For Quick Alerts
  ALLOW NOTIFICATIONS  
  For Daily Alerts

  ಇಂದು ನನ್ನ ಮನೆ ಮುರಿದಿದೆ, ನಾಳೆ ನಿನ್ನ ದುರಹಂಕಾರ ಮುರಿಯಲಿದೆ: ಉದ್ಧವ್ ಠಾಕ್ರೆಗೆ ವಿರುದ್ಧ ಕಂಗನಾ ಕಿಡಿ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಶಿವಸೇನೆ ನಡುವಿನ ಜಗಳದಲ್ಲಿ ಕಂಗನಾ ರಣಾವತ್ ಕನಸಿನ ಬಂಗಲೆಯನ್ನು ಮುಂಬೈ ಮಹಾನಗರ ಪಾಲಿಕೆ ಒಡೆದು ಹಾಕಿದೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ವಿರುದ್ಧ ಹರಿಹಾಯ್ದಿದ್ದ ಕಂಗನಾ ಈಗ ಮಹಾರಾಷ್ಟ್ರ ಸರ್ಕಾರದ ವಿರೋಧ ಕಟ್ಟಿಕೊಂಡಿದ್ದಾರೆ. ಕಂಗನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಬಂಗಲೆಯನ್ನು ಒಡೆದು ಹಾಕಲಾಗಿದೆ ಎನ್ನುವ ಆರೋಪ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕೇಳಿ ಬರುತ್ತಿದೆ.

  'ನಾನು ಬಂದೇ ಬರ್ತೀನಿ, ತಾಕತ್ತಿದ್ದರೆ ತಡೆಯಿರಿ' ಎಂದು ಸವಾಲು ಹಾಕಿದ್ದ ನಟಿ ಕಂಗನಾ ರಣಾವತ್ ಇಂದು ಭಾರಿ ಭದ್ರತೆಯೊಂದಿಗೆ ಮುಂಬೈಗೆ ಆಗಮಿಸಿದ್ದಾರೆ. ವೈ ಪ್ಲಸ್ ಭದ್ರತೆಯೊಂದಿಗೆ ಕಂಗನಾ ಮುಂಬೈ ನಿವಾಸಕ್ಕೆ ತೆರಳಿದ್ದಾರೆ. ಮುಂಬೈ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಕಂಗನಾ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಗುಡುಗಿದ್ದಾರೆ.

  ನಾಳೆ ನಿಮ್ಮ ದುರಹಂಕಾರ ಮುರಿಯಲಿದೆ

  ನಾಳೆ ನಿಮ್ಮ ದುರಹಂಕಾರ ಮುರಿಯಲಿದೆ

  ಅತ್ಯಂತ ಶಾಂತವಾಗಿ ಕಠಿಣ ಪದಗಳ ಮೂಲಕ ಕಂಗನಾ, ಉದ್ಧವ್ ಠಾಕ್ರೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಉದ್ಧವ್ ಠಾಕ್ರೆ, ಏನು ಯೋಚಿಸುತ್ತಿದ್ದೀರಿ. ಫಿಲ್ಮ್ ಮಾಫಿಯಾ ಜೊತೆ ಸೇರಿ, ನನ್ನ ಮನೆ ಕೆಡವಿ, ನನ್ನ ಮೇಲೆ ಸೇಡು ತೀರಿಸಿಕೊಂಡಿದ್ದೀನಿ ಅಂತ ಅನಿಸುತ್ತಿದೆಯಾ? ಇಂದು ನನ್ನ ಮನೆ ನೆಲಸಮಗೊಂಡಿದೆ, ನಾಳೆ ನಿನ್ನ ದುರಹಂಕಾರ ಮುರಿಯಲಿದೆ." ಎಂದು ಏಕವಚನದಲ್ಲಿ ಹೇಳಿದ್ದಾರೆ.

