ದಕ್ಷಿಣ ಭಾರತ ಸ್ಟಾರ್ ನಟರಿಗೆ ಎಚ್ಚರಿಕೆ ಹೇಳಿದ ಕಂಗನಾ ರನೌತ್

ಪ್ಯಾನ್ ಇಂಡಿಯಾ ಸಿನಿಮಾಗಳಿಂದಾಗಿ ಭಾರತೀಯ ಸಿನಿಮಾ ಮಾರುಕಟ್ಟೆಯ ಚಿತ್ರಣವೇ ಬದಲಾಗಿದ್ದು, ದಕ್ಷಿಣ ಭಾರತ ಸಿನಿಮಾಗಳಿಗೆ ದೊಡ್ಡ ಬೇಡಿಕೆ ಕುದುರಿದೆ.

Recommended Video

ಈ ತರ ಹೇಳಿಕೆ ಕೊಡೋದ್ರಲ್ಲಿ ಕಂಗನಾ ಫೇಮಸ್

ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಾಲಿವುಡ್ ಸಿನಿಮಾಗಳಿಗಿಂತಲೂ ದಕ್ಷಿಣ ಭಾರತ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ಸ್ಟಾರ್ ನಿರ್ಮಾಪಕರು ಸಹ ದಕ್ಷಿಣ ಭಾರತದ ಸ್ಟಾರ್ ನಟರ ಸಿನಿಮಾಗಳ ಮೇಲೆ ಬಂಡವಾಳ ಹೂಡುತ್ತಿದ್ದಾರೆ. ಬಾಲಿವುಡ್‌ನ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ದಕ್ಷಿಣದ ಸಿನಿಮಾಗಳ ಡಬ್ಬಿಂಗ್ ಹಕ್ಕು, ವಿತರಣೆ ಹಕ್ಕು ಖರೀದಿಸಿ ಹಣ ಮಾಡಿಕೊಳ್ಳುತ್ತಿವೆ.

ಬಾಲಿವುಡ್‌ಗೂ ದಕ್ಷಿಣ ಭಾರತ ಚಿತ್ರರಂಗಕ್ಕೂ ಇದ್ದ ದೊಡ್ಡ ಅಂತರ ಕರಗಿದ್ದು, ಎರಡೂ ಚಿತ್ರರಂಗಗಳು ಹಿಂದೆಂದಿಗಿಂತಲೂ ಬಹಳ ಹತ್ತಿರವಾಗಿವೆ. ಈ ಸಮಯದಲ್ಲಿ ಬಾಲಿವುಡ್‌ನ ಜನಪ್ರಿಯ ನಟಿ ಕಂಗನಾ ರನೌತ್, ದಕ್ಷಿಣದ ಸ್ಟಾರ್ ನಟರಿಗೆ ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ. ಬಾಲಿವುಡ್‌ ಬಗ್ಗೆ ಹುಷಾರಾಗಿರಿ ಎಂದು ಎಚ್ಚರಿಸಿದ್ದಾರೆ.

ಮೂರು ಕಾರಣ ನೀಡಿರುವ ಕಂಗನಾ

ಮೂರು ಕಾರಣ ನೀಡಿರುವ ಕಂಗನಾ

ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಬರೆಯಲಾಗಿರುವ ಲೇಖನವೊಂದನ್ನು ಹಂಚಿಕೊಂಡಿರುವ ನಟಿ ಕಂಗನಾ, ದಕ್ಷಿಣ ಭಾರತ ಸಿನಿಮಾಗಳು ಹಾಗೂ ಸ್ಟಾರ್ ನಟರನ್ನು ತಡೆಯಲು ಸಾಧ್ಯವಿಲ್ಲವೇಕೆ ಎಂಬುದಕ್ಕೆ ಮೂರು ಕಾರಣಗಳನ್ನು ನೀಡಿದ್ದಾರೆ. ದಕ್ಷಿಣ ಭಾರತ ಸಿನಿಮಾ ರಂಗ, ಭಾರತೀಯ ಸಂಸ್ಕೃತಿಯೊಂದಿಗೆ ತಳಮಟ್ಟದಿಂದ ಸಂಬಂಧ ಹೊಂದಿದ್ದಾರೆ. ಅದನ್ನು ಬಿಟ್ಟು ಅವರು ಸಿನಿಮಾ ಮಾಡುವುದಿಲ್ಲ ಎಂದಿದ್ದಾರೆ ಕಂಗನಾ.

