For Quick Alerts
  ALLOW NOTIFICATIONS  
  For Daily Alerts

  ನಟಿ ಕಂಗನಾ ರಣಾವತ್‌ಗೆ ರಿಲೀಫ್ ನೀಡಿದ ಬಾಂಬೆ ಹೈ ಕೋರ್ಟ್

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಸಹೋದರಿ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ರದ್ದು ಪಡಿಸುವಂತೆ ಬಾಂಬೆ ಹೈ ಕೋರ್ಟ್‌ನಲ್ಲಿ ಮನವಿ ಮಾಡಲಾಗಿದೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ನಟಿಗೆ ರಿಲೀಫ್ ನೀಡಿದೆ.

  ಸಾಮಾಜಿಕ ಜಾಲತಾಣದಲ್ಲಿ ಕೋಮು ಉದ್ವಿಗ್ನತೆಯನ್ನು ಹರಡುವ ಉದ್ದೇಶದಿಂದ ಪೋಸ್ಟ್‌ಗಳನ್ನು ಹಾಕಿದ್ದಾರೆ ಎಂಬ ಆರೋಪದಲ್ಲಿ ಕಂಗನಾ ಹಾಗೂ ಸಹೋದರಿ ರಂಗೋಲಿ ವಿರುದ್ಧ ಕೇಸ್ ದಾಖಲಾಗಿತ್ತು.

  ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಕಂಗನಾ ರಣೌತ್

  ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಮೂರು ಬಾರಿ ಸಮನ್ಸ್ ನೀಡಿದರೂ ನಟಿಯರು ಬಂದಿಲ್ಲ. ಕೊನೆಯದಾಗಿ ನೀಡಿದ ಸಮನ್ಸ್ ಪ್ರಕಾರ ನವೆಂಬರ್ 23 ರಂದು ಕಂಗನಾ ಮುಂಬೈ ಪೊಲೀಸರ ಎದುರು ಹಾಜರಾಗಬೇಕಿತ್ತು.

  ಕಂಗನಾ ವಿರುದ್ಧ ಎಫ್ ಐ ಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಬಾಂಬೆ ಹೈ ಕೋರ್ಟ್ ಜನವರಿ 8ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಈ ಮೂಲಕ ಬಂಧನ ಭೀತಿಯಲ್ಲಿದ್ದ ನಟಿಗೆ ರಿಲೀಫ್ ಸಿಕ್ಕಿದೆ.

  ಜನವರಿ 8ರವರೆಗೂ ಮುಂಬೈ ಪೊಲೀಸರು ಕಂಗನಾ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

  ಕಂಗನಾಗೆ ಮೂರನೇ ಬಾರಿ ಸಮನ್ಸ್ ನೀಡಿದ ಮುಂಬೈ ಪೊಲೀಸರು

  ರಾಯರು ಅಂದ್ರೆ ಯಾಕೆ ಅಷ್ಟು ಭಕ್ತಿ ಅನ್ನೋದನ್ನ ಹೇಳಿದ ಜಗ್ಗೇಶ್ | Jaggesh 40 Years Cine Journey

  ಸದ್ಯಕ್ಕೆ ಕೋರ್ಟ್‌ನಿಂದ ರಿಲೀಫ್ ಸಿಕ್ಕಿದರೂ ನಟಿಗೆ ಮಾತ್ರ ಕಂಟಕ ತಪ್ಪಿಲ್ಲ. ಜನವರಿ 8 ರಂದು ವಿಚಾರಣೆಯ ಬಳಿಕ ಈ ಪ್ರಕರಣ ಯಾವ ದಿಕ್ಕಿನತ್ತ ಸಾಗಲಿದೆ ಎಂದು ನೋಡಬೇಕಿದೆ. ಇನ್ನುಳಿದಂತೆ ಜೆ ಜಯಲಲಿತಾ ಅವರ ಬಯೋಪಿಕ್ ತಲೈವಿ ಸಿನಿಮಾದಲ್ಲಿ ಕಂಗನಾ ನಟಿಸುತ್ತಿದ್ದಾರೆ.

  English summary
  Bollywood actress Kangana Ranaut, sister will appear before Mumbai cops on January 8, orders Bombay High Court.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X