ಕುತೂಹಲ ಮೂಡಿಸಿದ ಕಂಗನಾ ರಣಾವತ್ ಮತ್ತು ರಾಣಾ ದಗ್ಗುಬಾಟಿ ಮಾತುಕತೆ

ಖ್ಯಾತ ನಟಿ ಕಂಗನಾ ರಣಾವತ್ ಸದ್ಯ ಬಾಲಿವುಡ್ ನ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಸ್ವಜನ ಪಕ್ಷಪಾತದ ವಿರುದ್ಧ ಕಂಗನಾ ಸಿಡಿದೆದೆದ್ದಿದ್ದು, ಬಾಲಿವುಡ್ ನ ಪ್ರಭಲ ವ್ಯಕ್ತಿಗಳ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. ಕಂಗನಾ ಅದ್ಭುತ ನಟಿ ಮಾತ್ರವಲ್ಲದೆ ಅವರ ಬೋಲ್ಡ್ ಹೇಳಿಕೆಗಳು ಈಗ ಸಂಚಲನ ಸೃಷ್ಟಿಸುತ್ತಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮತ್ತು ನೆಪೋಟಿಸಂ ವಿರುದ್ಧ ಮಾತನಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆಯೂ ಕಂಗನಾ ಅಭಿಮಾನಿಗಳಿಗೆ ಅಚ್ಚರಿ ಸುದ್ದಿ ನೀಡಿದ್ದಾರೆ. ಹೌದು, ನಟಿ ಕಂಗನಾ ಟಾಲಿವುಡ್ ನಟ ರಾಣಾದಗ್ಗುಬಾಟಿ ಜೊತೆ ಮಾತುಕತೆ ನಡೆಸಲು ಸಿದ್ಧರಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಕಂಗನಾ ಸುಂದರ ಫೋಟೊಗಳನ್ನು ಶೇರ್ ಮಾಡುವ ಜೊತೆಗೆ ರಾಣಾ ಜೊತೆ ವರ್ಚುವಲ್ ಮೀಟಿಂಗ್ ಗೆ ರೆಡಿಯಾಗಿರುವುದಾಗಿ ಹೇಳಿದ್ದಾರೆ. ಅಂದ್ಹಾಗೆ ರಾಣಾ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ನಟಿ ಕಂಗನಾ ಜೊತೆ ಮಾತುಕತೆ ನಡೆಸಲಿದ್ದಾರೆ. ಮುಂಬರುವ ಪ್ರಾಜೆಕ್ಟ್ ಗಳ ಬಗ್ಗೆ ಅಂತ ಬಹಿರಂಗ ಪಡಿಸಿದ್ರು, ಕಂಗನಾ ಮತ್ತು ರಾಣಾ ನಡುವಿನ ಮಾತುಕತೆ ಏನಾಗಿರಲಿದೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Kangana Ranaut Virtual Meeting With Rana Daggubati For New Projects

ನಟಿ ಕಂಗನಾ, ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ ಜೊತೆ ಸಿನಿಮಾ ಮಾಡುತ್ತಾರಾ, ಮತ್ತೆ ತೆಲುಗು ಚಿತ್ರರಂಗದ ಕಡೆ ಬರ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಅಥವಾ ರಾಣಾ, ಕಂಗನಾ ಮುಂದಿನ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾರಾ ಎನ್ನುವುದು ಸಹ ಕುತೂಹಲದ ಸಂಗತಿಯಾಗಿದೆ.

ಅಂದ್ಹಾಗೆ ಕಂಗನಾ ಈಗಾಗಲೆ ತೆಲುಗಿನಲ್ಲಿ ಸಿನಿಮಾ ಮಾಡಿದ್ದಾರೆ. ಪ್ರಭಾಸ್ ಜೊತೆ ಏಕ್ ನಿರಂಜನ್ ಸಿನಿಮಾದಲ್ಲಿ ಕಂಗನಾ ಮಿಂಚಿದ್ದಾರೆ. ಈಗ ಮತ್ತೆ ರಾಣಾ ಜೊತೆ ಅಭಿನಯಿಸಿವ ಮೂಲಕ ತೆಲಗು ಚಿತ್ರರಂಗಕ್ಕೆ ಬಂದರೂ ಅಚ್ಚರಿ ಇಲ್ಲ. ಮಹೇಶ್ ಬಾಬು ಅಭಿನಯದ ಪೋಕಿರಿ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು ಕಂಗನಾ ಎನ್ನುವ ಸುದ್ದಿ ಇತ್ತೀಚಿಗೆ ವೈರಲ್ ಆಗಿತ್ತು.ಇದೀಗ ಮತ್ತೆ ದಕ್ಷಿಣ ಭಾರತೀಯ ಸಿನಿಮಾರಂಗಕ್ಕೆ ಬಂದರೂ ಅಚ್ಚರಿಪಡಬೇಕಾಗಿಲ್ಲ.

More from Filmibeat

English summary
Actress Kangana Ranaut virtual meeting with Rana Daggubati for new projects.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X