ದೀಪಿಕಾ ಪಡುಕೋಣೆಯನ್ನು ಬಂಧಿಸಿ: ಕಂಗನಾ ಗ್ಯಾಂಗ್‌ನಿಂದ ಒತ್ತಾಯ

ಹೃತಿಕ್ ರೋಶನ್, ಕರಣ್ ಜೋಹರ್, ಸೋನು ಸೂದ್, ಮಹೇಶ್ ಭಟ್, ತಾಪ್ಸಿ ಪನ್ನು ನಂತರ ಇದೀಗ ಕಂಗನಾ ಕಣ್ಣು ನಟಿ ದೀಪಿಕಾ ಪಡುಕೋಣೆ ಮೇಲೆ ಬಿದ್ದಂತಿದೆ.

Recommended Video

Madagaja ಚತ್ರೀಕರಣ ನಡೆದಿದ್ದು ಹೇಗೆ , ನಿರ್ದೇಶಕ Mahesh ಹೇಳ್ತಾರೆ ಕೇಳಿ | Filmibeat Kannada

ನಟಿ ಕಂಗನಾ ರಣೌತ್ ಅವರು ತಮ್ಮ ಡಿಜಿಟಲ್ ತಂಡ ಕಟ್ಟಿಕೊಡ್ಡಿಂದು ಅವರು ಕಂಗನಾ ಪರವಾಗಿ ಟ್ವೀಟ್‌ಗಳನ್ನು ಮಾಡುತ್ತಿರುತ್ತಾರೆ. ಇದೀಗ ಆ ಕಂಗನಾ ತಂಡವು ದೀಪಿಕಾ ವಿರುದ್ಧ ಆರೋಪಗಳನ್ನು ಮಾಡಿದೆ.

ದೀಪಿಕಾ ಪಡುಕೋಣೆಯನ್ನು ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಬೇಕು, ಆಕೆಯನ್ನು ವಶಕ್ಕೆ ಪಡೆಯಬೇಕು ಎಂದು ಕಂಗನಾ ತಂಡ ಒತ್ತಾಯಿಸಿದೆ.

ದೀಪಿಕಾ ಮೇಲೆ ಆರೋಪವೇಕೆ?

ದೀಪಿಕಾ ಮೇಲೆ ಆರೋಪವೇಕೆ?

ಸುಶಾಂತ್ ಖಿನ್ನತೆಯಿಂದ ಸಾವನ್ನಪ್ಪಿದ್ದಾರೆಂದು ನಂಬಿಸುವ ಸಲುವಾಗಿ ದೀಪಿಕಾ ಪಡುಕೋಣೆ ಖಿನ್ನತೆ ಬಗ್ಗೆ ಸಾಲು-ಸಾಲು ಟ್ವೀಟ್ ಮಾಡಿದ್ದರು. ಇದು ಅವರ ಕಾರ್ಯತಂತ್ರ ಹಾಗಾಗಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಎಂದು ಕಂಗನಾ ಟೀಮ್ ಒತ್ತಾಯಿಸಿದೆ.

ಖಿನ್ನತೆ ವಿರುದ್ಧ ದೀಪಿಕಾ ಅಭಿಯಾನ

ಖಿನ್ನತೆ ವಿರುದ್ಧ ದೀಪಿಕಾ ಅಭಿಯಾನ

ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಾಗ, ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರೆಂದು ಮುಂಬೈ ಪೊಲೀಸರು ಹೇಳಿದ್ದರು. ಇದನ್ನು ಆಧರಿಸಿ ದೀಪಿಕಾ ಪಡುಕೋಣೆ, ಟ್ವಿಟ್ಟರ್‌ನಲ್ಲಿ ಖಿನ್ನತೆಗೆ ವಿರುದ್ಧವಾಗಿ ಅಭಿಯಾನ ನಡೆಸಿದ್ದರು. ಸ್ವತಃ ದೀಪಿಕಾ ಪಡುಕೋಣೆ ಖಿನ್ನತೆಯಿಂದ ಬಳಲಿದ್ದರು.

ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ

ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ

ಕಂಗನಾ ತಂಡದ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದು, ಒಬ್ಬರು, 'ದೀಪಿಕಾಳನ್ನು ಶೀಘ್ರವಾಗಿ ಬಂಧಿಸಿ, ಆಕೆಯೇ ಮೊದಲು ಸುಶಾಂತ್ ಪ್ರಕರಣವನ್ನು ದಿಕ್ಕು ತಪ್ಪಿಸಿದ್ದು' ಎಂದು ಒತ್ತಾಯಿಸಿದ್ದಾರೆ. ಕೆಲವರು ದೀಪಿಕಾ ಪರವಾಗಿ ಸಹ ಟ್ವೀಟ್ ಮಾಡಿದ್ದಾರೆ.

ಸುಶಾಂತ್ ಪ್ರಕರಣಕ್ಕೆ ಭಾರಿ ತಿರುವು

ಸುಶಾಂತ್ ಪ್ರಕರಣಕ್ಕೆ ಭಾರಿ ತಿರುವು

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಸಖತ್ ತಿರುವು ಪಡೆದುಕೊಂಡಿದ್ದು ಸುಶಾಂತ್ ತಂದೆ ಕೆಕೆ ಸಿಂಗ್, ಸುಶಾಂತ್ ಪ್ರೇಯಸಿ ರೆಹಾ ಚಕ್ರವರ್ತಿ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಮತ್ತು ಕಳ್ಳತನ ಪ್ರಕರಣಗಳನ್ನು ದಾಖಲಿಸಿದ್ದಾರೆ. ರೆಹಾ ಚಕ್ರವರ್ತಿ ಅವರಿಗೆ ಬಂಧನ ಭೀತಿ ಎದುರಾಗಿದೆ.

More from Filmibeat

English summary
Kangana Ranaut team demand Deepika Padukone should remand for misleading Sushant case as depression.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X