twitter
    For Quick Alerts
    ALLOW NOTIFICATIONS  
    For Daily Alerts

    'ಮೂರನೇ ಮಗು ಪಡೆದ್ರೆ ಜೈಲು ಶಿಕ್ಷೆ ಕೊಡಿ' ಎಂದ ಕಂಗನಾಗೆ ಸಲೋನಿ ತಿರುಗೇಟು

    |

    'ಜನಸಂಖ್ಯೆ ನಿಯಂತ್ರಣ ಮಾಡಬೇಕು, ಈ ನಿಟ್ಟಿನಲ್ಲಿ ಕಟುವಾದ ಕಾನೂನುಗಳನ್ನು ಸರ್ಕಾರ ಜಾರಿ ಮಾಡಬೇಕು' ಎಂದು ಬಾಲಿವುಡ್ ನಟಿ ಕಂಗನಾ ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ.

    'ಮೂರನೇ ಮಗು ಪಡೆಯುವುದನ್ನು ನಿಷೇಧಿಸಬೇಕು, ಒಂದು ವೇಳೆ ಮೂರನೇ ಮಗು ಪಡೆದುಕೊಂಡ್ರೆ ಅಂತವರಿಗೆ ಜೈಲು ಶಿಕ್ಷೆಗೆ ಗುರಿ ಮಾಡಬೇಕು' ಎಂದು ಕ್ವೀನ್ ಕಂಗನಾ ಆಗ್ರಹಿಸಿದ್ದಾರೆ.

    ತಂದೆ-ತಾಯಿಯ ಮದುವೆ ರಹಸ್ಯ ಬಿಚ್ಚಿಟ್ಟ ನಟಿ ಕಂಗನಾ ರಣಾವತ್ತಂದೆ-ತಾಯಿಯ ಮದುವೆ ರಹಸ್ಯ ಬಿಚ್ಚಿಟ್ಟ ನಟಿ ಕಂಗನಾ ರಣಾವತ್

    ಕಂಗನಾ ಅವರ ಈ ಟ್ವೀಟ್ ಈಗ ಪರ-ವಿರೋಧದ ಚರ್ಚೆ ಎದುರಾಗಿದೆ. ಜನಸಂಖ್ಯೆ ನಿಯಂತ್ರಣ ವಿಚಾರವಾಗಿ ಕಂಗನಾ ಮಾಡಿರುವ ಟ್ವೀಟ್ ವಿರುದ್ಧ ಹಾಸ್ಯ ಕಲಾವಿದೆ ಸಲೋನಿ ಗೌರ್ ದನಿ ಎತ್ತಿದ್ದಾರೆ.

    Kangana Ranaut Tweet On Population Control

    ಕಂಗನಾ ಅವರು ಮೂರು ಮಕ್ಕಳನ್ನು ಪಡೆಯುವುದು ಬೇಡ ಎಂದು ಹೇಳುತ್ತಿದ್ದಾರೆ. ಅವರ ತಂದೆಗೆ ಮೂವರು ಮಕ್ಕಳು ಎಂದು ಸಲೋನಿ ಗೌರ್ ಟಾಂಗ್ ಕೊಟ್ಟಿದ್ದಾರೆ. ಕಂಗನಾ, ರಂಗೋಲಿ ಹಾಗೂ ಅಕ್ಷಿತ್ ಮೂವರು ಮಕ್ಕಳು ಎಂದು ಸಲೋನಿ ವ್ಯಂಗ್ಯ ಮಾಡಿದ್ದಾರೆ.

    ಇದಕ್ಕೂ ಮುಂಚೆ ಟ್ವೀಟ್ ಮಾಡಿದ್ದ ಕಂಗನಾ ''ಜನಸಂಖ್ಯೆ ನಿಯಂತ್ರಣಕ್ಕಾಗಿ ನಮಗೆ ಕಟ್ಟುನಿಟ್ಟಿನ ಕಾನೂನುಗಳು ಬೇಕಾಗುತ್ತವೆ. ಇದಕ್ಕೆ ಕಾರಣ ಮತ ರಾಜಕಾರಣ. ಇಂದಿನ ಬಿಕ್ಕಟ್ಟ ನೋಡುವಾಗ ಕನಿಷ್ಠ ಮೂರನೇ ಮಗು ಪಡೆದ್ರೆ ದಂಡ ಅಥವಾ ಜೈಲು ಶಿಕ್ಷೆ ಕೊಡಬೇಕು'' ಎಂದು ಟ್ವೀಟ್ ಮಾಡಿದ್ದರು.

    Kangana Ranaut Tweet On Population Control

    ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಸಲೋನಿ ಗೌರ್ ಕಂಗನಾ ಅವರ ತಂದೆಗೆ ಮೂವರು ಮಕ್ಕಳು ಎಂದು ಕಾಲೆಳೆದರು. ಬಳಿಕ, ಇದಕ್ಕೆ ಮತ್ತೊಮ್ಮೆ ಪ್ರತಿಕ್ರಿಯಿಸಿದ ಕಂಗನಾ ''ನನ್ನ ದೊಡ್ಡಪ್ಪನಿಗೆ 8 ಜನ ಒಡಹುಟ್ಟಿದವರು. ಬದಲಾಗುತ್ತಿರುವ ಸಮಯದೊಂದಿಗೆ ನಾವು ಬದಲಾಗಬೇಕು. ಚೀನಾದಂತಹ ಜನಸಂಖ್ಯೆ ನಿಯಂತ್ರಣದ ನಿಯಮಗಳಂತೆ ನಾವು ಹೊಂದಬೇಕು'' ಎಂದು ಹೇಳಿದ್ದಾರೆ.

    ಇನ್ನೊಂದು ಟ್ವೀಟ್‌ನಲ್ಲಿ ಮಾತು ಮುಂದುವರಿಸಿದ ಕಂಗನಾ ''ಈ ವಿಚಾರ ಸಂಕೀರ್ಣವನ್ನು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಜೀವನದಲ್ಲಿ ಏನಾದರೂ ಯೋಗ್ಯವಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಜನರಿಂದ ನೀವು ಗಳಿಸಿದ ಯಶಸ್ಸನ್ನು ಅಪಹಾಸ್ಯ ಮಾಡಬೇಡಿ. ನಿಮಗೆ ಸ್ಪಷ್ಟವಾಗಿ ಏನೂ ಉತ್ತಮ ಎಂದು ತಿಳಿದಿಲ್ಲ ಮೂರ್ಖ'' ಎಂದು ತಿರುಗೇಟು ನೀಡಿದ್ದಾರೆ.

    Recommended Video

    ಕೊರೊನಾಗೆ ಹೆದರಿ ಮುಂಬೈ ಬಿಟ್ಟು ಹೋಗ್ತಿರೋ ನಟ-ನಟಿಯರು | Filmibeat Kannada

    ಕಂಗನಾ ಅವರ ಈ ಟ್ವೀಟ್‌ಗೆ ಸಲೋನಿ ಗೌರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    English summary
    Actress Kangana Ranaut Tweet On Population Control. Comedian Saloni Gaur react.
    Wednesday, April 21, 2021, 16:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X