ಅಂದು ಅಮಲಾ ಪೌಲ್, ಇಂದು ಕಂಗನಾ ರಣಾವತ್
ಬಾಲಿವುಡ್ ಮಂದಿಯ ಕಣ್ಣು ಸೌತ್ ಮೇಲೆ ಬಿದ್ದಿದೆ. ದಕ್ಷಿಣ ಭಾರತದ ಒಂದೊಂದೆ ಸಿನಿಮಾಗಳು ಹಿಂದಿಯಲ್ಲಿ ರಿಮೇಕ್ ಆಗುತ್ತಿವೆ. ಇದೀಗ ನಟಿ ಅಮಲಾ ಪೌಲ್ ನಟನೆಯ ಸಿನಿಮಾವೊಂದು ಬಾಲಿವುಡ್ ಗೆ ಹೊರಟಿದೆ.
ಇತ್ತೀಚಿಗಷ್ಟೆ 'ಆಡೈ' ಸಿನಿಮಾದಲ್ಲಿ ಅಮಲಾ ಪೌಲ್ ನಟಿಸಿದ್ದರು. ಈ ಸಿನಿಮಾ ಇದೀಗ ಬಾಲಿವುಡ್ ನಲ್ಲಿ ರಿಮೇಕ್ ಆಗುತ್ತಿದೆ. ಅಮಲಾ ಪೌಲ್ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸುತ್ತಿದ್ದಾರೆ. ನಿರ್ದೇಶಕ ವಿಕ್ರಂ ಭಟ್ ಈ ಸಿನಿಮಾದ ರಿಮೇಕ್ ಹಕ್ಕು ಖರೀದಿ ಮಾಡಿದ್ದಾರೆ.
'ಆಡೈ' ಮಹಿಳಾ ಪ್ರಧಾನ ಸಿನಿಮಾ ಆಗಿತ್ತು. ಒಬ್ಬ ಟಾಮ್ ಬಾಯ್ ಹುಡುಗಿಯ ಮೇಲೆ ಸಿನಿಮಾದ ಕಥೆ ಇತ್ತು. ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುವ ಹುಡುಗಿ, ಒಂದು ರಾತ್ರಿ ಸ್ನೇಹಿತರ ಜೊತೆಗೂಡಿ ಪಾರ್ಟಿ ಮಾಡುತ್ತಾಳೆ. ಪಾರ್ಟಿ ಮುಗಿದು ಬೆಳಗ್ಗೆ ಎದ್ದು ನೋಡಿದರೆ, ಆಕೆ ಬೆತ್ತಲೆ ಆಗಿರುತ್ತಾಳೆ.

ಬೆತ್ತಲೆ ಆಗಿರುವ ಆಕೆ ಹೀಗೆ ಆ ಕಚೇರಿಯಿಂದ ಆಚೆ ಬರುತ್ತಾಳೆ, ಆ ಸಂದರ್ಭದಲ್ಲಿ ಆಕೆಯೆ ಆಗುವ ತೊಂದರೆ ಏನು ಎನ್ನುವುದು ಸಿನಿಮಾದ ನಿರೂಪಣೆಯಾಗಿತ್ತು. ಸಿನಿಮಾದ ಸೆಕೆಂಡ್ ಹಾಫ್ ಪೂರ್ತಿ ನಾಯಕಿ ಬೆತ್ತಲೆಯಾಗಿಯೇ ಇರುತ್ತಾಳೆ. ಈ ಸವಾಲಿನ ಪಾತ್ರವನ್ನು ಸಮರ್ಥವಾಗಿ ಅಮಲಾ ನಿರ್ವಹಿಸಿದರು. ಈಗ ಕಂಗನಾ ಇದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಅಂದಹಾಗೆ, 'ಆಡೈ' ಸಿನಿಮಾವನ್ನು ರತ್ನ ಕುಮಾರ್ ನಿರ್ದೇಶನ ಮಾಡಿದ್ದರು. ಜುಲೈ 19, 2019ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ವಿಮರ್ಶಕರಿಂದ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಕ್ಲೈಮ್ಯಾಕ್ಸ್ ಭಾಗ ಬಿಟ್ಟರೆ ಇಡೀ ಸಿನಿಮಾ ಚೆನ್ನಾಗಿ ಇತ್ತು.


Click it and Unblock the Notifications











