ಕಂಗನಾ ರನೌತ್ ಇಂದಿರಾ ಗಾಂಧಿಯಾಗಿ ಕಾಣಿಸಿಕೊಂಡಿರುವ ಎಮರ್ಜೆನ್ಸಿ ಸಿನಿಮಾ ಬಿಡುಗಡೆ ಮುಂದೂಡಿಕ್ಕೆ!
ನಟಿ ಕಂಗನಾ ರನೌತ್ ಅವರ ಚೊಚ್ಚಲ ನಿರ್ದೇಶನದ 'ಎಮರ್ಜೆನ್ಸಿ' ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ದೇಶದಲ್ಲಿನ ತುರ್ತು ಪರಿಸ್ಥಿಯಿ ಸಂದರ್ಭವನ್ನು ಚಿತ್ರಿಸಲಾಗಿದೆ ಎಂದು ಹೇಳಲಾಗಿರುವ ಸಿನಿಮಾ ಬಿಡುಗಡೆ ಬಗ್ಗೆ ನಟಿ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಘೋಷಣೆ ಮಾಡಿದ್ದಾರೆ.
2023 ರ ಕೊನೆಯ ತ್ರೈಮಾಸಿಕದಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುವ ಕಾರಣ ಈ ಸಿನಿಮಾ ಬಿಡುಗಡೆಯನ್ನು 2024 ಕ್ಕೆ ಮುಂದೂಡಲಾಗಿದೆ ಎಂದು ನಟಿ ಕಂಗನಾ ರನೌತ್ ಮಾಹಿತಿ ನೀಡಿದ್ದಾರೆ. ಈ ಹಿಂದೆ ಚಲನಚಿತ್ರವನ್ನು ನವೆಂಬರ್ 24, 2023 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.

'ಎಮರ್ಜೆನ್ಸಿ' ಸಿನಿಮಾ ಬಿಡುಗಡೆ ಮುಂದೂಡಿದ ಕಂಗನಾ ರನೌತ್
ಕಂಗನಾ ರನೌತ್ ತಮ್ಮ ಮುಂಬರುವ ಚಿತ್ರ 'ತೇಜಸ್' ಬಿಡುಗಡೆಗೆ ಕಾತೂರದಿಂದ ಕಾಯುತ್ತಿದ್ದಾರೆ. ಏರ್ ಫೋರ್ಸ್ ಬಗ್ಎಗ ಇರುವ ತೇಜಸ್ ಸಿನಿಮಾದಂತೆಯೇ ತನ್ನ ಚೊಚ್ಚಲ ನಿರ್ದೇಶನದ ರಾಜಕೀಯ ಸಿನಿಮಾ 'ಎಮರ್ಜೆನ್ಸಿ' ಯಲ್ಲಿಯೂ ಕಾಣಿಸಿಕೊಳ್ಳಲಿದ್ದು, ಹೇಚ್ಚು ನಿರೀಕ್ಷೆಯಲ್ಲಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ಈ ಬಗ್ಗೆ ಹೇಳಿದ್ದು ಹೀಗೆ. "ಆತ್ಮೀಯ ಸ್ನೇಹಿತರೇ, ನಾನು ಮಾಡಬೇಕಾದ ಪ್ರಮುಖ ಘೋಷಣೆ ಇದೆ. ಎಮರ್ಜೆನ್ಸಿ ಚಲನಚಿತ್ರವು ಕಲಾವಿದನಾಗಿ ನನ್ನ ಸಂಪೂರ್ಣ ಜೀವನದ ಕಲಿಕೆ ಮತ್ತು ಗಳಿಕೆಯ ಪರಾಕಾಷ್ಠೆಯಾಗಿದೆ. ಇದು ನನಗೆ ಕೇವಲ ಸಿನಿಮಾವಲ್ಲ. ಒಬ್ಬ ವ್ಯಕ್ತಿಯಾಗಿ ನನ್ನ ಯೋಗ್ಯತೆ ಮತ್ತು ಪಾತ್ರದ ಪರೀಕ್ಷೆಯಾಗಿದೆ" ಎಂದು ಹೇಳಿದ್ದಾರೆ.
