For Quick Alerts
  ALLOW NOTIFICATIONS  
  For Daily Alerts

  ಮತ್ತೆ ಮಣಿಕರ್ಣಿಕಾ ಅವತಾರದಲ್ಲಿ ಕಂಗನಾ ರಣೌತ್

  |

  ನಟಿ ಕಂಗನಾ ರಣೌತ್ ಅವರು ಮತ್ತೆ ಮಣಿಕರ್ಣಿಕಾ ಸಿನಿಮಾದಲ್ಲಿ ನಟಿಸಲಿದ್ದಾರೆ. 2019 ರಲ್ಲಿ ಬಿಡುಗಡೆ ಆಗಿದ್ದ 'ಮಣಿಕರ್ಣಿಕಾ; ಕ್ವೀನ್ ಆಫ್ ಝಾನ್ಸಿ' ಸಿನಿಮಾದ ಮುಂದುವರೆದ ಭಾಗದಲ್ಲಿ ನಟಿಸಲಿದ್ದಾರೆ ಕಂಗನಾ.

  ಈ ಬಾರಿ ವೀರ ನಾರಿ ದಿದ್ದಾಳ ಕುರಿತಾಗಿ ಸಿನಿಮಾ ಇರಲಿದ್ದು, ಸಿನಿಮಾಕ್ಕೆ 'ಮಣಿಕರ್ಣಿಕಾ; ದಿ ಲಿಜೆಂಡ್ ಆಫ್ ದಿದ್ದಾ' ಹೆಸರನ್ನು ಸಿನಿಮಾಕ್ಕೆ ಇಡಲಾಗಿದೆ.

  ದಿದ್ದಾ ಕಾಶ್ಮೀರವನ್ನು ಎರಡು ದಶಕಗಳ ಕಾಲ ಆಳಿದ ರಾಣಿಯಾಗಿದ್ದಳು. ಕಾಶ್ಮೀರದ ಕ್ಲಿಯೊಪಾತ್ರ ಎಂದ ಕರೆಯಲಾಗುವ ದಿದ್ದಾ, ಪೊಲಿಯೋ ಪೀಡಿತಳಾಗಿದ್ದರೂ ಸಹ ಎರಡು ಬಾರಿ ತುರ್ಕಿಶರನ್ನು ಸೋಲಿಸಿದ್ದಳು. ವೀರನಾರಿ ದಿದ್ದಾಳ ಪಾತ್ರದಲ್ಲಿ ಕಂಗನಾ ನಟಿಸಲಿದ್ದಾರೆ.

  ದಿದ್ದಾಳ ಸಿನಿಮಾವನ್ನು ಕಂಗನಾ ರಣೌತ್ ಹಾಗೂ ಕಮಲ್ ಜೈನ್ ಒಟ್ಟಿಗೆ ನಿರ್ಮಾಣ ಮಾಡಲಿದ್ದಾರೆ. ಮೊದಲ ಮಣಿಕರ್ಣಿಕಾ ಸಿನಿಮಾವನ್ನು ಕಂಗನಾ ರಣೌತ್ ನಿರ್ದೇಶನ ಮಾಡಿದ್ದರು. ಇದೀಗ ಮಣಿಕರ್ಣಿಕಾ ದ ಎರಡನೇ ಸಿನಿಮಾವನ್ನು ಅವರೇ ನಿರ್ದೇಶಿಸುತ್ತಾರಾ ನೋಡಬೇಕಿದೆ.

  'ಮಣಿಕರ್ಣಿಕಾ; ಕ್ವೀನ್ ಆಫ್ ಝಾನ್ಸಿ' ಸಿನಿಮಾ ಹಲವು ವಿವಾದಗಳಿಗೆ ಕಾರಣವಾಗಿತ್ತು. ಮೊದಲಿಗೆ ಆ ಸಿನಿಮಾದ ನಿರ್ದೇಶಕ ಕ್ರಿಶ್ ಅನ್ನು ಸಿನಿಮಾದಿಂದ ಹೊರಗಿಡಲಾಯಿತು. ನಂತರ ಕಂಗನಾ, ತಾವೇ ನಿರ್ದೇಶಕಿ ಎಂದು ಕರೆದುಕೊಂಡರು. ಸೋನು ಸೂದ್ ನಟಿಸಿದ್ದ ಎಲ್ಲ ದೃಶ್ಯಗಳನ್ನು ಕತ್ತರಿಸಿ, ಬೇರೊಬ್ಬ ನಟನನ್ನು ಹಾಕಿಕೊಂಡು ಚಿತ್ರೀಕರಣ ಮಾಡಲಾಗಿತ್ತು.

  ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada

  ಪ್ರಸ್ತುತ 'ಮಣಿಕರ್ಣಿಕಾ; ದಿ ಲಿಜೆಂಡ್ ಆಫ್ ದಿದ್ದಾ' ಸಿನಿಮಾದ ಚಿತ್ರೀಕರಣವು ಜನವರಿ ಅಂತ್ಯದಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ.

  English summary
  Kangana Ranaut will act in Manikarnika's sequel movie, 'Manikarnika; The Legend Of Didda'. Kangana will produce the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X