twitter
    For Quick Alerts
    ALLOW NOTIFICATIONS  
    For Daily Alerts

    'ಕಂಗನಾ ರಣಾವತ್ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ' ಎಂದ ನಿರ್ದೇಶಕ

    |

    ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ನ್ಯಾಯ ಸಿಗಬೇಕು ಎಂದು ಕೇಳಿದ ನಟಿಯೇ ಈಗ ನನಗೆ ಅನ್ಯಾಯವಾಗ್ತಿದೆ ಎಂದು ಪ್ರತಿಭಟಿಸುತ್ತಿದ್ದಾಳೆ. ಸುಶಾಂತ್ ಸಾವಿನ ತನಿಖೆ, ಡ್ರಗ್ಸ್ ಆರೋಪ, ರಿಯಾ ಚಕ್ರವರ್ತಿ ವಿಚಾರಣೆ ಎಲ್ಲವನ್ನು ಮೀರಿ ಈಗ ಕಂಗನಾ ರಣಾವತ್ ಮುಂಬೈನ ಹಾಟ್ ಟಾಪಿಕ್ ಆಗಿದ್ದಾರೆ.

    ವಿಷಯ ಸಂಪೂರ್ಣವಾಗಿ ರಾಜಕೀಯ ತಿರುವು ಪಡೆದುಕೊಂಡಿದೆ. ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಕಂಗನಾ ಹೋರಾಟಕ್ಕೆ ನಿಂತಿದ್ದಾರೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಸಮರ ಸಾರಿದ್ದಾರೆ.

    ಇಂದು ನನ್ನ ಮನೆ ಮುರಿದಿದೆ, ನಾಳೆ ನಿನ್ನ ದುರಹಂಕಾರ ಮುರಿಯಲಿದೆ: ಉದ್ಧವ್ ಠಾಕ್ರೆಗೆ ವಿರುದ್ಧ ಕಂಗನಾ ಕಿಡಿಇಂದು ನನ್ನ ಮನೆ ಮುರಿದಿದೆ, ನಾಳೆ ನಿನ್ನ ದುರಹಂಕಾರ ಮುರಿಯಲಿದೆ: ಉದ್ಧವ್ ಠಾಕ್ರೆಗೆ ವಿರುದ್ಧ ಕಂಗನಾ ಕಿಡಿ

    ಮಹಾಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಕಂಗನಾಗೆ ಬಿಜೆಪಿ ಬೆಂಬಲಿಸುತ್ತಿರುವುದು ತಿಳಿದಿರುವ ವಿಚಾರವೇ. ಮುಂಬೈನಲ್ಲಿ ಸದ್ಯ ನಡೆಯುತ್ತಿರುವ ಪರಿಸ್ಥಿತಿಯನ್ನು ಗಮನಿಸುತ್ತಿದ್ದರೆ ಕಂಗನಾ ರಣಾವತ್ ಮಹಾರಾಷ್ಟ್ರಕ್ಕೆ ಮುಂದಿನ ಮುಖ್ಯಮಂತ್ರಿ ಆಗಬಹುದು ಎಂಬ ಚರ್ಚೆ ಕೇಳಿ ಬರ್ತಿದೆ. ಮುಂದೆ ಓದಿ...

    ಸವಾಲು ಹಾಕಿ ಮುಂಬೈಗೆ ಬಂದ ಕಂಗನಾ

    ಸವಾಲು ಹಾಕಿ ಮುಂಬೈಗೆ ಬಂದ ಕಂಗನಾ

    ಮುಂಬೈ ಪೊಲೀಸರ ಕ್ರಮದಿಂದ ಬೇಸತ್ತ ಕಂಗನಾ, 'ಮುಂಬೈ ಪಾಕ್ ಆಕ್ರಮಿತ ಪ್ರದೇಶ' ಎಂದು ಟೀಕಿಸಿದರು. ಇದಕ್ಕೆ ತಿರುಗೇಟು ನೀಡಿದ ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್ ''ನೀನು ಮುಂಬೈಗೆ ಬರಬೇಡ'' ಎಂದರು. 'ನಾನು ಮುಂಬೈಗೆ ಬಂದೇ ಬರ್ತೀನಿ, ತಾಕತ್ ಇದ್ದರೆ ತಡೆಯಿರಿ' ಎಂದು ಸವಾಲ್ ಹಾಕಿದ ಕಂಗನಾ ನಿನ್ನೆ ಮುಂಬೈಗೆ ಆಗಮಿಸಿದ್ದಾರೆ. ಕೇಂದ್ರದ ಸೂಚನೆಯಂತೆ ಹಿಮಾಚಲ ಸರ್ಕಾರ ನೀಡಿದ್ದ 'ವೈ' ಶ್ರೇಣಿಯ ಭದ್ರತೆಯೊಂದಿಗೆ ಕಂಗನಾ ಮುಂಬೈ ತಲುಪಿದರು.

