For Quick Alerts
  ALLOW NOTIFICATIONS  
  For Daily Alerts

  ರಾಷ್ಟ್ರ ಪ್ರಶಸ್ತಿಗೂ ಕಂಗನಾ 'ಕ್ವೀನ್': ನಾಲ್ಕನೇ ಬಾರಿಗೆ ಅತ್ಯುನ್ನತ ಗೌರವ ಪಡೆದ ನಟಿ

  |

  'ಮಣಿಕರ್ಣಿಕಾ' ಹಾಗೂ 'ಪಂಗಾ' ಸಿನಿಮಾಗಳ ನಟನೆಗಾಗಿ ಕಂಗನಾ ರಣಾವತ್‌ಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಕಂಗನಾ ಅಭಿನಯಕ್ಕೆ ಸಿಕ್ಕ ನಾಲ್ಕನೇ ರಾಷ್ಟ್ರ ಪ್ರಶಸ್ತಿ ಇದಾಗಿದೆ.

  12 ವರ್ಷದಲ್ಲಿ ಕಂಗನಾ ನಾಲ್ಕು ಬಾರಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2006ರಲ್ಲಿ 'ಗ್ಯಾಂಗ್‌ಸ್ಟರ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಕಂಗನಾಗೆ ಚೊಚ್ಚಲ ಸಿನಿಮಾದಲ್ಲಿ ಫಿಲಂ ಫೇರ್ ಪ್ರಶಸ್ತಿ ಸಿಕ್ಕಿತ್ತು.

  ಕಣ್ಣಿಗಾಗಿ ಕಣ್ಣುಗಳ ಹುಡುಕಾಟದ ಹೋರಾಟ: ರಾಷ್ಟ್ರ ಪ್ರಶಸ್ತಿ ಗೆದ್ದ 'ಅಕ್ಷಿ' ಸಿನಿಮಾಕಣ್ಣಿಗಾಗಿ ಕಣ್ಣುಗಳ ಹುಡುಕಾಟದ ಹೋರಾಟ: ರಾಷ್ಟ್ರ ಪ್ರಶಸ್ತಿ ಗೆದ್ದ 'ಅಕ್ಷಿ' ಸಿನಿಮಾ

  2008ರಲ್ಲಿ ತೆರೆಕಂಡ 'ಫ್ಯಾಶನ್' ಚಿತ್ರಕ್ಕಾಗಿ ಮೊದಲ ಬಾರಿಗೆ ಕಂಗನಾ ರಾಷ್ಟ್ರ ಪ್ರಶಸ್ತಿ ಪಡೆದರು. ಮಧುರ್ ಭಂಡಾರ್ಕರ್ ನಿರ್ದೇಶಿಸಿದ್ದ 'ಫ್ಯಾಶನ್' ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿದ್ದರು. ಪ್ರಮುಖ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದರು. ಈ ಚಿತ್ರದ ಪೋಷಕ ನಟನೆಗಾಗಿ ಕಂಗನಾಗೆ ಮೊದಲ ಬಾರಿ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

  2014ರಲ್ಲಿ ವಿಕಾಸ್ ಭಾಲ್ ನಿರ್ದೇಶನದಲ್ಲಿ 'ಕ್ವೀನ್' ಸಿನಿಮಾ ಬಿಡುಗಡೆಯಾಯಿತು. ಈ ಚಿತ್ರದ ನಟನೆಯಗಾಗಿ ಕಂಗನಾಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ದೊರೆಯಿತು.

  2015ರಲ್ಲಿ ಮೂಡಿಬಂದಿದ್ದ 'ತನು ವೆಡ್ಸ್ ಮನು ರಿಟರ್ನ್ಸ್' ಚಿತ್ರದ ನಟನೆಗಾಗಿ ಮೂರನೇ ಬಾರಿಗೆ ಕಂಗನಾ ರಾಷ್ಟ್ರ ಪ್ರಶಸ್ತಿ ಒಲಿಸಿಕೊಂಡಿದ್ದರು.

  Harshika ಜೊತೆ ಕನ್ನಡದ ಹಾಡನ್ನು ಹಾಡಿ ಮಿಂಚಿದ ನಟ Govinda | Filmibeat Kannada

  ಈಗ 'ಮಣಿಕರ್ಣಿಕಾ' ಹಾಗೂ 'ಪಂಗಾ' ಸಿನಿಮಾಗಳ ಅಭಿನಯಕ್ಕಾಗಿ 2019ನೇ ವರ್ಷದ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 'ಮಣಿಕರ್ಣಿಕಾ' ಚಿತ್ರದಲ್ಲಿ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಪಾತ್ರದಲ್ಲಿ ಕಂಗನಾ ಅಭಿನಯಿಸಿದ್ದರು. 'ಪಂಗಾ' ಸಿನಿಮಾದಲ್ಲಿ ವಿವಾಹಿತ ಮಹಿಳೆಯಾಗಿ ನಟಿಸಿದ್ದರು.

  English summary
  Kangana Ranaut wins a National Award Best actress for Manikarnika and Panga movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X