ಬಾಲಿವುಡ್‌ ಗೆ ಹಾರಲಿದ್ದಾರೆ ಅರುಣ್ ಸಾಗರ್, ನಟನಾಗಿ ಅಲ್ಲ, ನಿರ್ದೇಶಕನಾಗಿ!

ಕನ್ನಡದ ಖ್ಯಾತ ಕಲಾನಿರ್ದೇಶಕ, ನಟ, ಟಿವಿ ನಿರೂಪಕ, ಮಾತಿನ ಮೋಡಿಗಾರ ಅರುಣ್ ಸಾಗರ್ ಹಠಾತ್ತನೆ ಮುಂಬೈ ಗೆ ಪಯಣ ಬೆಳೆಸಿದ್ದಾರೆ.

ಪ್ರತಿಭಾವಂತ ನಟರಾಗಿರುವ ಅವರು ಬಾಲಿವುಡ್‌ನ ಚಿತ್ರದಲ್ಲಿ ನಟಿಸಲು ಹೋಗುತ್ತಿದ್ದಾರೆಂದು ನೀವು ಅಂದುಕೊಂಡರೆ ಅದು ಸುಳ್ಳು, ನಿರ್ದೇಶಕರಾಗಲು ಅವರು ಬಾಲಿವುಡ್ ಗೆ ಹಾರಿದ್ದಾರೆ.

ಹೌದು, ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ನಟಿಸದ ಅರುಣ್ ಸಾಗರ್, ಮೊದಲ ನಿರ್ದೇಶನ ಮಾಡಲು ಹಿಂದಿ ಭಾಷೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗೆ ಆಯ್ಕೆ ಮಾಡಿಕೊಳ್ಳಲು ಕತೆಯೇ ಕಾರಣ ಎಂದು ಅವರು ಹೇಳಿದ್ದಾರೆ.

Kannada Actor Arun Sagar To Direct Movie In Bollywood

ಕತೆಯು ಮಲ್ಲಕಂಬ ಕುರಿತಾಗಿದ್ದು, ನೈಜತೆಗೆ ತೀರಾ ಹತ್ತಿರವಾಗಿದೆ. ಕಮರ್ಷಿಯಲ್ ಬಿಲ್ಡಪ್‌ಗಳು ಇಲ್ಲದ, ಕತೆ ಮತ್ತು ಪರಿಸರವೇ ಪ್ರಧಾನವಾಗಿರುವ ಈ ಚಿತ್ರವನ್ನು ಬಾಲಿವುಡ್‌ನಲ್ಲಿ ನಿರ್ಮಿಸಿದರೆ ಸೂಕ್ತ ಎಂದು ಅವರು ಹಿಂದಿ ಕಡೆ ಹೊರಳಿದ್ದಾರೆ.

ಕತೆ ಪೂರ್ಣಗೊಂಡಿದ್ದು, ಮರಾಠಿ ವ್ಯಕ್ತಿಯೊಬ್ಬರು ನಿರ್ಮಾಣಕ್ಕೂ ಒಪ್ಪಿಕೊಂಡಿದ್ದಾರಂತೆ. ಇನ್ನೇನಿದ್ದರೂ ತಾರಾಗಣ ಅಂತಿಮವಾಗಬೇಕಷ್ಟೆ.

More from Filmibeat

English summary
Kannada actor, art director Arun Sagar set to direct a movie in Bollywood. He choose Hindi language to debut as director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X