    ಕಚೇರಿ ನೆಲಸಮಕ್ಕೆ ಮುಂದಾಗಿದ್ದ ಪಾಲಿಕೆ

    ಕಚೇರಿ ನೆಲಸಮಕ್ಕೆ ಮುಂದಾಗಿದ್ದ ಪಾಲಿಕೆ

    ಅತ್ತ ಮುಂಬೈ ಕಡೆ ಕಂಗನಾ ಪ್ರಯಾಣ ಮಾಡುತ್ತಿದ್ದಂತೆ ಇತ್ತ ಮುಂಬೈನಲ್ಲಿದ್ದ ಕಂಗನಾ ರಣಾವತ್ ಅವರ ಕಚೇರಿಯನ್ನು ಪಾಲಿಕೆ ಅಧಿಕಾರಿಗಳು ನೆಲಸಮ ಮಾಡಲು ಮುಂದಾಗಿದ್ದರು. ಜೆಸಿಬಿ ಯಂತ್ರ ಬಳಸಿ ಸಿಬ್ಬಂದಿಗಳು ಕಟ್ಟಡ ಉರುಳಿಸುವ ಕಾರ್ಯ ಆರಂಭಿಸಿದ್ದರು. ಅಷ್ಟೊತ್ತಿಗೆ ಕಂಗನಾ ರಣಾವತ್ ಪರ ವಕೀಲರು ಹೈ ಕೋರ್ಟ್‌ನಿಂದ ತಡೆಯಾಜ್ಞೆ ತಂದರು. ಸದ್ಯಕ್ಕೆ ಕಂಗಣಾ ಕಚೇರಿ ನೆಲಸಮ ಮಾಡುವ ಕಾರ್ಯ ನಿಂತಿದೆ.

    ಕಂಗನಾ ಕಚೇರಿ ನೆಲಸಮ ಕಾರ್ಯಕ್ಕೆ ಚಾಲನೆ: 'ಇದು ಪ್ರಜಾಪ್ರಭುತ್ವದ ಸಾವು' ಎಂದ ನಟಿಕಂಗನಾ ಕಚೇರಿ ನೆಲಸಮ ಕಾರ್ಯಕ್ಕೆ ಚಾಲನೆ: 'ಇದು ಪ್ರಜಾಪ್ರಭುತ್ವದ ಸಾವು' ಎಂದ ನಟಿ

    ಇಂದು ನನ್ನ ಮನೆ, ನಾಳೆ ನಿನ್ನ ಅಹಂಕಾರ

    ಇಂದು ನನ್ನ ಮನೆ, ನಾಳೆ ನಿನ್ನ ಅಹಂಕಾರ

    ಕಂಗನಾ ರಣಾವತ್ ಕಚೇರಿ ಉರುಳಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಂಗನಾ ಬಹಿರಂಗವಾಗಿ ಟೀಕಿಸಿದ್ದಾರೆ. ''ಇಂದು ನನ್ನ ಮನೆ ಮುರಿದಿದೆ, ನಾಳೆ ನಿನ್ನ ಅಹಂಕಾರ ಮುರಿಯಲಿದೆ'' ಎಂದು ಉದ್ಧವ್ ಠಾಕ್ರೆ ವಿರುದ್ಧ ಕಿಡಿಕಾರಿದ್ದರು. ಇಂದು ಅದೇ ವಿಚಾರವಾಗಿ ಮತ್ತೆ ಟ್ವೀಟ್ ಮಾಡಿರುವ ಕಂಗನಾ, ''ಇದು ಶಿವಸೇನೆ ಅಲ್ಲ, ಸೋನಿಯಾ ಸೇನೆ'' ಎಂದು ವಾಗ್ದಾಳಿ ನಡೆಸಿದ್ದಾರೆ.

    ಕಂಗನಾ ಮುಂದಿನ ಮುಖ್ಯಮಂತ್ರಿ!

    ಕಂಗನಾ ಮುಂದಿನ ಮುಖ್ಯಮಂತ್ರಿ!

    ಮುಂಬೈನಲ್ಲಿ ನಡೆಯುತ್ತಿರುವ ಸದ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ''ಕಂಗನಾ ಅವರನ್ನು ನೋಡುತ್ತಿದ್ದರೆ ಮಹಾರಾಷ್ಟ್ರಕ್ಕೆ ಮುಂದಿನ ಮುಖ್ಯಮಂತ್ರಿ ಆಗ್ತಾರೆ'' ಎಂದು ಆರ್‌ಜಿವಿ ಕಾಮೆಂಟ್ ಮಾಡಿದ್ದಾರೆ. ಅಂದ್ರೆ, ಕಂಗನಾ ಪರವಾಗಿ ಆರ್‌ಜಿವಿ ಬೆಂಬಲಕ್ಕೆ ನಿಂತಿಲ್ಲ. ಆದರೆ, ಅವರ ನಡೆಯನ್ನು ವ್ಯಂಗ್ಯ ಮಾಡಿದ್ದಾರೆ.

    ಕಂಗನಾ ಸಿಎಂ ಆದರೆ....

    ಕಂಗನಾ ಸಿಎಂ ಆದರೆ....

    ಇದೇ ವಿಚಾರವಾಗಿ ಮತ್ತೊಂದು ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ''ಕಂಗನಾ ಮಹಾರಾಷ್ಟ್ರ ಸಿಎಂ, ಅರ್ನಬ್ ಗೋಸ್ವಾಮಿ ದೇಶದ ಪ್ರಧಾನಿಯಾದರೆ, ಶಿವಸೇನೆ ಮಾಯವಾಗುತ್ತದೆ, ಮುಂಬೈ ಪೊಲೀಸರ ಜಾಗಕ್ಕೆ ರಿಪಬ್ಲಿಕ್ ಟಿವಿ ಬರುತ್ತದೆ. ಕಾಂಗ್ರೆಸ್ ಇಟಲಿಗೆ ಹೋಗುತ್ತದೆ'' ಎಂದಿದ್ದಾರೆ.

    English summary
    Director Ram gopal varma said that 'Looks like Kangana ranaut for sure is going to be the next CM of Maharashtra'.
    Wednesday, September 16, 2020, 23:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X