ಅಸಹ್ಯ ರಾಷ್ಟ್ರ ಪಾಕಿಸ್ತಾನವನ್ನು ವಿಶ್ವ ಭೂಪಟದಿಂದ ಅಳಿಸಿಹಾಕಬೇಕು, ರಕ್ತಸಿಕ್ತ ಜಿರಳೆಗಳು ; ಗುಡುಗಿದ ಕಂಗನಾ ರಣಾವತ್..!
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಭಾರತೀಯರ ಪ್ರಾಣವನ್ನು ಬಲಿ ಪಡೆದ ಭಯೋತ್ಫಾದಕರ ವಿರುದ್ಧ ಭಾರತ ಸಮರ ಸಾರಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ 9 ಸ್ಥಳಗಳ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಿ ಉಗ್ರರ ತರಬೇತಿ ಕೇಂದ್ರಗಳನ್ನು ಧ್ವಂಸ ಮಾಡಿದೆ. ಇನ್ನು ಭಾರತದ ವೀರ ಯೋಧರ ಶಕ್ತಿಗೆ ಕೇವಲ ಜನಸಾಮಾನ್ಯರು ಮಾತ್ರ ಅಲ್ಲ
ಚಿತ್ರರಂಗದ ಅನೇಕರು ಸೆಲ್ಯೂಟ್ ಹೊಡೆದಿದ್ದಾರೆ. ಉಗ್ರರನ್ನು ಸಾಕಿ ಸಲುಹುತ್ತಿರುವ ಭಾರತದ ಹೆಣ್ಣು ಮಕ್ಕಳ ಸಿಂಧೂರವನ್ನು ಕಿತ್ತುಕೊಂಡ ಪಾಕಿಸ್ತಾನದ ವಿರುದ್ದ ಕೊತ ಕೊತ ಕುದಿಯುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆಕ್ರೋಶವನ್ನು ಕೂಡ ಹೊರ ಹಾಕುತ್ತಿದ್ದಾರೆ. ಇದರ ನಡುವೆ ಇದೀಗ ಕಂಗನಾ ರಣಾವತ್ ಪಾಪಿ ಪಾಕಿಸ್ತಾನದ ವಿರುದ್ಧ ಕೆಂಡ ಕಾರಿದ್ದಾರೆ.

ಹೌದು, ಚಿತ್ರಕ್ಕೆ ಮತ್ತು ಪಾತ್ರಕ್ಕೆ ತನು-ಮನ ಅರ್ಪಿಸುವುದಲ್ಲದೇ ಪ್ರಬಲ ಶಕ್ತಿಗಳ ಮುಂದೆ ತನ್ನ ವ್ಯಕ್ತಿತ್ವಕ್ಕೆ ಮಸಿ ತಗುಲದಂತೆ ಬಾಲಿವುಡ್ ನಲ್ಲಿ ಸ್ಟಾರ್ ಪಟ್ಟವನ್ನು ಅಲಂಕರಿಸಿದವರು ಕಂಗನಾ ರಣಾವತ್.
ಇಂಥಾ ಕಂಗನಾ ರಣಾವತ್ ಈಗ ಕೇವಲ ನಾಯಕಿ ನಿರ್ದೇಶಕಿ ಮಾತ್ರ ಅಲ್ಲ ಬಿಜೆಪಿ ಸಂಸದೆಯೂ ಹೌದು. ತಮ್ಮ ಹೇಳಿಕೆಗಳಿಂದ ಆಗಾಗ ಸುದ್ದಿಯಾಗುವ, ಚರ್ಚೆಗೆ ನಾಂದಿಯನ್ನು ಹಾಡುವ ಕಂಗನಾ ರಣಾವತ್ ಸದ್ಯ ಪಾಕಿಸ್ತಾನದ ವಿರುದ್ದ ಗುಡುಗಿದ್ದಾರೆ. ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಇರುವ ಕುರಿತು ಮಾತನಾಡಿರುವ ಕಂಗನಾ ಪಾಕಿಸ್ತಾನವನ್ನು ಭಯೋತ್ಫಾದಕರ ನಾಡು ಎಂದು ಕರೆದಿದ್ದಾರೆ. ವಿಶ್ವ ಭೂಪಟದಿಂದಲೇ ಪಾಕಿಸ್ತಾನವನ್ನು ತೆಗೆದು ಹಾಕಬೇಕು ಎಂದು ಹೇಳಿದ್ದಾರೆ.
ಇನ್ನು ಭಾರತದ ಮೇಲೆ ಪಾಕಿಸ್ತಾನ ಡ್ರೋನ್ ದಾಳಿಯನ್ನು ನಡೆಸುತ್ತಿದೆ. ಆದರೆ ಭಾರತೀಯ ಸಶಸ್ತ್ರ ಪಡೆಗಳು ಈ ದಾಳಿಯ ಪ್ರಯತ್ನಗಳನ್ನು ವಿಫಲಗೊಳಿಸುತ್ತಿವೆ. ಪಾಕಿಸ್ತಾನದ ಡ್ರೋನ್ ದಾಳಿಗಳನ್ನು ಹತ್ತಿಕ್ಕಿದ್ದಕ್ಕೆ ಭಾರತದ ವೀರ ಯೋಧರನ್ನು ಅಭಿನಂದಿಸಿರುವ ಕಂಗನಾ ಭಾರತದ S-400 ಮಿಸೈಲ್ ರಕ್ಷಾಣಾ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ.
