ಸಿನಿ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ನಟಿ ಐಂದ್ರಿತಾ ರೇ.!

'ಜಂಗ್ಲಿ', 'ವಾಯುಪುತ್ರ', 'ಮನಸಾರೆ', 'ಭಜರಂಗಿ' ಮುಂತಾದ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದ ನಟಿ ಐಂದ್ರಿತಾ ರೇ. ಬೆಂಗಾಲಿ ಮೂಲದವರಾದರೂ, ಕನ್ನಡ ಸಿನಿ ಅಂಗಳದಲ್ಲಿ ಐಂದ್ರಿತಾ ರೇ ಬಹು ಬೇಡಿಕೆಯ ನಟಿ.

ಕನ್ನಡದ ಜೊತೆಗೆ ಹಿಂದಿ ಮತ್ತು ಬೆಂಗಾಲಿ ಚಿತ್ರಗಳಲ್ಲೂ ನಟಿ ಐಂದ್ರಿತಾ ರೇ ಅಭಿನಯಿಸಿದ್ದಾರೆ. 2018 ರಲ್ಲಿ ನಟ ದಿಗಂತ್ ಜೊತೆಗೆ ಐಂದ್ರಿತಾ ರೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದಾದ ಬಳಿಕ ಸಿನಿಮಾಗಳ ಆಯ್ಕೆ ವಿಷಯದಲ್ಲಿ ಐಂದ್ರಿತಾ ರೇ ಸಿಕ್ಕಾಪಟ್ಟೆ ಚ್ಯೂಸಿ ಆಗಿದ್ದಾರೆ.

ಹೀಗಿರುವಾಗಲೇ, ನಟಿ ಐಂದ್ರಿತಾ ರೇ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಸಿಹಿ ಸುದ್ದಿ ಎಂದ ಕೂಡಲೆ ಏನೇನೋ ಭಾವಿಸಬೇಡಿ. ಇಷ್ಟು ದಿನ ಸದ್ದು ಮಾಡದ ಐಂದ್ರಿತಾ ರೇ ಇದೀಗ ಹೊಸ ಪ್ರಾಜೆಕ್ಟ್ ಗೆ ಸಹಿ ಹಾಕುವ ಮೂಲಕ ಸಿನಿ ಪ್ರಿಯರಿಗೆ ಮತ್ತು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಅಷ್ಟೇ.!

ವೆಬ್ ಸೀರೀಸ್ ಗೆ ಕಾಲಿಟ್ಟ ಐಂದ್ರಿತಾ ರೇ.!

ವೆಬ್ ಸೀರೀಸ್ ಗೆ ಕಾಲಿಟ್ಟ ಐಂದ್ರಿತಾ ರೇ.!

ಮದುವೆ ಆದ ಮೇಲೆ ಕನ್ನಡ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ ಐಂದ್ರಿತಾ ರೇ ಇದೀಗ ವೆಬ್ ಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಹಿಂದಿಯ ವೆಬ್ ಸೀರೀಸ್ ವೊಂದರಲ್ಲಿ ಅಭಿನಯಿಸಲು ನಟಿ ಐಂದ್ರಿತಾ ರೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ದಿ ಕ್ಯಾಸಿನೋ

ದಿ ಕ್ಯಾಸಿನೋ

'ದಿ ಕ್ಯಾಸಿನೋ - ಮೈ ಗೇಮ್, ಮೈ ರೂಲ್ಸ್' ಎಂಬ ಹಿಂದಿ ವೆಬ್ ಸೀರೀಸ್ ನಲ್ಲಿ ನಟಿ ಐಂದ್ರಿತಾ ರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾರ್ದಿಕ್ ಗಜ್ಜರ್ ನಿರ್ಮಾಣದ ಮತ್ತು ನಿರ್ದೇಶನದ ವೆಬ್ ಸೀರೀಸ್ ಇದಾಗಿದ್ದು, ಏಪ್ರಿಲ್ 10 ರಂದು ಬಿಡುಗಡೆ ಆಗಲಿದೆ.

ತಾರೆಯರ ದಂಡು

ತಾರೆಯರ ದಂಡು

'ದಿ ಕ್ಯಾಸಿನೋ - ಮೈ ಗೇಮ್, ಮೈ ರೂಲ್ಸ್' ವೆಬ್ ಸೀರೀಸ್ ನಲ್ಲಿ ಹಿಂದಿ ಕಿರುತೆರೆಯ ಕರಣ್ವೀರ್ ಬೋರಾ, ಸುಧಾನ್ಷು ಪಾಂಡೇ, ಮಂದನಾ ಕರೀಮಿ, ರೋಮಿತ್ ರಾಜ್, ದಿಗಾಂಗನಾ ಸೂರ್ಯವಂಶಿ ಮತ್ತು ಮುಕುಲ್ ದೇವ್ ಅಭಿನಯಿಸುತ್ತಿದ್ದಾರೆ. ಇವರೆಲ್ಲರ ಜೊತೆಗೆ ಐಂದ್ರಿತಾ ರೇ ಕೂಡ ಇದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿಲ್ಲ.!

ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿಲ್ಲ.!

'ಚೌಕ', 'ಮೇಲುಕೋಟೆ ಮಂಜ' ಮತ್ತು 'ರಾಂಬೋ-2' ಚಿತ್ರಗಳ ಬಳಿಕ ಕನ್ನಡದ ಯಾವುದೇ ಚಿತ್ರದಲ್ಲಿ ನಟಿ ಐಂದ್ರಿತಾ ರೇ ಅಭಿನಯಿಸಿಲ್ಲ. ಐಂದ್ರಿತಾ ಅಭಿನಯದ 'ಗರುಡ' ಇನ್ನೂ ತೆರೆಕಂಡಿಲ್ಲ. ಇದೀಗ ಹಿಂದಿ ಚಿತ್ರರಂಗ ಮತ್ತು ವೆಬ್ ಸರಣಿ ಕಡೆ ಐಂದ್ರಿತಾ ಮುಖ ಮಾಡಿದ್ದಾರೆ.

More from Filmibeat

English summary
Kannada Actress Aindrita Ray is acting in The Casino web series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X