For Quick Alerts
  ALLOW NOTIFICATIONS  
  For Daily Alerts

  ಕರಾವಳಿ-ಮಲೆನಾಡಿನ ವಿಶೇಷ ಖಾದ್ಯಕ್ಕೆ ಕಂಗನಾ ಫಿದಾ: ಪತ್ರೊಡೆ ಸವಿದು ನಟಿ ಹೇಳಿದ್ದೇನು?

  By ಫಿಲ್ಮ್ ಡೆಸ್ಕ್
  |

  ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಭಾಗದದಲ್ಲಿ ವಿಷೇಶವಾಗಿ ತಯಾರಿಸುವ ಖಾದ್ಯ ಪತ್ರೊಡೆ. ಮಳೆಗಾಲದಲ್ಲಿ ತೋಟ, ಗದ್ದೆಗಳಲ್ಲಿ ಬೆಳೆಯುವ ಕೆಸುವಿನ ಎಲೆಯಿಂದ ಈ ಖಾದ್ಯ ತಯಾರಿಸುತ್ತಾರೆ. ಈ ಭಾಗದವರಿಗೆ ಪತ್ರೊಡೆ ಅಂದರೆ ಅಚ್ಚುಮೆಚ್ಚು. ಮಳೆಗಾಲದ ಆಷಾಢ ಮಾಸದ ಸಮಯದಲ್ಲಿ ಈ ವಿಶೇಷವಾದ ಖಾದ್ಯವನ್ನು ತಯಾರಿಸುತ್ತಾರೆ.

  ಈ ಪತ್ರೊಡೆ ಈಗ ಬಾಲಿವುಡ್ ನಲ್ಲಿಯೂ ಫೇಮಸ್ ಆಗಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ಪತ್ರೊಡೆ ಸವಿದು ಸಂತಸ ಪಟ್ಟಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಪತ್ರೊಡೆಯನ್ನು ತಿಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  'ಇಬ್ಬರು Below Average....,ಅವರ ಟೈಂ ಮುಗಿತು': 'ಲವ್‌ಬರ್ಡ್ಸ್' ಕಾಲೆಳೆದ ಕಂಗನಾ

  ಅಂದ್ಹಾಗೆ ಕಂಗನಾ ರಣಾವತ್ ಹಿಮಾಚಲ ಪ್ರದೇಶದವರು. ಆದರೂ ಪತ್ರೊಡೆಯ ಸ್ವಾದಿಷ್ಟ ಖಾದ್ಯ ಕಂಗನಾಗೆ ತುಂಬಾ ಇಷ್ಟ. ಅಮ್ಮ ನನಗೆ ತುಂಬಾ ಇಷ್ಟವಾದ ಪತ್ರೊಡೆ ಮತ್ತು ಲಸ್ಸಿ ಜಾಲ್ ಮಾಡಿದ್ದಾರೆ. ಕೆಸುವಿನ ಎಳೆಯಿಂದ ತಯಾರಿಸಿದ ಖಾದ್ಯ ಪತ್ರೊಡೆ. ನನ್ನ ನೆಚ್ಚಿನ ಗಿಡಮೂಲಿಕೆ ಇದು" ಎಂದು ಬರೆದುಕೊಂಡಿದ್ದಾರೆ.

  ಕಂಗನಾ ಮನೆಯ ಪತ್ರೊಡೆಗೆ ಕರಾವಳಿಯ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಕಂಕನಾ ನೆಪೋಟಿಸಂ ವಿರುದ್ಧ, ಬಾಲಿವುಡ್ ನ ಪ್ರಮುಖ ವ್ಯಕ್ತಿಗಳ ವಿರುದ್ಧ ಟ್ವೀಟ್ ಮಾಡುತ್ತ ಕಿಡಿ ಕಾರುತ್ತಿದ್ದರು. ಇದೀಗ ವಿಶೇಷ ಖಾದ್ಯ ಸವಿದು ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

  ಇನ್ನೂ ಕರಾವಳಿ ಮೂಲದ ಬಾಲಿವುಡ್ ನಟಿಯರಾದ ಶಿಲ್ಪ ಶೆಟ್ಟಿ, ದೀಪಿಕಾ ಪಡುಕೋಣೆ, ಪೂಜೆ ಹೆಗಡೆ ಸೇರಿದಂತೆ ಅನೇಕರು ಕರಾವಳಿಯ ವಿಶೇಷ ತಿನಿಸುಗಳ ಬಗ್ಗೆ ವಿಡಿಯೋ ಮೂಲಕ ಪರಿಚಯಿಸುತ್ತಿರುತ್ತಾರೆ. ಇದೀಗ ಕಂಗನಾ ಕೂಡ ಪತ್ರೊಡೆಗೆ ಫಿದಾ ಆಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  English summary
  Bollywood Actress Kangana Ranauth likes Malnad and Karavali special recipe patrode.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X