For Quick Alerts
  ALLOW NOTIFICATIONS  
  For Daily Alerts

  ಇಂದಿರಾ ಗಾಂಧಿ ಚಿತ್ರದ ಬಗ್ಗೆ ಟ್ವಿಸ್ಟ್ ಕೊಟ್ಟ ಕಂಗಣಾ ರಣಾವತ್

  |

  'ತಲೈವಿ' ಸಿನಿಮಾ ಮುಗಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ತಮ್ಮ ಮುಂದಿನ ಚಿತ್ರವನ್ನು ನಿರ್ದೇಶಕ ಸಾಯಿ ಕಬೀರ್ ಜೊತೆ ಮಾಡುತ್ತಿದ್ದಾರೆ ಎಂಬ ಸುದ್ದಿ ವರದಿಯಾಗಿತ್ತು. ಇದೊಂದು ರಾಜಕೀಯ ಥ್ರಿಲ್ಲರ್ ಸಿನಿಮಾ ಆಗಿರಲಿದ್ದು, ತುರ್ತುಪರಿಸ್ಥಿತಿ ಕುರಿತು ಚಿತ್ರಕಥೆ ಮಾಡಲಾಗಿದೆ. ಇದರಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು.

  ಇಂದಿರಾ ಗಾಂಧಿ ಪಾತ್ರಕ್ಕಾಗಿ ಕಂಗನಾ ತಯಾರಿ ಸಹ ನಡೆಸಿದ್ದರು. ಆದ್ರೀಗ, 'ಕ್ವೀನ್' ಖ್ಯಾತಿಯ ನಟಿ ಕಂಗನಾ ಟ್ವಿಸ್ಟ್ ಕೊಟ್ಟಿದ್ದಾರೆ. ಇಂದಿರಾ ಗಾಂಧಿ ಆಧರಿತ ಚಿತ್ರವನ್ನು ನಾನೇ ನಿರ್ದೇಶನ ಮಾಡ್ತಿದ್ದೀನಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತು 'ಕೂ' ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

  ಜಯಲಲಿತಾ ಆಯ್ತು, ಇನ್ನೊಂದು ಲೆಜೆಂಡರಿ ಪಾತ್ರಕ್ಕೆ ಸಜ್ಜಾಗುತ್ತಿರುವ ಕಂಗನಾಜಯಲಲಿತಾ ಆಯ್ತು, ಇನ್ನೊಂದು ಲೆಜೆಂಡರಿ ಪಾತ್ರಕ್ಕೆ ಸಜ್ಜಾಗುತ್ತಿರುವ ಕಂಗನಾ

  ಇಂದಿರಾ ಗಾಂಧಿ ಚಿತ್ರಕ್ಕೆ ನಾನೇ ನಿರ್ದೇಶಕಿ

  ಇಂದಿರಾ ಗಾಂಧಿ ಚಿತ್ರಕ್ಕೆ ನಾನೇ ನಿರ್ದೇಶಕಿ

  'ಎಮರ್ಜೆನ್ಸಿ' ಚಿತ್ರಕ್ಕೆ ನಾನೇ ನಿರ್ದೇಶಕಿ ಎಂದು ಕಂಗನಾ ರಣಾವತ್ ಪ್ರಕಟಣೆ ಮಾಡಿದ್ದಾರೆ. ''ಒಂದು ವರ್ಷದಿಂದ ಎಮರ್ಜೆನ್ಸಿ ಕುರಿತು ಮಾಹಿತಿ ಕಲೆ ಹಾಕಿ, ಸಿದ್ದತೆ ಮಾಡಿದ್ದೇನೆ. ಈ ಚಿತ್ರವನ್ನು ನನಗಿಂತ ಉತ್ತಮವಾಗಿ ಮತ್ತೊಬ್ಬರು ನಿರ್ದೇಶಿಸಲು ಸಾಧ್ಯವಿಲ್ಲ. ಮತ್ತೊಮ್ಮೆ ನಿರ್ದೇಶಕಿ ಜವಾಬ್ದಾರಿ ತೆಗೆದುಕೊಳ್ಳುತ್ತಿರುವುದು ಖುಷಿ ಕೊಟ್ಟಿದೆ'' ಎಂದು ಬರೆದುಕೊಂಡಿದ್ದಾರೆ.

