For Quick Alerts
  ALLOW NOTIFICATIONS  
  For Daily Alerts

  ಗುಲಾಮರು ನೀಡಿದ 'ಇಂಡಿಯಾ' ಹೆಸರನ್ನು ಬದಲಾಯಿಸಿ; ಕಂಗನಾ ಒತ್ತಾಯ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಕಂಗನಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ ಕಂಗನಾ ವಿವಾದಗಳ ಲಿಸ್ಟ್ ಗೆ ಮತ್ತೊಂದು ಸೇರ್ಪಡೆಯಾಗಿದೆ.

  ಗುಲಾಮರು ನೀಡಿದ 'ಇಂಡಿಯಾ' ಹೆಸರನ್ನು ಬದಲಾಯಿಸಿ ಎಂದು ಕಂಗನಾ ರಣಾವತ್ ಒತ್ತಾಯ ಮಾಡಿದ್ದಾರೆ. ಇಂಡಿಯಾ ಹೆಸರನ್ನು ಬದಲಾಯಿಸಿ ಭಾರತ್ ಎಂದು ಮರುನಾಮಕರಣ ಮಾಡುವಂತೆ ಕಂಗನಾ ಸೂಚಿಸಿದ್ದಾರೆ. ಈ ಬಗ್ಗೆ ಕಂಗನಾ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಎಂದು ಬ್ರಿಟೀಷರು ಕೊಟ್ಟ ಹೆಸರು, ಅದು ಗುಲಾಮರ ಹೆಸರು ಎಂದು ಕಂಗನಾ ಹೇಳಿದ್ದಾರೆ.

  ಕಂಗನಾ ಅಕ್ಕ ರಂಗೋಲಿ ಜೀವನದಲ್ಲಿ ನಡೆದ ಕಹಿ ಘಟನೆಕಂಗನಾ ಅಕ್ಕ ರಂಗೋಲಿ ಜೀವನದಲ್ಲಿ ನಡೆದ ಕಹಿ ಘಟನೆ

  ಭಾರತ್ ಅರ್ಥದ ಬಗ್ಗೆ ಮಾತನಾಡಿರುವ ಕಂಗನಾ ಇದು ಮೂರು ಸಂಸ್ಕೃತ ಪದಗಳಿಂದ ತಯಾರಿಸ್ಪಟ್ಟಿದೆ ಎಂದು ಹೇಳಿದ್ದಾರೆ. BH(Bhav), Ra(Rag), Ta(Tal) ಪದಗಳಿಂದ ಭಾರತ್ ಆಗಿದೆ ಎಂದು ಕಂಗನಾ ವಿವರಿಸಿದ್ದಾರೆ.

  "ಇಂಡಿಯಾ ತನ್ನ ಪ್ರಾಚೀನ ಅಧ್ಯಾತ್ಮಿಕತೆ ಮತ್ತು ಬುದ್ಧಿವಂತಿಕೆಯಿಂದ ಬೇರೂರಿದ್ದರೆ ಮಾತ್ರ ಅದು ನಮ್ಮ ಉನ್ನತ ನಾಗರಿಕತೆಯ ಆತ್ಮ. ಪ್ರತಿಯೊಬ್ಬರಲ್ಲೂ ವೇದ, ಗೀತಾ ಮತ್ತು ಯೋಗದ ಬಗ್ಗೆ ಆಳವಾಗಿ ಬೇರೂರಿರಬೇಕು ಆಗ ಮಾತ್ರ ವಿಶ್ವ ನಾಯಕರಾಗಿ ಹೊರಹೊಮ್ಮುತ್ತೇವೆ. ದಯವಿಟ್ಟು ಈ ಗುಲಾಮರ ಹೆಸರನ್ನು ಬದಲಾಯಿಸಬಹುದೇ?" ಎಂದು ಪ್ರಶ್ನೆ ಮಾಡಿದ್ದಾರೆ.

  10 ಕೋಟಿ ಕೊಟ್ರು ಈ ಕೆಲಸ ಮಾಡಲ್ಲ ಎಂದ ಶಿಲ್ಪಾ ಶೆಟ್ಟಿ | Filmibeat Kannada

  "ಬ್ರಿಟಿಷರು ನಮಗೆ ಇಂಡಿಯಾ ಎಂದು ಹಸರು ನೀಡಿದರು. ಇದರ ಅರ್ಥ ಸಿಂಧೂ ನದಿಯ ಪೂರ್ವ. ಭಾರತ್ ಅರ್ಥವನ್ನು ನಾನು ನಿಮಗೆ ಹೇಳುತ್ತೇನೆ. ಇದು ಮೂರು ಸಂಸ್ಕೃತ ಪದಗಳಾದ Bh(Bhav), Ra(Rag), Ta(Tal) ನಿಂದ ಆಗಿದೆ. ನಾವು ಗುಲಾಮರಾಗುವ ಮೊದಲು, ಹೆಚ್ಚು ಸಾಂಸ್ಕೃತಿಕವಾಗಿ ಮತ್ತು ಕಲಾತ್ಮಕವಾಗಿ ವಿಕಸನಗೊಂಡ ನಾಗರೀಕತೆ. ನಾವು ಕಳೆದುಹೋದ ವೈಭವವನ್ನು ಮರಳಿ ಪಡೆಯ ಬೇಕು, ಭಾರತ್ ಹೆಸರಿನೊಂದಿಗೆ ಪ್ರಾರಂಭಿಸೋಣ" ಎಂದಿದ್ದಾರೆ.

  English summary
  Bollywood Actress Kangana Ranaut urges India's name to be changed as Bharat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X