For Quick Alerts
  ALLOW NOTIFICATIONS  
  For Daily Alerts

  ಆರನೇ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಆದ ಗಾಯಕಿ ಕನಿಕಾ ಕಪೂರ್

  |

  ಬಾಲಿವುಡ್ ಖ್ಯಾತ ಗಾಯಕಿ ಕನಿಕಾ ಕಪೂರ್ ಕೊನೆಗೂ ಕೊರೊನಾ ವೈರಸ್ ನೆಗೆಟಿವ್ ಆಗಿದ್ದಾರೆ. ಸತತ ಐದು ಬಾರಿಯ ಪರೀಕ್ಷೆಯಲ್ಲೂ ಕೊರೊನಾ ಪಾಸಿಟಿವ್ ಆಗಿದ್ದ ಕನ್ನಿಕಾ ಆರನೇ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ.

  ಬಾಲಿವುಡ್‌ನ ಖ್ಯಾತ ಗಾಯಕಿ ಕನಿಕಾ ಕಪೂರ್ ಅವರಿಗೆ ಮಾರ್ಚ್ 20 ರಂದು ಕೊರೊನಾ ವೈರಸ್ ಇರುವುದು ಗೊತ್ತಾಗಿತ್ತು, ಅ ವರನ್ನು ಪಿಜಿಐ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

  ಬಾಲಿವುಡ್ ಗಾಯಕಿ ಕನಿಕಾ ಕಪೂರ್‌ಗೆ ಮೂರನೇ ಬಾರಿಯೂ ಕೊರೊನಾ ಪಾಸಿಟಿವ್ಬಾಲಿವುಡ್ ಗಾಯಕಿ ಕನಿಕಾ ಕಪೂರ್‌ಗೆ ಮೂರನೇ ಬಾರಿಯೂ ಕೊರೊನಾ ಪಾಸಿಟಿವ್

  ಅಂದಿನಿಂದ ಪ್ರತಿ ಐದು ದಿನಕ್ಕೊಮ್ಮೆ ಅವರ ರಕ್ತದ ಮಾದರಿ ಮತ್ತು ಗಂಟಲಿನ ಕಫದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿತ್ತು, ಕಳೆದ 5 ಬಾರಿಯೂ ಅವರ ವರದಿಗಳು ಪಾಸಿಟಿವ್ ಆಗಿ ಬಂದು ಆತಂಕ ಹೆಚ್ಚಿಸಿದ್ದವು.

  ಕನಿಕಾ ಕಪೂರ್ ಸಂಪರ್ಕಕ್ಕೆ ಬಂದಿದ್ದ 266 ಮಂದಿಯ ಪತ್ತೆ, 66 ಜನರಲ್ಲಿ ಸೋಂಕು ನೆಗೆಟಿವ್ಕನಿಕಾ ಕಪೂರ್ ಸಂಪರ್ಕಕ್ಕೆ ಬಂದಿದ್ದ 266 ಮಂದಿಯ ಪತ್ತೆ, 66 ಜನರಲ್ಲಿ ಸೋಂಕು ನೆಗೆಟಿವ್

  ಕೊನೆಗೆ ನಿನ್ನೆ ಏಪ್ರಿಲ್ 4ರಂದು ಬಂದ ವರದಿಯ ಪ್ರಕಾರ ಕನಿಕಾ ಕಪೂರ್ ಕೊರೊನಾ ದಿಂದ ಮುಕ್ತರಾಗಿದ್ದಾರೆ. ಅವರಿಗೆ ಕೊರೊನಾ ವೈರಸ್ ನೆಗೆಟಿವ್ ಬಂದಿದೆ.

  ಗಣ್ಯರ ಜೊತೆ ಪಾರ್ಟಿ ಮಾಡಿದ್ದ ಕನಿಕಾ ಕಪೂರ್‌

  ಗಣ್ಯರ ಜೊತೆ ಪಾರ್ಟಿ ಮಾಡಿದ್ದ ಕನಿಕಾ ಕಪೂರ್‌

  ಕನ್ನಿಕಾ ಕಪೂರ್ ವಿದೇಶದಿಂದ ಬಂದಿದ್ದರೂ ಸಹ ಕ್ವಾರೆಂಟೈನ್‌ಗೆ ಒಳಗಾಗದೆ, ಅಧಿಕಾರಿಗಳಿಗೆ ಮಾಹಿತಿಯನ್ನೂ ನೀಡದೆ, ಗಣ್ಯರ ಜೊತೆ ಪಾರ್ಟಿ ಮಾಡಿದ್ದರು. ಅವರೊಂದಿಗೆ ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ಮತ್ತು ಅವರ ಮಗ ಸಂಸದ ದುಷ್ಯಂತ್ ಸಿಂಗ್ ಸಹ ಪಾರ್ಟಿಯಲ್ಲಿ ಭಾಗವಹಿಸಿದ್ದರು.

