For Quick Alerts
  ALLOW NOTIFICATIONS  
  For Daily Alerts

  ನಾನು ಬಿಟ್ಟಿದ್ದನ್ನು ಬೇಡುತ್ತಿದ್ದಳು, ಬಿ ಗ್ರೇಡ್ ನಟಿ: ತಾಪ್ಸಿ ವಿರುದ್ಧ ಮತ್ತೆ ಸಿಡಿದೆದ್ದ ಕಂಗನಾ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಕಿರಿಕ್ ಗಳು ಇನ್ನು ನಿಂತಿಲ್ಲ. ನಟಿ ತಾಪ್ಸಿ ಪನ್ನು ವಿರುದ್ಧ ಮತ್ತೆ ಸಿಡಿದೆದ್ದಿರುವ ಕಂಗನಾ ಇನ್ಸ್ಟಾಗ್ರಾಮ್ ನಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ. ಅಂದು ತಾಪ್ಸಿಯನ್ನು ಸಿ ಗ್ರೇಡ್ ನಟಿ, ಕಾಪಿ ಕ್ಯಾಟ್ ಎಂದು ಜರಿದಿದ್ದ ಕಂಗನಾ ಇಂದು ತಾನು ಬಿಟ್ಟಿದ್ದನ್ನು ಬೇಡುತ್ತಿದ್ದ ನಟಿ, ಬಿ ಗ್ರೇಡ್ ನಟಿ ತಾಪ್ಸಿ ಎಂದು ಕಿಡಿಕಾರಿದ್ದಾರೆ.

  ಕಂಗನಾ ರಣಾವತ್ ಮತ್ತು ತಾಪ್ಸಿ ಪನ್ನು ಇಬ್ಬರೂ ಸಹ ಬಾಲಿವುಡ್‌ನ ಪ್ರತಿಭಾವಂತ ನಟಿಯರು. ಹಲವು ಅತ್ಯುತ್ತಮ ಸಿನಿಮಾಗಳನ್ನು ಸಿನಿಪ್ರೇಕ್ಷಕರಿಗೆ ನೀಡಿದ್ದಾರೆ. ಆದರೆ ಕಳೆದ ವರ್ಷಗಳಿಂದ ಇಬ್ಬರೂ ಹಾವು-ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ. ಇತ್ತೀಚಿಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ತಾಪ್ಸಿ ಪನ್ನುಗೆ ಕಂಗನಾ ಕುರಿತು ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ ತಾಪ್ಸಿ, ಕಂಗನಾ ತನ್ನ ಜೀವನದಲ್ಲಿ ಅಪ್ರಸ್ತುತ ಎಂದಿದ್ದರು. ಇದಕ್ಕೆ ಉತ್ತರ ನೀಡಿರುವ ಕಂಗನಾ, ತಾಪ್ಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಂದೆ ಓದಿ...

  ಕಂಗನಾ ಬಗ್ಗೆ ತಾಪ್ಸಿ ಹೇಳಿದ್ದೇನು?

  ಕಂಗನಾ ಬಗ್ಗೆ ತಾಪ್ಸಿ ಹೇಳಿದ್ದೇನು?

  ಕಂಗನಾ ಬಗ್ಗೆ ಉತ್ತರಿಸಿದ್ದ ತಾಪ್ಸಿ, ''ಕಂಗನಾ ನನ್ನ ಜೀವನದಲ್ಲಿ ಅಪ್ರಸ್ತುತ. ಸಿನಿಮಾ ರಂಗದಲ್ಲಿ ಆಕೆಯೂ ಒಬ್ಬ ನಟಿ. ವೃತ್ತಿ ವಿಷಯದಲ್ಲಿ ಆಕೆ ನನ್ನ ಸಹೋದ್ಯೋಗಿ. ಆದರೆ ನನ್ನ ವೈಯಕ್ತಿಕ ಜೀವನದಲ್ಲಿ ಆಕೆ ಸಂಪೂರ್ಣ ಅಪ್ರಸ್ತುತ. ಈ ಹಿಂದೆಯೂ ಆಕೆ ನನಗೆ ಮುಖ್ಯವಾಗಿರಲಿಲ್ಲ. ಈಗಲೂ ಆಕೆ ನನಗೆ ಮುಖ್ಯವಲ್ಲ'' ಎಂದಿದ್ದರು.