ಪಾಶ್ಚಿಮಾತ್ರದ ಪ್ರಭಾವ ಅವರ ಮೇಲಿಲ್ಲ: ಕಂಗನಾ

ಪಾಶ್ಚಿಮಾತ್ರದ ಪ್ರಭಾವ ಅವರ ಮೇಲಿಲ್ಲ: ಕಂಗನಾ

ದಕ್ಷಿಣ ಭಾರತ ಸಿನಿಮಾರಂಗದ ಸ್ಟಾರ್ ನಟರಿಗೆ ವೃತ್ತಿ ಹಾಗೂ ಪ್ಯಾಷನ್ ಬೇರೆ ಬೇರೆಯಲ್ಲ ಎರಡೂ ಒಂದೆ. ಅವರಿಗೆ ಸಿನಿಮಾ ವೃತ್ತಿ ಮಾತ್ರವಲ್ಲ ಪ್ಯಾಷನ್ ಸಹ. ಅಲ್ಲದೆ ದಕ್ಷಿಣ ಭಾರತ ಸಿನಿಮಾ ನಟರು ತಮ್ಮ ಕುಟುಂಬದವರನ್ನು ಬಹಳ ಪ್ರೀತಿಸುತ್ತಾರೆ. ಅವರ ಕುಟುಂಬ ವ್ಯವಸ್ಥೆಯ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಇಲ್ಲ. ಹಾಗಾಗಿ ಅವರನ್ನು ಅಭಿಮಾನಿಗಳು ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ಗುರುತಿಸಿದ್ದಾರೆ ನಟಿ ಕಂಗನಾ.

ದಕ್ಷಿಣದ ಸ್ಟಾರ್ ನಟರಿಗೆ ಎಚ್ಚರಿಕೆ ಸಂದೇಶ

ದಕ್ಷಿಣದ ಸ್ಟಾರ್ ನಟರಿಗೆ ಎಚ್ಚರಿಕೆ ಸಂದೇಶ

ಕೊನೆಗೆ ದಕ್ಷಿಣದ ಸ್ಟಾರ್ ನಟರಿಗೆ ಎಂದು ಎಚ್ಚರಿಕೆ ಸಂದೇಶವನ್ನೂ ನೀಡಿರುವ ನಟಿ ಕಂಗನಾ, ''ನಿಮ್ಮನ್ನು, ನಿಮ್ಮ ತನವನ್ನು ಬಾಲಿವುಡ್ ಹಾಳು ಮಾಡದಂತೆ ನೋಡಿಕೊಳ್ಳಿ'' ಎಂದು ಎಚ್ಚರಿಸಿದ್ದಾರೆ ಕಂಗನಾ. ಬಾಲಿವುಡ್‌ನ ಪದ್ಧತಿಗಳ ಬಗ್ಗೆ ಕಂಗನಾ ಮೊದಲಿನಿಂದಲೂ ದನಿ ಎತ್ತುತ್ತಲೇ ಬಂದಿದ್ದಾರೆ. ಬಾಲಿವುಡ್ ಸಿನಿಮಾಗಳ ವಿಷಯವಸ್ತುವಿನಿಂದ ಹಿಡಿದು, ಬಾಲಿವುಡ್ಡಿಗರ ಫ್ಯಾಷನ್ ಸೆನ್ಸ್, ಜೀವನ ಪದ್ಧತಿ, ವರ್ತನೆ ಎಲ್ಲದರ ಬಗ್ಗೆಯೂ ಕಂಗನಾ ಟೀಕಿಸಿದ್ದಾರೆ.

'ಬಾಲಿವುಡ್ ಮಾಫಿಯಾ' ಎನ್ನುವ ಕಂಗನಾ

'ಬಾಲಿವುಡ್ ಮಾಫಿಯಾ' ಎನ್ನುವ ಕಂಗನಾ

ಬಾಲಿವುಡ್ ಅನ್ನು 'ಬಾಲಿವುಡ್ ಮಾಫಿಯಾ' ಎಂದೇ ಕರೆಯುವ ಕಂಗನಾ ಕರಣ್ ಜೋಹರ್, ಸಲ್ಮಾನ್ ಖಾನ್, ಮಹೇಶ್ ಭಟ್, ಕಪೂರ್ ಕುಟುಂಬ ಇನ್ನೂ ಹಲವರನ್ನು ವಿಪರೀತ ಟೀಕಿಸುತ್ತಲೇ ಬಂದಿದ್ದಾರೆ. ಕೆಲವೊಮ್ಮೆ ಅತಿರೇಕದ ಟೀಕೆಗಳನ್ನೂ ಸಹ ಮಾಡಿದ್ದರು. ಕಂಗನಾ 'ದಾಡಕ್', 'ಸೀತಾ', 'ಇಮ್ಲಿ', 'ತೇಜಸ್', 'ಟೂಕು ವೆಡ್ಸ್ ಶೇರೂ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಂಗನಾ ನಟಿಸಿದ್ದ 'ತಲೈವಿ' ಸಿನಿಮಾ ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಆಗಿತ್ತು. ಜಯಲಲಿತಾ ಜೀವನ ಆಧರಿಸಿ ನಿರ್ಮಾಣವಾಗಿದ್ದ ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

More from Filmibeat

English summary
Actress Kangan Rananut warned south Indian Super stars about Bollywood. She said They should not allow Bollywood to corrupt them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X