For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟರನ್ನು ಟಾರ್ಗೆಟ್ ಮಾಡಿದ ಕಂಗನಾ: ರಣ್ವೀರ್, ರಣ್ಬೀರ್, ವಿಕ್ಕಿ ಕೌಶಲ್ ಡ್ರಗ್ ಪರೀಕ್ಷೆ ಮಾಡಲಿ!

  |

  ಸ್ಯಾಂಡಲ್ ವುಡ್ ಮಾತ್ರವಲ್ಲ ಬಾಲಿವುಡ್ ನಲ್ಲಿಯೂ ನಶೆಯ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಸುಶಾಂತ್ ಸಿಂಗ್ ಸಾವಿನ ಬಳಿಕ, ಬಾಲಿವುಡ್ ನ ಅನೇಕ ನಟರಿಗೆ ಡ್ರಗ್ಸ್ ಡೀಲರ್‌ಗಳ ಜೊತೆ ಸಂಪರ್ಕವಿರುವುದು ಬಹಿರಂಗವಾಗಿದೆ. ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಮೊಬೈಲ್ ಚಾಟ್ ಆಧರಿಸಿ, ಮಾದಕ ವಸ್ತು ನಿಯಂತ್ರಣ ಇಲಾಖೆ ನಡೆಸುತ್ತಿದೆ.

  Sandalwood Narcotics Mafia ಬಗ್ಗೆ ಹಿರಿಯ ನಟ ದೊಡ್ಡಣ್ಣ ಬೇಸರ ವ್ಯಕ್ತಪಡಿಸಿದರು | Filmibeat Kannada

  ಸೆಲೆಬ್ರಿಟಿಗಳು ಡ್ರಗ್ಸ್ ಸೇವಿಸುವ ಬಗ್ಗೆ ನಟಿ ಕಂಗನಾ ರಣಾವತ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿ, ಬಾಲಿವುಡ್ ನ ಅನೇಕ ನಟರು ಡ್ರಗ್ಸ್ ಸೇವನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಶೇ 99ರಷ್ಟು ಬಾಲಿವುಡ್ ನ ಖ್ಯಾತ ನಟರು ಮಾದಕ ದ್ರವ್ಯ ವ್ಯಸನಿಗಳಾಗಿದ್ದಾರೆ, ತನಿಖೆ ನಡೆಸಿದರೆ ಅನೇಕರ ಹೆಸರುಗಳು ಹೊರಬರುತ್ತೆ ಎಂದು ಗಂಭೀರ ಆರೋಪ ಮಾಡಿದ್ದರು.

  ಕಂಗನಾ ಬದುಕಿನ ಕರಾಳ ಘಟನೆಗಳು: ಅಬ್ಬಾ ಭಯಾನಕ!ಕಂಗನಾ ಬದುಕಿನ ಕರಾಳ ಘಟನೆಗಳು: ಅಬ್ಬಾ ಭಯಾನಕ!

  ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ ಬಾಲಿವುಡ್ ನಲ್ಲಿ ಯಾರೆಲ್ಲ ಡ್ರಗ್ಸ್ ಸೇವಿಸುತ್ತಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಹಲವು ನಟರು ರಕ್ತ ಪರೀಕ್ಷೆಗೆ ಒಳಗಾಗಬೇಕು, ಈ ಮೂಲಕ ಕೇಳಿ ಬರುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

  ''ರಣ್ವೀರ್ ಸಿಂಗ್, ರಣ್ಬೀರ್ ಕಪೂರ್, ಅಯಾನ್ ಮುಖರ್ಜಿ, ವಿಕ್ಕಿ ಕೌಶಲ್ ರಕ್ತ ಮಾದರಿಯನ್ನು ಮಾದಕ ವಸ್ತು ಪರೀಕ್ಷೆಗೆ ನೀಡುವಂತೆ ಕೇಳಿಕೊಳ್ಳುತ್ತೇನೆ. ಅವರು ಕೊಕೇನ್ ವ್ಯಸನಿಗಳೆಂದು ವದಂತಿಗಳಿವೆ. ಈ ವದಂತಿಗಳಿಗೆ ಸ್ಪಷ್ಟನೆ ನೀಡಬೇಕು. ವ್ಯಸನಿಗಳು ಅಲ್ಲ ಎಂದು ಸಾಬೀತಾದರೆ ಲಕ್ಷಾಂತರ ಜನರನ್ನು ಪ್ರೇರೇಪಿಸಬಹುದು." ಎಂದು ಟ್ವೀಟ್ ಮಾಡಿ ಪ್ರಧಾನಮಂತ್ರಿ ಕಚೇರಿ ಖಾತೆಗೆ ಟ್ಯಾಗ್ ಮಾಡಿದ್ದಾರೆ.

  ಬಾಲಿವುಡ್ ಪಾರ್ಟಿಗಳಲ್ಲಿ ಡ್ರಗ್ಸ್ ಹೇಗೆ ಸಂಗ್ರಹವಾಗುತ್ತೆ. ನಶೆಯ ಗುಂಗಿನಲ್ಲಿ ಯಾರೆಲ್ಲ ತೆಲುತ್ತಿರುತ್ತಾರೆ ಎಂದು ಕಂಗನಾ ಬಹಿರಂಗವಾಗಿ ಹೇಳಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ನೆಪೋಟಿಸಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಡ್ರಗ್ಸ್ ಮಾಫಿಯಾದ ವಿರುದ್ಧ ಧ್ವನಿ ಎತ್ತಿದ್ದಾರೆ.

  English summary
  Kangana Ranaut urgs Ranbir Kapoor, Ranveer Kapoor and vicky Kaushal take a drug test.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X