  ಕಂಗನಾ ಬಗ್ಗೆ 'ಕ್ಯಾರೆ' ಅನ್ನಲ್ಲ ಎಂದ ತಾಪ್ಸಿ ಪನ್ನುಕಂಗನಾ ಬಗ್ಗೆ 'ಕ್ಯಾರೆ' ಅನ್ನಲ್ಲ ಎಂದ ತಾಪ್ಸಿ ಪನ್ನು

  ತಾಪ್ಸಿಗೆ ತಿರುಗೇಟು ನೀಡಿದ ಕಂಗನಾ

  ತಾಪ್ಸಿಗೆ ತಿರುಗೇಟು ನೀಡಿದ ಕಂಗನಾ

  ತಾಪ್ಸಿ ಮಾತಿಗೆ ಕಂಗನಾ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದ್ದಾರೆ. ಇಂದು ನಾನು ಆಕೆಗೆ ಅಪ್ರಸ್ತುತ ಆಗಿದ್ದೇನೆ. ಆದರೆ ಅಂದು ನಾನು ಬಿಟ್ಟಿದ್ದನ್ನು ಕೊಡಿ ಎಂದು ನಿರ್ಮಾಪಕರ ಬಳಿ ಬೇಡುತ್ತಿದ್ದಳು. ಬಿ ಗ್ರೇಡ್ ನಟಿಯರು ತನ್ನ ಹೆಸರನ್ನು ಬಳಸಿಕೊಂಡು ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

  ನಾನು ಬಿಟ್ಟಿದ್ದನ್ನು ಬೇಡುತ್ತಿದ್ದವಳು

  ನಾನು ಬಿಟ್ಟಿದ್ದನ್ನು ಬೇಡುತ್ತಿದ್ದವಳು

  "ಅವಳು ನಿರ್ಮಾಪಕರಿಗೆ ಫೋನ್ ಮಾಡಿ ಕಂಗನಾ ಏನನ್ನಾದರೂ ಬಿಟ್ಟಿದ್ದರೆ ಅದನ್ನು ನನಗೆ ಕೊಡಿ ಎಂದು ಬೇಡಿಕೊಳ್ಳುತ್ತಿದ್ದಳು. ಈಗ ಅವಳ ಸ್ಟೇಟಸ್ ನೋಡಿ. ಒಂದು ಸಮಯದಲ್ಲಿ ಅವಳು ನಿರ್ಮಾಪಕರ ಕಂಗನಾ ಎಂದು ಕರೆಯುವ ಹೆಮ್ಮೆ ಅನುಭವಿಸಿದ್ದರು. ಈಗ ಅವಳು ನನಗೆ ಅಪ್ರಸ್ತುತ ಎಂದು ಕರೆಯುತ್ತಿದ್ದಾಳೆ. ಮನುಷ್ಯ ಮತ್ತು ಆತನ ಸ್ವಭಾವ ವಿಚಿತ್ರವಾಗಿದೆ. ನನ್ನ ಹೆಸರು ಬಳಸದೆ ಪ್ರಚಾರ ಮಾಡಲು ಪ್ರಯತ್ನಿಸು" ಎಂದು ಬರೆದುಕೊಂಡಿದ್ದಾರೆ.

  ಬಿ ಗ್ರೇಡ್ ನಟಿಯರು ನನ್ನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ

  ಬಿ ಗ್ರೇಡ್ ನಟಿಯರು ನನ್ನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ

  ಮತ್ತೊಂದು ಪೋಸ್ಟ್ ನಲ್ಲಿ ತಾಪ್ಸಿಯನ್ನು ಬಿ ಗ್ರೇಡ್ ನಟಿ ಎಂದು ಕರೆದಿದ್ದಾರೆ.

  "ಬಿ ಗ್ರೇಡ್ ನಟಿಯರು ನನ್ನ ಹೆಸರನ್ನು, ಸ್ಟೈಲ್, ಸಂದರ್ಶನ, ಜೀವನದ ತಂತ್ರಗಳನ್ನು ಯಾಕೆ ಬಳಸಿಕೊಂಡು ಅವರ ಜೀವನ ಪ್ರಮೋಟ್ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಖಂಡಿತವಾಗಿ ನನ್ನ ಹೆಸರನ್ನು ಬಳಿಸಿಕೊಂಡು ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾರೆ. ಆದರೆ ನಾನು ಸ್ಫೂರ್ತಿ ಪಡೆದ ನಟಿಯರಿಗೆ ಅಗೌರವ ತೋರುತ್ತಿರಲಿಲ್ಲ. ನನಗೆ ಸ್ಫೂರ್ತಿಯಾದ ವೈಜಯಂತಿಮಾಲ, ವಹೀದಾ ಮತ್ತು ಶ್ರೀದೇವಿ ಅವರಿಗೆ ನಾನು ತುಂಬಾ ಗೌರವ ಕೊಡುತ್ತೇನೆ" ಎಂದು ಬರೆದುಕೊಂಡಿದ್ದಾರೆ.

  English summary
  Kangana Ranaut reacts to Taapsee Pannu calling her irrelavent, Says Taapsee begs if Kangana has left something then give it to me.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X