಕ್ಕಿ ಹಾಕಿಕೊಂಡರಂತೆ. ಈ ಬಗ್ಗೆ ಹಿಂದೆ ವಿಡಿಯೋ ಒಂದರಲ್ಲಿ ಮಾತನಾಡಿದ್ದರು ಕಂಗನಾ, 'ಸೌದಿ ದೊರೆಗಳಿಗೆ ನನ್ನನ್ನು ಮಾರಲು ಯತ್ನಿಸಿದ್ದರು. ಒಬ್ಬ ವ್ಯಕ್ತಿ ನನ್ನನ್ನು ಕೂಡಿ ಹಾಕಿ ಲೈಂಗಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಕೊಟ್ಟಿದ್ದ' ಎಂದು ಇತ್ತಿಚಿಗಷ್ಟೆ ಹೇಳಿಕೊಂಡಿದ್ದರು.


Click it and Unblock the Notifications