  Yash reacts about Narcoticsಈ ದೇಹ ನಿಮ್ದಲ್ಲ ನಿಮ್ಮಪ್ಪಂದು - ಅವರಿಗೋಸ್ಕರ ಏನಾದ್ರೂ ಮಾಡಿ | Filmibeat Kannada
  ಕಾಲ ಚಕ್ರ ತಿರುಗುತ್ತಲೇ ಇರುತ್ತೆ

  ಕಾಲ ಚಕ್ರ ತಿರುಗುತ್ತಲೇ ಇರುತ್ತೆ

  "ಕಾಲ ಚಕ್ರ ತಿರುಗುತ್ತಲೇ ಇರುತ್ತೆ ನೆನಪಿಟ್ಟುಕೋ, ಇದು ಎಂದಿಗೂ ಒಂದೇ ರೀತಿ ಇರುವುದಿಲ್ಲ. ಕಾಶ್ಮೀರಿ ಪಂಡಿತರ ಮೇಲೆ ದೌರ್ಜನ್ಯ ನಡೆದಿತ್ತು ಅಂತ ಕೇಳಿದ್ವಿ, ಆದರೆ ಇಂದು ನನಗೆ ಆ ಅನುಭವವಾಗಿದೆ. ನಾಳೆ ನಾನು ಅಯೋಧ್ಯೆ ಮೇಲೆ ಮಾತ್ರವಲ್ಲ ಕಾಶ್ಮೀರಿ ಪಂಡಿತರ ಬಗ್ಗೆಯೂ ಸಿನಿಮಾ ಮಾಡೇ ಮಾಡ್ತೀನಿ" ಎಂದು ಸವಾಲ್ ಹಾಕಿದ್ದಾರೆ.

  ಕಚೇರಿ ನೆಲಸಮ ಮಾಡದಿರಲು ಹೈ ಕೋರ್ಟ್ ಸೂಚನೆ

  ಕಚೇರಿ ನೆಲಸಮ ಮಾಡದಿರಲು ಹೈ ಕೋರ್ಟ್ ಸೂಚನೆ

  ಸದ್ಯ ಮುಂಬೈ ಹೈ ಕೋರ್ಟ್ ಕಂಗನಾ ಅವರ ಕಚೇರಿ ನೆಲಸಮ ಮಾಡದಿರಲು ಸೂಚಿಸಿದೆ. ಮುಂಬೈ ಪಾಲಿಕೆಯ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ಕಂಗನಾಗೆ ನ್ಯಾಯಾಲಯ ರಿಲೀಫ್ ನೀಡಿದೆ. ಈಗಾಗಲೇ ಕಂಗನಾ ಅವರ ಬಂಗಲೆಯನ್ನು ಸಾಕಷ್ಟು ಹಾನಿ ಮಾಡಲಾಗಿದೆ.

  ಕಂಗನಾ ಕಾನೂನು ಹೋರಾಟ

  ಕಂಗನಾ ಕಾನೂನು ಹೋರಾಟ

  ಕಂಗನಾ ರಣಾವತ್ ಅವರ ಆಸ್ತಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಮತ್ತು ವಿವರಗಳನ್ನು ಮುಂಬೈ ಪಾಲಿಕೆ ಗುರುವಾರ ಮಧ್ಯಾಹ್ನ 3 ಗಂಟೆಗೆ ನ್ಯಾಯಾಧೀಶರ ಮುಂದೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಈ ಕುರಿತು ಕಂಗನಾ ರಣಾವತ್ ವಕೀಲ ರಿಜ್ವಾನ್ ಸಿದ್ದಿಕಿ ಪ್ರತಿಕ್ರಿಯೆ ನೀಡಿದ್ದು, ''ಬಿಎಂಸಿ ನೀಡಿರುವ ನೋಟಿಸ್ ಕಾನೂನುಬಾಹಿರ ಮತ್ತು ಅವರು ಅಕ್ರಮವಾಗಿ ಕಂಗನಾ ಕಚೇರಿಯ ಆವರಣಕ್ಕೆ ಪ್ರವೇಶಿಸಿದರು. ಸದ್ಯಕ್ಕೆ ಆವರಣದಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ'' ಎಂದು ಮಾಹಿತಿ ನೀಡಿದ್ದಾರೆ.

  English summary
  Actress Kangana Ranaut warns to CM Uddhav Thackeray. Kangana Says that My home was demolished today, your arrogance will crumble tomorrow.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X