  ಇನ್ನೊಂದು ಪರೀಕ್ಷೆ ನೆಗೆಟಿವ್ ಬರಬೇಕಿದೆ

  ಇನ್ನೊಂದು ಪರೀಕ್ಷೆ ನೆಗೆಟಿವ್ ಬರಬೇಕಿದೆ

  ಕನಿಕಾ ಕಪೂರ್‌ ಕೊರೊನಾ ನೆಗೆಟಿವ್ ಎಂದು ಈಗಲೇ ಮನೆಗೆ ಹೋಗುವಂತಿಲ್ಲ, ಅವರಿಗೆ ಇನ್ನೂ ಒಂದು ವರದಿ ನೆಗೆಟಿವ್ ಬಂದ ಬಳಿಕವಷ್ಟೆ ಕನ್ನಿಕಾ ಕೊರೊನಾದಿಂದ ಮುಕ್ತರಾಗಿದ್ದಾರೆ ಎನ್ನಬಹುದು. ಇನ್ನೊಂದು ಪರೀಕ್ಷೆ ನೆಗೆಟಿವ್ ಬಂದ ನಂತರವೂ ಅವರು ಮನೆಯಲ್ಲಿ 14 ದಿನ ಕ್ವಾರೆಂಟೈನ್‌ನಲ್ಲಿ ಇರಬೇಕಾಗುತ್ತದೆ.

  ನೀವಿಲ್ಲಿ ಪೇಷೆಂಟ್ ಅಷ್ಟೇ, ಸ್ಟಾರ್ ಥರ ವರ್ತಿಸಬೇಡಿ: ಗಾಯಕಿಗೆ ವೈದ್ಯರಿಂದ ಕ್ಲಾಸ್ನೀವಿಲ್ಲಿ ಪೇಷೆಂಟ್ ಅಷ್ಟೇ, ಸ್ಟಾರ್ ಥರ ವರ್ತಿಸಬೇಡಿ: ಗಾಯಕಿಗೆ ವೈದ್ಯರಿಂದ ಕ್ಲಾಸ್

  ಪ್ರವಾಸ ಮಾಹಿತಿಯನ್ನು ಮುಚ್ಚಿಟ್ಟಿದ್ದ ಕನಿಕಾ

  ಪ್ರವಾಸ ಮಾಹಿತಿಯನ್ನು ಮುಚ್ಚಿಟ್ಟಿದ್ದ ಕನಿಕಾ

  ಕನಿಕಾ ಕಪೂರ್ ತಮ್ಮ ಪ್ರವಾಸ ಮಾಹಿತಿಯನ್ನು ಮುಚ್ಚಿಟ್ಟಿದ್ದಕ್ಕೆ ನೆಟ್ಟಿಗರಿಂದ ಬೈಗುಳ ಕೇಳಬೇಕಾಯಿತು. ಅಲ್ಲದೆ ಪಿಐಜಿ ಆಸ್ಪತ್ರೆಯವರು ಸಹ ಕನ್ನಿಕಾ ವರ್ತನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಆಕೆ ಸೆಲೆಬ್ರಿಟಿಯಂತೆ ವರ್ತಿಸುವುದನ್ನು ಬಿಡಬೇಕು ಎಂದು ತಪರಾಕಿ ಹಾಕಿದ್ದರು.

  ಪಾರ್ಲಿಮೆಂಟನ್ನೇ ಅಲ್ಲಾಡಿಸಿದ್ದ ಕನಿಕಾ ಕಪೂರ್

  ಪಾರ್ಲಿಮೆಂಟನ್ನೇ ಅಲ್ಲಾಡಿಸಿದ್ದ ಕನಿಕಾ ಕಪೂರ್

  ಕನಿಕಾ ಕಪೂರ್ ಪ್ರಕರಣ ಪಾರ್ಲಿಮೆಂಟ್ ಅನ್ನೇ ಅಲ್ಲಾಡಿಸಿತ್ತು. ಕನ್ನಿಕಾ ಕಪೂರ್ ಜೊತೆ ನೇರ ಸಂಪರ್ಕದಲ್ಲಿದ್ದ ವಸುಂಧರಾ ರಾಜೆ, ದುಷ್ಯಂತ್ ಸಿಂಗ್, ಪಾರ್ಟಿಯ ಮಾರನೇ ದಿನವೇ ಪಾರ್ಲಿಮೆಂಟ್‌ಗೆ ಹೋಗಿದ್ದರು. ದುಷ್ಯಂತ್ ಸಿಂಗ್ ಅವರು ರಾಷ್ಟ್ರಪತಿಗಳನ್ನೂ ಭೇಟಿ ಆಗಿದ್ದರು. ರಾಷ್ಟ್ರಪತಿಗಳು ಪರೀಕ್ಷೆಗೆ ಒಳಪಟ್ಟರು, ವರದಿ ನೆಗೆಟಿವ್ ಬಂತು. ಸ್ಮೃತಿ ಇರಾನಿ ಸೇರಿದಂತೆ ಮಂತ್ರಿಗಳು, ಸಂಸದರು ಭೀತಿಯಿಂದ ಪರೀಕ್ಷೆಗೆ ಒಳಗಾದರು.

  ಕೊರೊನಾ ಸೋಂಕು ಹೊತ್ತು ತಂದ ಬಾಲಿವುಡ್ ಗಾಯಕಿ ವಿರುದ್ಧ ಎಫ್‌ಐಆರ್ ದಾಖಲುಕೊರೊನಾ ಸೋಂಕು ಹೊತ್ತು ತಂದ ಬಾಲಿವುಡ್ ಗಾಯಕಿ ವಿರುದ್ಧ ಎಫ್‌ಐಆರ್ ದಾಖಲು

  English summary
  Bollywood star singer Kanika Kapoor tests coronavirus negative in her fifth test. she detect positive on March 20.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X