ಶಾರುಖ್ ಖಾನ್ ಹಾಗೂ ನಾನು ಈ ಯುಗದ ಕೊನೆಯ ಸೂಪರ್ ಸ್ಟಾರ್ಸ್ ಎಂದ ಕಂಗನಾ..!
ಕಂಗನಾ ರಣಾವತ್ ಈಗ ನಟಿಯಷ್ಟೇ ಅಲ್ಲ. ರಾಜಕರಾಣಿಯೂ ಹೌದು. ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಪರ ಕಣಕ್ಕಿಳಿಯತ್ತಿರುವ ಕಂಗನಾ ಹಿಂದೊಮ್ಮೆ ತಮ್ಮನ್ನ ತಾವು ಲತಾ ಮಂಗೇಶ್ಕರ್ ಅವರ ಜೊತೆ ಹೋಲಿಸಿಕೊಂಡಿದ್ದರು. ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡಿದ್ದರು. ಇಂಥ ಕಂಗನಾ ಇದೀಗ ಇನ್ನೊಮ್ಮೆ ತಮ್ಮನ್ನ ತಾವು ಬಾಲಿವುಡ್ ನ ಸೂಪರ್ ಸ್ಟಾರ್ ಜೊತೆ ಹೋಲಿಸಿಕೊಂಡಿದ್ದಾರೆ. ಆ ಸೂಪರ್ ಸ್ಟಾರ್ ಬೇರೆ ಯಾರು ಅಲ್ಲ ಬದಲಿಗೆ ಶಾರುಖ್ ಖಾನ್ ಅನ್ನುವುದೇ ಸದ್ಯದ ಚರ್ಚಿತ ವಿಷಯ
ಹೌದು, ನಿಮಗೆ ಗೊತ್ತು. ಕಂಗನಾ ರಣಾವತ್ ಅಭಿನಯದ ಯಾವ ಸಿನಿಮಾ ಕೂಡ ಇತ್ತೀಚಿನ ದಿನಗಳಲ್ಲಿ ಗೆದ್ದ ಉದಾಹರಣೆ ಇಲ್ಲ. ಕೊನೆಯದಾಗಿ ಕಂಗನಾ ಗೆಲುವಿನ ಮುಖವನ್ನ ನೋಡಿದ್ದು 2019ರಲ್ಲಿ. ಅದು ಮಣಿಕರ್ಣಿಕಾ ಚಿತ್ರದ ಮೂಲಕ. ಆ ನಂತರ ನಿರಂತರವಾಗಿ ಸೋಲನ್ನ ಅನುಭವಿಸುತ್ತಾ ಬಂದ ಕಂಗನಾ, ಶಾರುಖ್ ಖಾನ್ ಕೂಡ 10 ಫ್ಲಾಪ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ನಾನು ಅವರಂತೆಯೇ ಅಂದಿದ್ದಾರೆ. ಶಾರುಖ್ ಖಾನ್ ಹಾಗೂ ನಾನು ಈ ಕಲಿಯುಗದ ಕೊನೆಯ ಸೂಪರ್ ಸ್ಟಾರ್ಸ್ ಗಳು ಅಂದಿದ್ದಾರೆ.

ದೊಡ್ಡವರೆಲ್ಲ ಎಡವಿ ಬೀಳುವುದು ಸಹಜ. ಶಾರುಖ್ ಖಾನ್ ಕೂಡ ಎಡವಿ ಬಿದ್ದಿದ್ದಾರೆ. 10 ಪ್ಲಾಪ್ ಸಿನಿಮಾಗಳನ್ನ ಕೊಟ್ಟಿದ್ದಾರೆ ಎಂದಿರುವ ಕಂಗನಾ, ಪಠಾಣ್ ಚಿತ್ರದ ಮೂಲಕ ಮತ್ತೆ ಶಾರುಖ್ ಲಯಕ್ಕೆ ಮರಳಿದ್ದಾರೆ ಅಂದಿದ್ದಾರೆ. ಇನ್ನೂ ಕ್ವೀನ್ ಚಿತ್ರಕ್ಕೂ ಮುನ್ನ ನನ್ನ ಕೆಲ ಸಿನಿಮಾಗಳು ಸೋತಿದ್ದವು ಎಂದಿರುವ ಕಂಗನಾ ಕ್ವೀನ್ ನಂತರ ಮಣಿ ಕರ್ಣಿಕಾ ನನ್ನ ಕೈ ಹಿಡಿಯಿತು ಅಂದಿದ್ದಾರೆ. ಇನ್ನೂ ಎಮರ್ಜೆನ್ಸಿ ಸಿನಿಮಾ ಸದ್ಯದಲ್ಲಿಯೇ ತೆರೆಗೆ ಬರಲಿದೆ. ಯಾರಿಗೆ ಗೊತ್ತು ಆ ಸಿನಿಮಾ ಐತಿಹಾಸಿಕ ದಾಖಲೆಯನ್ನ ಬರೆದರು ಬರೆಯಬಹುದು ಎಂದಿದ್ದಾರೆ ಕಂಗನಾ ರಣಾವತ್
ಕಂಗನಾ ಅವರ ಈ ಹೇಳಿಕೆ ಈಗ ಬಾಲಿವುಡ್ ನಲ್ಲಿ ಹೊಸದೊಂದು ಚರ್ಚೆಯನ್ನ ಹುಟ್ಟು ಹಾಕಿದೆ. ಶಾರುಖ್ ಖಾನ್ ಎಲ್ಲಿ..? ಕಂಗನಾ ರಣಾವತ್ ಎಲ್ಲಿ..? ಹೋಲಿಕೆಗೂ ಇತಿ ಮಿತಿ ಬೇಡವಾ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಶಾರುಖ್ ಖಾನ್ ಅಭಿಮಾನಿ ಬಳಗ ಕಂಗನಾ ಅವರ ವಿರುದ್ದ ತಿರುಗಿ ಬಿದ್ದಿದೆ. ಇನ್ನು ಇದರ ನಡುವೆ ಸುಮ್ ಸುಮ್ನೆ ನಿಮ್ಮನ್ನ ನೀವು ಶಾರುಖ್ ಖಾನ್ ಅವರ ಜೊತೆ ಹೋಲಿಸಿಕೊಂಡು, ನಿಮ್ಮ ರಾಜಕೀಯದ ಬೆಳೆ ಬೇಯಿಸಿಕೊಳ್ಳುವ ಪ್ರಯತ್ನವನ್ನ ಮಾಡಬೇಡಿ ಎನ್ನುತ್ತಿದ್ದಾರೆ ಅನೇಕರು.

ಒಟ್ನಲ್ಲಿ ನೇರ ದಿಟ್ಟ ಮಾತುಗಳಿಂದ ಆಗಾಗ ಸದ್ದು ಮಾಡಿ, ಸುದ್ದಿಯಾಗುವ ಕಂಗನಾ ರಣಾವತ್ ಸದ್ಯಕ್ಕೆ ಶಾರುಖ್ ಖಾನ್ ಅವರ ಜೊತೆ ತಮ್ಮನ್ನ ತಾವು ಹೋಲಿಸಿಕೊಂಡು ಇನ್ನೊಮ್ಮೆ ಸುದ್ದಿಯಲ್ಲಿದ್ದಾರೆ. ಸುದ್ದಿ ಪ್ರಿಯೆ ಆಗಿರುವ ಕಂಗನಾ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾವ ಮ್ಯಾಜಿಕ್ ಮಾಡ್ತಾರೆ ಅನ್ನುವುದನ್ನ ಕಾದು ನೋಡಬೇಕಿದೆ.


Click it and Unblock the Notifications











