ಹೀಗೇನಾದರು ಆದರೆ ಕಂಗನಾ ಅಭಿನಯ ನಿಲ್ಲಿಸುತ್ತಾರೆ: ಸವಾಲ್ ಎಸೆದ ರಂಗೋಲಿ

ಬಾಲಿವುಡ್ ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಮಣಿಯರಲ್ಲಿ ಕಂಗನಾ ರಣಾವತ್ ಕೂಡ ಒಬ್ಬರು. ಬಾಲಿವುಡ್ ನ ಬಹು ಬೇಡಿಕೆಯ ಕಿರಿಕ್ ನಟಿ ಕಂಗನಾ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಕಂಗನಾ ಸಹೋದರಿ ಮತ್ತು ಮ್ಯಾನೇಜರ್ ಆಗಿರುವ ರಂಗೋಲಿ ಚಾಂಡೇಲ್ ಕಂಗನಾ ಅಭಿನಯ ನಿಲ್ಲಿಸುವ ಬಗ್ಗೆ ಮಾತನಾಡಿದ್ದಾರೆ.

Recommended Video

ಕಂಗನಾಗೆ ಪದ್ಮಶ್ರೀ ಸಿಕ್ಕಿದ್ದಕ್ಕೆ ಶಿವಣ್ಣ ಅಭಿಮಾನಿಗಳು ಬೇಸರ | KANGANA | SHIVANNA | PADMASRI

ಚಿತ್ರರಂಗದಲ್ಲಿ ಹೀಗೇನಾದರು ಆದರೆ ಕಂಗನಾ ಸಿನಿಮಾರಂಗ ಬಿಡುತ್ತಾರೆ ಎಂದು ಹೇಳಿದಿದ್ದಾರೆ. ಹೀಗೇನಾದರು ಅಂದರೆ, ಕಂಗನಾ ಹೊರತು ಪಡಿಸಿ, ಇಂದಿನ ಕಾಲದ ಹುಡುಗಿಯರು 60, 70, 100 ಕೋಟಿಗಿಂತ ಹೆಚ್ಚಿನ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇ ಆದರೆ ಕಂಗನಾ ಸಿನಿಮಾರಂಗ ಬಿಡುತ್ತಾರೆ ಎಂದು ರಂಗೋಲಿ ಸವಾಲ್ ಎಸೆದಿದ್ದಾರೆ.

ರಂಗೋಲಿ ಹೇಳಿದ್ದೇನು?

ರಂಗೋಲಿ ಹೇಳಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕಂಗನಾ ಸಹೋದರಿ ಇದು ಚಿತ್ರರಂಗಕ್ಕೆ ನನ್ನ ಮುಕ್ತ ಸವಾಲ್. ಕಂಗನಾ ಹೊರತುಪಡಿಸಿ ಚಿತ್ರರಂಗದಲ್ಲಿ ಹುಡುಗಿಯರು ಸಿಂಗಲ್ ಆಗಿ 60, 70, 100 ಕೋಟಿಗಿಂತ ಹೆಚ್ಚಿನ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಾಧ್ಯಾನ?? ನೀವು ನನಗೆ ಅಸಲಿ ಹೆಸರನ್ನು ನೀಡಿದರೆ ಕಂಗನಾ ಶಾಶ್ವತವಾಗಿ ಅಭಿನಯಿಸುವುದನ್ನು ನಿಲ್ಲಿಸುತ್ತಾರೆ" ಎಂದು ಟ್ವೀಟ್ ಮಾಡಿದ್ದಾರೆ.

ಸವಾಲ್ ಎಸೆಯಲು ಕಾರಣವೇನು?

ಸವಾಲ್ ಎಸೆಯಲು ಕಾರಣವೇನು?

ರಂಗೋಲಿ ಹೀಗೆ ಟ್ವೀಟ್ ಮಾಡಲು ಕಾರಣ ನಿರ್ದೇಶಕ ಅಹಮ್ಮದ್ ಖಾನ್. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅಹಮ್ಮದ್ ಮಣಿಕರ್ಣಿಕಾ ಸಿನಿಮಾ ಮಾಡಲು ೫ ಜನ ಮುಂದೆ ಬಂದಿದ್ದರು. ಆದರೆ ಸಿನಿಮಾದ ಕೆಟ್ಟ ಸ್ಥಿತಿ ನೋಡಿ ಹಾಗೆ ವಾಪಸ್ ಆದರು. ಅದೆ ಸಮಯದಲ್ಲಿ ಕಂಗನಾ ಅಭಿನಯದ ಮತ್ತೊಂದು ಸಿನಿಮಾ ಧಾಕಡ್ ಸಿನಿಮಾ ಅನೌನ್ಸ್ ಆಯಿತು. ಚಿತ್ರದ ಟೀಸರ್ ಕೂಡ ರಿಲೀಸ್ ಆಗಿತ್ತು. ಆದರೆ ಮಣಿಕರ್ಣಿಕಾ ಸ್ಥಿತಿ ನೋಡಿ ಆ ಸಿನಿಮಾ ಕೂಡ ಕ್ಯಾನ್ಸಲ್ ಆಗಿದೆ ಎಂದು ಹೇಳಿದ್ದಾರೆ.

ಗರಂ ಆದ ಸಹೋದರಿ ರಂಗೋಲಿ

ಗರಂ ಆದ ಸಹೋದರಿ ರಂಗೋಲಿ

ಇದನ್ನು ನೋಡಿ ಗರಂ ಆದ ರಂಗೋಲಿ ಅಹಮ್ಮದ್ ಖಾನ್ ವಿರುದ್ಧ ಸಿಡಿದೆದ್ದಿದ್ದಾರೆ. ಟ್ವಿಟ್ಟರ್ ನಲ್ಲಿ ಬ್ಯಾಕ್ ಟು ಬ್ಯಾಕ್ ಟ್ವೀಟ್ ಮಾಡಿರುವ ರಂಗೋಲಿ ಮಣಿಕರ್ಣಿಕಾ ಮತ್ತು ಭಾಗಿ-3 ಸಿನಿಮಾದ ಕಲೆಕ್ಷನ್ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಹಮ್ಮದ್ ಖಾನ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಿವುಡ್ ನ ವಿಫಲ ನಿರ್ದೇಶಕ ಎಂದು ಜರಿದಿದ್ದಾರೆ.

ಅಹಮ್ಮದ್ ಖಾನ್ ಗೆ ಲೀಗಲ್ ನೋಟೀಸ್

ಅಹಮ್ಮದ್ ಖಾನ್ ಗೆ ಲೀಗಲ್ ನೋಟೀಸ್

ಧಾಕಡ್ ಸಿನಿಮಾದ ಬಗ್ಗೆ ಮಾತನಾಡಿದ್ದಕ್ಕೆ ಧಾಕಡ್ ಸಿನಿಮಾದ ನಿರ್ದೇಶಕ, ಅಹಮ್ಮದ್ ಖಾನ್ ಗೆ ಲೀಗಲ್ ನೋಟೀಸ್ ನೀಡಿದ್ದಾರಂತೆ. ಅಲ್ಲದೆ ಧಾಕಡ್ ಸಿನಿಮಾ ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಸಧ್ಯದಲ್ಲೇ ಸೆಟ್ಟೇರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

More from Filmibeat

English summary
Bollywood Actress Kanagana Ranaut's sister Rangoli Chandel said Kangana will stop acting if this happens in film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X