ಪಾಕಿಸ್ತಾನದ ವಿರುದ್ದ ಕಿಡಿ ಕಾರುತ್ತಾ ಪಾಕಿಸ್ತಾನ ರಕ್ತ ಸಿಕ್ತ ಜಿರಳೆಗಳಿಂದ ಕೂಡಿದೆ, ಭಯೋತ್ಪಾದಕರಿಂದ ತುಂಬಿ ತುಳುಕುತ್ತಿದೆ, ಅದೊಂದು ಭಯಾನಕ ಮತ್ತು ಅಸಹ್ಯ ರಾಷ್ಟ್ರ ಅದನ್ನು ಈ ವಿಶ್ವದ ಮ್ಯಾಪ್‌ನಿಂದಲೇ ತೆಗೆದು ಹಾಕಬೇಕು ಎಂದು ಹೇಳಿದ್ದಾರೆ.
ಅಂದ್ಹಾಗೇ ಪಾಕಿಸ್ತಾನವನ್ನು ಭೂಪಟದಿಂದಲೇ ನಾಶ ಮಾಡಬೇಕು ಎಂದಿರುವ ಕಂಗನಾ ಇತ್ತೀಚೆಗೆ ಭಾರತದ ಎಸ್-400 ಮಿಸೈಲ್ ಡಿಫೆನ್ಸ್ ಸಿಸ್ಟಮ್‌ನ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡಿದ್ದರು. ಜಮ್ಮುನ ಗುರಿಯಾಗಿಸಲಾಗುತ್ತಿದೆ ಆದರೆ ಭಾರತದ ಏರ್ ಡಿಫೆನ್ಸ್ ವ್ಯವಸ್ಥೆಯು ಪಾಕಿಸ್ತಾನದ ಡ್ರೋನ್‌ಗಳನ್ನು ಹೊಡೆದು ಹಾಕಿವೆ ಎಂದು ಕಂಗನಾ ಹೇಳಿದ್ದರು. ಎಸ್-400 ಒಪ್ಪಂದವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ 2018ರಲ್ಲಿಯೇ ರಷ್ಯಾದ ಜೊತೆ ಮಾಡಿಕೊಂಡಿದ್ದಕ್ಕೆ ಹೆಮ್ಮೆಯನ್ನು ಕೂಡ ಪಟ್ಟಿದ್ದರು. ಮೋದಿ ಅವರನ್ನು ಶ್ಲಾಘಿಸಿದ್ದರು.
ಇನ್ನು ಜಮ್ಮು, ಸಾಂಬಾ, ಸತ್ವಾರಿ, ಅಮೃತ್ಸರ್, ಜಲಂಧರ್ ಮೊದಲಾದ ಕಡೆಗಳಲ್ಲಿ ನಿನ್ನೆ ಪಾಕ್ ಡ್ರೋನ್ ದಾಳಿಗೆ ಪ್ರಯತ್ನಿಸಿತ್ತು. ಈ ಕುರಿತು ಕೂಡ ಪೋಸ್ಟ್ ಹಂಚಿಕೊಂಡಿದ್ದ ಕಂಗನಾ 'ಸ್ಟೇ ಸ್ಟ್ರಾಂಗ್ ಜಮ್ಮು' ಎಂದು ಹೇಳಿದ್ದರು.
ಹೀಗೆ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಪಾಕಿಸ್ತಾನದ ವಿರುದ್ದ ನಿರಂತರವಾಗಿ ಕೆಂಡ ಕಾರುತ್ತಿರುವ ಕಂಗನಾ ರಣಾವತ್ ಭಾರತದ ಯೋಧರ ಕಾರ್ಯಕ್ಷಮತೆಯನ್ನು ಮೆಚ್ಚಿ ಪೋಸ್ಟ್‌ಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದ ವಿಚಾರಕ್ಕೆ ಬಂದರೆ ಕಂಗನಾ ರಣಾವತ್ ಸದ್ಯ ಭಾರತ ಭಾಗ್ಯ ವಿಧಾತಾ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದಲ್ಲದೇ ಬಾಲಿವುಡ್‌ನಿಂದ ಸೀದಾ ಹಾಲಿವುಡ್‌ಗೆ ಲಗ್ಗೆ ಇಟ್ಟಿರುವ ಕಂಗನಾ ರಣಾವತ್ ಬ್ಲೆಸಡ್ ಬಿ ದಿ ಎವಿಲ್ ಎಂಬ ಹಾರರ್ ಚಿತ್ರದಲ್ಲಿ ಕೂಡ ಅಭಿನಯಿಸಲಿದ್ದಾರೆ.


Click it and Unblock the Notifications










