»   » ದೀಪಿಕಾ ನಂತರ ರಜಪೂತರ ಕೆಂಗಣ್ಣಿನಿಗೆ ಗುರಿಯಾದ ಕಂಗನಾ

ದೀಪಿಕಾ ನಂತರ ರಜಪೂತರ ಕೆಂಗಣ್ಣಿನಿಗೆ ಗುರಿಯಾದ ಕಂಗನಾ

Posted By:
Subscribe to Filmibeat Kannada
ದೀಪಿಕಾರ ಪದ್ಮಾವತ್ ನಂತರ ಇದೀಗ ಕಂಗನಾ ರನೌತ್ ರ ಮಣಿಕರ್ಣಿಕಾಗೆ ಗ್ರಹಚಾರ | FIlmibeat Kannada

ಕೆಲವು ದಿನಗಳ ಹಿಂದೆಯಷ್ಟೇ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿನಯದ ಪದ್ಮಾವತ್ ಸಿನಿಮಾ ವಿವಾದಲ್ಲಿ ಸಿಲುಕಿಕೊಂಡಿದ್ದು. ಕಳೆದ ವರ್ಷ ಬಿಡುಗಡೆ ಆಗಬೇಕಿದ್ದ ಸಿನಿಮಾ ಸಾಕಷ್ಟು ಹೋರಾಟಗಳ ಮಧ್ಯೆ ತಡವಾಗಿ ತೆರೆಗೆ ಬಂತು.

ರಜಪೂತ ಕರಣಿ ಸೇನಾ ಆದೇಶದಂತೆ ಸಿನಿಮಾದ ಶೀರ್ಷಿಕೆಯನ್ನ ಬದಲಾವಣೆ ಮಾಡಿಕೊಂಡಿತ್ತು ಪದ್ಮಾವತ್ ಸಿನಿಮಾತಂಡ. ಸದ್ಯ ವಿವಾದ ಅಂತ್ಯವಾಯಿತು ಇನ್ನು ಮುಂದೆ ಯಾವುದೇ ತೊಂದರೆ ಇಲ್ಲ ಎಂದು ಸಿನಿಮಾತಂಡ ನಿಟ್ಟುಸಿರು ಬಿಟ್ಟಿತ್ತು. ದೀಪಿಕಾ ನಿರಾಳವಾಗುವಷ್ಟರಲ್ಲಿ ಇದೇ ಸಮಸ್ಯೆಗೆ ನಟಿ ಕಂಗನಾ ಸಿಕ್ಕಿ ಹಾಕಿಕೊಂಡಿದ್ದಾರೆ.

ರಜಪೂತರ ಕೆಂಗಣ್ಣು ಈಗ ಕಂಗನಾ ರಣಾವತ್ ಮೇಲೆ ಬಿದ್ದಿದೆ. ಕಂಗನಾ ಅಭಿನಯದ ಸಿನಿಮಾದ ಚಿತ್ರೀಕರಣ ನಿಲ್ಲಿಸಬೇಕೆಂದು ರಜಪೂತರು ಹೋರಾಟ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಕಂಗನಾ ಅಭಿನಯದ ಯಾವ ಚಿತ್ರಕ್ಕೆ ರಜಪೂತರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಅಷ್ಟಕ್ಕೂ ಅಂತಹ ವಿಚಾರ ಸಿನಿಮಾದಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಮಣಿಕರ್ಣಿಕಾ ಸಿನಿಮಾಗೆ ವಿರೋಧ

ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯ ಮಣಿಕರ್ಣಿಕಾ ಸಿನಿಮಾಗೆ ರಜಪೂತರು ವಿರೋಧ ವ್ಯಕ್ತ ಪಡಿಸಿದ್ದಾರೆ. ರಾಜಸ್ಥಾನದ 'ಸರ್ವ ಬ್ರಾಹ್ಮಣರ ಮಹಾ ಸಭಾ' ಚಿತ್ರವನ್ನ ವಿರೋಧಿಸಲು ಶುರು ಮಾಡಿದೆ.

ರಾಣಿ ಲಕ್ಷ್ಮೀ ಬಾಯಿಗೆ ನಿಂದನೆ

ವಿದೇಶಿ ಬರಹಗಾರ ಬರೆದಿರುವ 'ರಾಣಿ' ಎನ್ನುವ ಪುಸ್ತಕವನ್ನ ಆಧಾರವಾಗಿಟ್ಟುಕೊಂಡು ಮಣಿಕರ್ಣಿಕಾ ಸಿನಿಮಾವನ್ನ ನಿರ್ದೇಶನ ಮಾಡಲಾಗಿದೆಯಂತೆ. ಪುಸ್ತಕದಲ್ಲಿ ರಾಣಿ ಲಕ್ಷ್ಮೀ ಬಾಯಿ ಹಾಗೂ ಬ್ರಿಟಿಷ್ ಪ್ರಜೆಯ ಮಧ್ಯೆ ಪ್ರೀತಿ ಇತ್ತು ಎಂದು ಬರೆಯಲಾಗಿದೆ. ಇದು ನಮ್ಮ ರಾಣಿಯ ತೇಜೋವಧೆ ಮಾಡುವಂತಹ ಕೆಲಸ ಎಂದು ಸರ್ವ ಬ್ರಾಹ್ಮಣರ ಮಹಾ ಸಭಾ ಅಭಿಪ್ರಾಯ ಪಟ್ಟಿದೆ.

ವಿವರ ನೀಡುವಂತೆ ನಿರ್ಮಾಪಕರಿಗೆ ಪತ್ರ

ಮಣಿಕರ್ಣಿಕಾ ಸಿನಿಮಾದಲ್ಲಿ ಯಾವ ವಿಚಾರಗಳನ್ನ ತೆಗೆದುಕೊಂಡಿದ್ದೀರ ಎಂದು ವಿವರಣೆ ನೀಡಿಬೇಕಾಗಿ ವಿನಂತಿ ಮಾಡಿ ಸರ್ವ ಬ್ರಾಹ್ಮಣರ ಮಹಾ ಸಭಾ ಅಧ್ಯಕ್ಷ ನಿರ್ಮಾಪಕ ಕಮಲ್ ಜೈನ್ ಅವರಿಗೆ ಪತ್ರ ಬರೆದಿದ್ದಾರೆ.

ಹೋರಾಟಕ್ಕೆ ಸಿದ್ದ ಎಂದ ಕರಣಿ ಸೇನಾ

ರಾಣಿ ಲಕ್ಷ್ಮೀ ಬಾಯಿ ಬ್ರಾಹ್ಮಣ ಹೆಮ್ಮೆ ಮಾತ್ರವಲ್ಲ, ಅವರು ರಜಪೂತರ ರಾಣಿ ಹಾಗಾಗಿ ಈ ಹೋರಾಟದಲ್ಲಿ ನಾವು ಕೂಡ ಭಾಗಿ ಆಗುತ್ತೇವೆ ಎಂದು ರಜಪೂತ ಕರಣಿ ಸೇನಾ ಅವರು ತಿಳಿಸಿದ್ದಾರೆ. ಒಟ್ಟಾರೆ ಬಾಲಿವುಡ್ ಮಂದಿಗೂ ರಜಪೂತ ರಾಣಿಯರ ಸಿನಿಮಾಗಳಿಗೂ ಮತ್ತೆ ಮತ್ತೆ ವಿವಾದ ಆಗುತ್ತಲೇ ಇದೆ.

English summary
Bollywood actress Kangana Ranawat Manikarnika's faces protests by brahman group. sarva Brahman Mahasabha has said the film is based on a foreigner's book and tries to dampen the queen's reputation.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada