For Quick Alerts
  ALLOW NOTIFICATIONS  
  For Daily Alerts

  ಹಳೆ ದ್ವೇಷ ಬದಿಗಿಟ್ಟು ಸೋನು ಸೂದ್‌ಗೆ ಮನವಿ ಮಾಡಿದ ಕಂಗನಾ

  |

  ಹಳೆಯ ದ್ವೇಷವನ್ನು ಬದಿಗಿಟ್ಟು ನಟಿ ಕಂಗನಾ ರನೌತ್, ಸೋನು ಸೂದ್‌ಗೆ ಮನವಿಯೊಂದನ್ನು ಮಾಡಿದ್ದಾರೆ.

  ನಟ ಸೋನು ಸೂದ್ ಅವರು ಪಂಜಾಬ್ ರಾಜ್ಯದ ಕೊರೊನಾ ವ್ಯಾಕ್ಸಿನ್ ಅಭಿಯಾನದ ಅಧಿಕೃತ ರಾಯಭಾರಿ ಆಗಿದ್ದಾರೆ. ಜೊತೆಗೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಅವರು ಕೊರೊನಾ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

  ಹಾಗಾಗಿ ನಟಿ ಕಂಗನಾ ರನೌತ್, 'ಭಾರತದಲ್ಲಿ ತಯಾರಿಸಲಾದ ಕೊರೊನಾ ಲಸಿಕೆಯನ್ನೇ ಪಡೆಯುವಂತೆ ಪ್ರಚಾರ ಮಾಡಿ' ಎಂದು ಸೋನು ಸೂದ್‌ಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.

  ಸೋನು ಸೂದ್‌, ತಮಗೆ ಕೊರೊನಾ ನೆಗೆಟಿವ್ ಆದ ಬಗ್ಗೆ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಂಗನಾ, 'ಸೋನು ಜೀ, ನೀವು ಕೊರೊನಾ ವ್ಯಾಕ್ಸಿನ್‌ ಮೊದಲ ಡೋಸೇಜ್ ಪಡೆದುಕೊಂಡಿದ್ದಿರಿ, ಹಾಗಾಗಿ ನೀವು ಬಹುಬೇಗ ಹುಷಾರಾಗಿದ್ದೀರಿ. ಭಾರತದಲ್ಲಿ ತಯಾರಾದ ವ್ಯಾಕ್ಸಿನ್‌ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ನೀವೇ ಉದಾಹರಣೆ. ಹೆಚ್ಚು-ಹೆಚ್ಚು ಜನ ಭಾರತದಲ್ಲಿ ತಯಾರಾದ ವ್ಯಾಕ್ಸಿನ್ ಅನ್ನೇ ಬಳಸುವಂತೆ ಮನವಿ ಮಾಡಿ. ಇಲ್ಲವಾದಲ್ಲಿ ವ್ಯಾಕ್ಸಿನ್‌ಗಳು ಕಳೆದ ಬಾರಿ ಆದಂತೆ ಎಕ್ಸ್‌ಪೈರ್ ಆಗಿಬಿಡುತ್ತವೆ' ಎಂದಿದ್ದಾರೆ ಕಂಗನಾ.

  ನಟಿ ಕಂಗನಾ ರನೌತ್ ಹಾಗೂ ಸೋನು ಸೂದ್ ಮಧ್ಯೆ ಎಲ್ಲವೂ ಸರಿಯಿಲ್ಲ. ಕಂಗನಾ ರನೌತ್ ನಟಿಸಿದ್ದ 'ಮಣಿಕರ್ಣಿಕ' ಸಿನಿಮಾದಲ್ಲಿ ಸೋನು ಸೂದ್ ನಟಿಸಿದ್ದರು. ಕೆಲವೇ ದಿನಗಳ ಚಿತ್ರೀಕರಣದ ನಂತರ ಸೋನು ಸೂದ್ ಅನ್ನು ಚಿತ್ರದಿಂದ ಹೊರಗೆ ಹಾಕಿದರು ಕಂಗನಾ. ಇದು ಭಾರಿ ವಿವಾದ ಎಬ್ಬಿಸಿತ್ತು. ಸೋನು ಸೂದ್ ಬಗ್ಗೆ ಮಾಧ್ಯಮಗಳಲ್ಲಿ ಲಘುವಾಗಿ ಸಹ ಕಂಗನಾ ಮಾತನಾಡಿದ್ದರು. ಆ ನಂತರ ಈ ಇಬ್ಬರೂ ಒಟ್ಟಿಗೆ ಕೆಲಸ ಮಾಡಿಲ್ಲ.

  ಕೊರೊನಾ ಪಾಸಿಟಿವ್ ಬಂದಿರೋ ಮಕ್ಕಳನ್ನು ಮನೆಯಲ್ಲಿ ಕೇರ್ ಮಾಡೋದು ಹೇಗೆ? | Filmibeat Kannada

  ಇದೀಗ ಸೋನು ಸೂದ್ ಅವರು ಕೊರೊನಾ ಸಮಯದಲ್ಲಿ ತಮ್ಮ ಸತತ ಸಮಾಜ ಸೇವೆಯಿಂದಾಗಿ ದೇಶದ ಬಹುಮೆಚ್ಚಿನ ಸಿನಿಮಾ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ.

  English summary
  Actress Kangana Rranaut urges Sonu Sood to promote India made COVID 19 vaccine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X