ಎಮರ್ಜೆನ್ಸಿ ಚಿತ್ರದ ಬಿಡುಗಡೆ ದಿನಾಂಕ ಬಹಿರಂಗ; ನಾಯಕಿ, ನಿರ್ದೇಶಕಿಯಾಗಿ ಕಂಗನಾ ರನೌತ್!

ಬಾಲಿವುಡ್ ಚಿತ್ರರಂಗದಲ್ಲಿ ಸದಾ ಒಂದಲ್ಲೊಂದು ವಿಷಯದಿಂದ ಸುದ್ದಿಯಲ್ಲಿರುವ ನಟಿ ಎಂದರೆ ಅದು ಕಂಗನಾ ರನೌತ್. ಹೌದು, ಕಾಂಟ್ರವರ್ಸಿಯಲ್ ಕ್ವೀನ್ ಎಂದೇ ಗುರುತಿಸಿಕೊಂಡಿರುವ ಕಂಗನಾ ರನೌತ್ ತಮ್ಮ ನೇರ ಮಾತುಗಳಿಂದ ಖ್ಯಾತಿಯನ್ನು ಪಡೆದಿದ್ದಾರೆ.

ಇನ್ನು ಬಯೋಪಿಕ್‌ಗಳಲ್ಲಿ ನಟಿಸುವಲ್ಲಿ ನೈಪುಣ್ಯತೆಯನ್ನು ಹೊಂದಿರುವ ಕಂಗನಾ ರನೌತ್ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಬಯೋಪಿಕ್ ಚಿತ್ರ 'ತಲೈವಿ'ಯಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಹೀಗೆ ದಕ್ಷಿಣ ಭಾರತ ಕಂಡ ಧೀಮಂತ ನಾಯಕಿ ಜಯಲಲಿತಾ ಅವರ ಬಯೋಪಿಕ್ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಕಂಗನಾ ರನೌತ್ ಈಗ ದೇಶ ಕಂಡ ಜನಪ್ರಿಯ ಜನನಾಯಕಿ ಇಂದಿರಾ ಗಾಂಧಿ ಅವರ ಬಯೋಪಿಕ್ ಮೂಲಕ ಸದ್ದು ಮಾಡಲು ಮುಂದಾಗಿದ್ದಾರೆ.

Kangana Ranauts Emergency movie to hit screens on November 24th. Take a look

ಇಂದಿರಾ ಗಾಂಧಿ ದೇಶದ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತರಲಾಗಿದ್ದ 'ಸ್ಟೇಟ್ ಎಮರ್ಜೆನ್ಸಿ' ಮೇಲೆ ಈ ಚಿತ್ರವನ್ನು ಮಾಡಲಾಗಿದ್ದು, ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ಕಂಗನಾ ರನೌತ್ ನಿರ್ವಹಿಸುವುದರ ಜತೆಗೆ ನಿರ್ದೇಶನವನ್ನೂ ಸಹ ಮಾಡಿದ್ದಾರೆ.

ಕಂಗನಾ ರನೌತ್ ನಿರ್ದೇಶಕಿಯಾಗಿ ಆಕ್ಷನ್ ಕಟ್ ಹೇಳಿರುವ ಮೊದಲ ಚಿತ್ರ ಇದಾಗಿದ್ದು, ಮೊನ್ನೆ ( ಜೂನ್ 25 ) ಎಮರ್ಜೆನ್ಸಿ ಘೋಷಿಸಿ 48 ವರ್ಷಗಳು ತುಂಬಿದ ಕಾರಣ ಆ ದಿನದಂದು ವಿಶೇಷ ಟೀಸರ್ ಒಂದನ್ನು ಬಿಡುಗಡೆಗೊಳಿಸುವ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಚಿತ್ರ ವಿಶ್ವದಾದ್ಯಂತ ನವೆಂಬರ್ 24ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಲಾಗಿದ್ದು, ಈ ಚಿತ್ರದ ಮೂಲಕ ಕಂಗನಾ ರನೌತ್ ಯಾವ ರೀತಿಯ ಸಂಚಲನ ಸೃಷ್ಟಿಸಲಿದ್ದಾರೆ ಹಾಗೂ ಯಾವ ರೀತಿಯ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ..

More from Filmibeat

English summary
Kangana Ranaut's Emergency movie to hit screens on November 24th. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X