twitter
    For Quick Alerts
    ALLOW NOTIFICATIONS  
    For Daily Alerts

    ಮಾನಹಾನಿ ಪ್ರಕರಣ: ಸಂಪೂರ್ಣ ವಿನಾಯಿತಿ ಕೋರಿದ ಕಂಗನಾ ರನೌತ್

    |

    ನಟಿ ಕಂಗನಾ ರನೌತ್ ಮೇಲೆ ಹಲವು ಪ್ರಕರಣಗಳು ಬಾಕಿ ಇವೆ. ತಮ್ಮ ಕಠುವಾದ ಟ್ವೀಟ್‌ಗಳಿಂದ, ಮಾನಹಾನಿಕರ ಟ್ವೀಟ್‌ಗಳಿಂದ ಹಲವು ಶತ್ರುಗಳನ್ನು ಪಡೆದಿರುವ ನಟಿ ಕಂಗನಾ ವಿರುದ್ಧ ಹಲವರು ಪ್ರಕರಣಗಳನ್ನು ದಾಖಲಿಸಿದ್ದಾರೆ.

    ದೇಶದ ಹಲವೆಡೆ ಕಂಗನಾ ವಿರುದ್ಧ ಪ್ರಕರಣಗಳು ದಾಖಲಾಗಿದ್ದು ಕೆಲವು ದೂರುಗಳನ್ನು ಸಿನಿಮಾ ಸೆಲೆಬ್ರಿಟಿಗಳೇ ನೀಡಿದ್ದಾರೆ. ಮಾನಹಾನಿ, ಸುಳ್ಳು ಮಾಹಿತಿ ಪ್ರಚಾರ ಸೇರಿದಂತೆ ಕೆಲವು ಗಂಭೀರ ಪ್ರಕರಣಗಳು ಕಂಗನಾ ವಿರುದ್ಧ ದಾಖಲಾಗಿದ್ದು, ಕೆಲವು ಪ್ರಕರಣಗಳಲ್ಲಿ ಕಂಗನಾ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿರುತ್ತದೆ.

    ಚಿತ್ರಕತೆ ರಚನೆಕಾರ, ಚಿತ್ರಸಾಹಿತಿ, ಮಾಜಿ ಸಂಸದ ಜಾವೇದ್ ಅಖ್ತರ್, ಕಂಗನಾ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದು, ಪ್ರಕರಣವು ವಿಚಾರಣೆಯ ಹಂತದಲ್ಲಿದೆ. ಈ ನಡುವೆ ಎಲ್ಲ ಮಾನಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಕೋರಿ ನಟಿ ಕಂಗನಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.

    Kangana Requested Court To Give Permanent Exemption In Defamation Case

    ''ದೇಶದ ವಿವಿದೆಡೆಗಳಲ್ಲಿ ಶೂಟಿಂಗ್‌ನಲ್ಲಿ ತೊಡಗಿಕೊಂಡಿರುತ್ತೇನೆ. ವಿಚಾರಣೆ ಸಮಯದಲ್ಲಿ ಅಲ್ಲಿಂದ ಮುಂಬೈಬೆ ಬರುವುದು ಕಷ್ಟಕರ ಕಾರ್ಯ. ಜೊತೆಗೆ ನನಗೆ ಹಾಗೂ ನನ್ನ ಸಿನಿಮಾ ನಿರ್ಮಾಣ ಸಂಸ್ಥೆಗೆ ಹೊರೆ. ಹಾಗಾಗಿ ನನಗೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ಕೊಡಿ. ವಿಚಾರಣೆಗಳಿಗೆ ನನ್ನ ವಕೀಲರು ಹಾಜರಾಗುತ್ತಾರೆ'' ಎಂದಿದ್ದಾರೆ ಕಂಗನಾ.

    ''ಯಾವುದೇ ಸಾಕ್ಷ್ಯಗಳ ಹೇಳಿಕೆಯನ್ನು ನನ್ನ ಅನುಪಸ್ಥಿತಿಯಲ್ಲಿ ರೆಕಾರ್ಡ್ ಮಾಡಿಕೊಳ್ಳಲು ನನ್ನ ಅಭ್ಯಂತರವಿಲ್ಲ'' ಎಂದು ಸಹ ಕಂಗನಾ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.

    Recommended Video

    ನಿಖಿಲ್ ಕುಮಾರಸ್ವಾಮಿ ಮನೇಲಿ ಸಂತೋಷ- ಸಂಭ್ರಮ ! | Oneindia Kannada

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಮಯದಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ನಟಿ ಕಂಗನಾ, 'ಬಾಲಿವುಡ್‌ನಲ್ಲಿ ಆತ್ಮಹತ್ಯೆ ಮಾಡಿಸುವ ಅಥವಾ ಆತ್ಮಹತ್ಯೆಗೆ ಪ್ರೇರೇಪಿಸುವ ಗ್ಯಾಂಗ್ ಒಂದು ಇದೆ ಎಂದು ಹೇಳಿ ಕೆಲವರ ಹೆಸರು ಹೇಳಿದ್ದರು. ಆ ಪಟ್ಟಿಯಲ್ಲಿ ಜಾವೇದ್ ಅಖ್ತರ್ ಹೆಸರನ್ನೂ ಸಹ ಸೇರಿಸಿದ್ದರು ನಟಿ ಕಂಗನಾ. ಹಾಗಾಗಿ ಜಾವೇದ್ ಅಖ್ತರ್ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

    English summary
    Kangana Ranaut requested court to give permanent exemption to attend court in defamation case filed by Javed Akhtar.
    Saturday, June 26, 2021, 17:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X