  ಇದೊಂದು ದೊಡ್ಡ ಪ್ರಾಜೆಕ್ಟ್ ಆಗಲಿದೆ

  ಇದೊಂದು ದೊಡ್ಡ ಪ್ರಾಜೆಕ್ಟ್ ಆಗಲಿದೆ

  ಈ ಕುರಿತು ಪಿಂಕ್‌ವಿಲ್ಲಾ ಜೊತೆ ಮಾತನಾಡಿರುವ ಕಂಗನಾ, ''ಇದುವರೆಗೂ ಇಂದಿರಾ ಗಾಂಧಿ ಸಿನಿಮಾವನ್ನು ತೆರೆಗೆ ತರಲು ಸಾಧ್ಯವಾಗಿಲ್ಲ. ಈಗ ನಾನು ಆ ಚಿತ್ರ ಮಾಡುತ್ತಿದ್ದೇನೆ. ಈ ಪ್ರಾಜೆಕ್ಟ್ ಮಾಡಲು ಬಹಳ ಉತ್ಸುಕನಾಗಿದ್ದೇನೆ. ಬರಹಗಾರ ರಿತೇಶ್ ಶಾ ನನ್ನ ಜೊತೆ ಕೆಲಸ ಮಾಡ್ತಿದ್ದಾರೆ. ಇದೊಂದು ಐತಿಹಾಸಿಕ ಜರ್ನಿ ಆಗಲಿದೆ'' ಎಂದಿದ್ದಾರೆ.

  ಸಾಯಿ ಕಬೀರ್ ಜೊತೆಗಿನ ಚಿತ್ರ ಯಾವುದು?

  ಸಾಯಿ ಕಬೀರ್ ಜೊತೆಗಿನ ಚಿತ್ರ ಯಾವುದು?

  ಅಂದ್ಹಾಗೆ, ಈ ಹಿಂದೆ ಪ್ರಕಟಿಸಿರುವಂತೆ ಸಾಯಿ ಕಬೀರ್ ನಿರ್ದೇಶನದಲ್ಲಿ ಬರಲಿರುವ ಚಿತ್ರದಲ್ಲಿ ಕಂಗನಾ, ಇಂದಿರಾ ಗಾಂಧಿ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಟ್ವಿಸ್ಟ್ ಕೊಟ್ಟ ಕಂಗನಾ, ''ಸಾಯಿ ಕಬೀರ್ ಜೊತೆ ಮಾಡುತ್ತಿರುವ ಸಿನಿಮಾ ಬೇರೆ. ಅದು ಪೊಲಿಟಿಕಲ್ ಥ್ರಿಲ್ಲರ್. ಮಣಿಕರ್ಣಿಕಾ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಆ ಪ್ರಾಜೆಕ್ಟ್‌ಗೆ ನಾನು ಸಹಕರಿಸುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.

  ಅಪ್ಪನ ಕನಸಿನ ಮನೆಯನ್ನು ವಾಪಾಸ್ ಕೊಡಿಸಿದ ಮಗ | Filmibeat Kannada
  ಮಣಿಕರ್ಣಿಕಾ ನಂತರ ಮತ್ತೆ ನಿರ್ದೇಶನ

  ಮಣಿಕರ್ಣಿಕಾ ನಂತರ ಮತ್ತೆ ನಿರ್ದೇಶನ

  ಈ ಹಿಂದೆ ನಿರ್ದೇಶಕ ಕ್ರಿಶ್, ಮಣಿಕರ್ಣಿಕಾ ಚಿತ್ರ ನಿರ್ದೇಶಿಸಿದರು. ಕಾರಣಾಂತರಗಳಿಂದ ನಿರ್ದೇಶಕ ಕ್ರಿಶ್, ಮಣಿಕರ್ಣಿಕಾ ಚಿತ್ರವನ್ನು ಅರ್ಧದಲ್ಲಿ ಕೈ ಬಿಟ್ಟರು. ಆಗ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡ ಕಂಗನಾ ಸಿನಿಮಾ ಮುಗಿಸಿ ತೆರೆಗೆ ತಂದಿದ್ದರು. ಇದೀಗ, ಇಂದಿರಾ ಕುರಿತು ಎಮರ್ಜೆನ್ಸಿ ಚಿತ್ರಕ್ಕೆ ಎರಡನೇ ಬಾರಿ ಆಕ್ಷನ್ ಕಟ್ ಹೇಳಲು ಬಾಲಿವುಡ್ ನಟಿ ನಿರ್ಧರಿಸಿರುವುದು ಕುತೂಹಲ ಹೆಚ್ಚಿಸಿದೆ.

  English summary
  Emergency - a film about Indira Gandhi: Kangana Ranaut to direct the film herself, says ‘I finally figured that no one can direct it better than me’.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X