ಮುಂದುವರಿದು, "ನಮ್ಮ ಟೀಸರ್ ಮತ್ತು ಚಿತ್ರತಂಡಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ನಮಗೆಲ್ಲರಿಗೂ ಉತ್ತೇಜನ ನೀಡಿದೆ. ನನ್ನ ಮನಸ್ಸು ಕೃತಜ್ಞತೆಯಿಂದ ತುಂಬಿದೆ. ನಾನು ಎಲ್ಲಿಗೆ ಹೋದರೂ ಜನರು ಎಮರ್ಜೆನ್ಸಿ ಸಿನಿಮಾ ಬಿಡುಗಡೆಯ ದಿನಾಂಕದ ಬಗ್ಗೆ ನನ್ನನ್ನು ಕೇಳುತ್ತಾರೆ" ಎಂದು ಮಾಹಿತಿ ನೀಡಿದ್ದಾರೆ.
"ನಾವು 24ನೇ ನವೆಂಬರ್ 2023 ಎಂದು ಎಮರ್ಜೆನ್ಸಿ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದೇವು. ಆದರೆ ನನ್ನ ಬ್ಯಾಕ್-ಟು-ಬ್ಯಾಕ್ ಸಿನಿಮಾಗಳು ರಿಲೀಸ್ ಆಗಲಿದ್ದು, 2024 ರ ಕೊನೆಯ ತ್ರೈಮಾಸಿಕದಲ್ಲಿ ಅತಿಯಾಗಿ ಸಿನಿಮಾಗಳು ಬಿಡುಗಡೆಯಾಗುವ ಕಾರಣ ನಾವು ಮುಂದಿನ ವರ್ಷಕ್ಕೆ (2024) ಎಮರ್ಜೆನ್ಸಿ ಬಿಡುಗಡೆಗೆ ನಿರ್ಧರಿಸಿದ್ದೇವೆ. ಹೊಸ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು" ಎಂದು ಹೇಳಿದ್ದಾರೆ.

ಎಮರ್ಜೆನ್ಸಿ
'ಎಮರ್ಜೆನ್ಸಿ' ಸಿನಿಮಾದ ಮೊದಲ ಟೀಸರ್ ಪ್ರೋಮೋವನ್ನು ಜೂನ್‌ನಲ್ಲಿ ಅನಾವರಣಗೊಳಿಸಲಾಗಿತ್ತು. ಇದು ಭಾರತದಲ್ಲಿ ತುರ್ತು ಪರಿಸ್ಥಿತಿಯ ಯುಗದ ಅವ್ಯವಸ್ಥೆ ಮತ್ತು ಪ್ರಕ್ಷುಬ್ಧತೆಯ ಬಗ್ಗೆ ಸುತ್ತು ಹಾಕುತ್ತದೆ ಎಂದು ಹೇಳಲಾಗಿದೆ. ಇಂದಿರಾ ಗಾಂಧಿಯಾಗಿ ಕಂಗನಾ ರನೌತ್, 'ಈ ದೇಶವನ್ನು ರಕ್ಷಿಸುವುದರಿಂದ ನನ್ನನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಏಕೆಂದರೆ, ಭಾರತವು ಇಂದಿರಾ, ಮತ್ತು ಇಂದಿರಾ ಭಾರತ!' ಎಂಬ ಪ್ರಭಾವಶಾಲಿ ಮಾತು ಹೇಳಿದ್ದರು.
"ಎಮರ್ಜೆನ್ಸಿ" ಸಿನಿಮಾವನ್ನು ಕಂಗನಾ 2021 ರಲ್ಲಿ ಘೋಷಿಸಿದ್ದರು. ಈ ಹಿಂದೆ, ಕಂಗನಾ ರನೌತ್ ಅವರು ಚಿತ್ರಕ್ಕೆ ಹಣ ಹಾಕಲು ತಮ್ಮ ಆಸ್ತಿಯನ್ನು ಅಡಮಾನವಿಟ್ಟಿದ್ದೆ ಎಂದು ಹೇಳಿಕೊಂಡಿದ್ದರು. ಈ ವರ್ಷದ ಜನವರಿಯಲ್ಲಿ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು.
ಕಂಗನಾ ಅವರ ಹೀನಾಯ ಸೋಲು ಕಂಡ ಧಕಡ್ ಸಿನಿಮಾಗೆ ಕೆಲಸ ಮಾಡಿದ್ದ ರಿತೇಶ್ ಷಾ ಈ ಸಿನಿಮಾಗೆ ಸ್ಕ್ರಿಪ್ಟ್ ಬರೆದಿದ್ದಾರೆ. ಚಿತ್ರದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ದಿವಂಗತ ಸತೀಶ್ ಕೌಶಿಕ್, ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











