'ಬಾಲಿವುಡ್‌'ಗೆ ಹೋದ 'ಹನುಮಂತ'ನ ಪರಮ ಭಕ್ತ, 'ಟೈಗರ್ ಶ್ರಾಫ್‌'ಗೆ 'ಹರ್ಷ' ಆಕ್ಷನ್ ಕಟ್...!

ಆರಂಭದ ಗೆಳೆಯ, ಬಿರುಗಾಳಿ ಮತ್ತು ಚಿಂಗಾರಿ ಹೊರತು ಪಡಿಸಿದರೆ, ತಮ್ಮ ಪ್ರತಿ ಚಿತ್ರದಲ್ಲಿಯೂ ಹನುಮನ ಆರಾಧನೆಯನ್ನು ಮಾಡುತ್ತಾ ಬಂದವರು ಎ. ಹರ್ಷ. ಭಜರಂಗಿ, ವಜ್ರಕಾಯ, ಜೈ ಮಾರುತಿ, ಅಂಜನೀಪುತ್ರ, ಸೀತಾರಾಮ ಕಲ್ಯಾಣ, ಭಜರಂಗಿ-2 ಹೀಗೆ ರಾಮಧೂತನನ್ನೇ ಪ್ರದಕ್ಷಿಣೆ ಹಾಕಿದ ಹರ್ಷ ಆ ನಂತರ ವೇದ ಚಿತ್ರವನ್ನು ನಿರ್ದೇಶಿಸಿದರು. ಬಳಿಕ ಆಂಧ್ರದತ್ತ ಮುಖ ಮಾಡಿದರು. ಗೋಪಿಚಂದ್‌ಗೆ 'ಭೀಮ' ಬಲ ತುಂಬುವ ಕೆಲಸವನ್ನೂ ಮಾಡಿದರು.

ಇಂಥಾ ಹರ್ಷ ಸದ್ಯ ಸದ್ದು ಗದ್ದಲ ಇಲ್ಲದೇ ಬಾಲಿವುಡ್‌ನ ವಿಮಾನವೇರಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಮುಂಬೈನ ಸ್ಟಾರ್ ನಿರ್ಮಾಪಕ ಸಾಜಿದ್ ನಾಡಿಯಾವಾಲ ಅವರ ಜೊತೆ ಕೈ ಜೋಡಿಸಿದ್ದಾರೆ. ಟೈಗರ್ ಶ್ರಾಫ್‌ಗೆ ನಿರ್ದೇಶನ ಮಾಡಲಿದ್ದಾರೆ. ಈ ಮೂಲಕ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ ಹರ್ಷ.

Kannada director A Harsha is set to make his Bollywood debut with Bhaaghi 4 directing Tiger Shroff

ಹೌದು, ಟೈಗರ್ ಶ್ರಾಫ್ ಅಭಿನಯದ 'ಭಾಗಿ-4' ಚಿತ್ರದ ಸಾರಥ್ಯವನ್ನು ಹರ್ಷ ವಹಿಸಿಕೊಂಡಿದ್ದಾರೆ. ಇನ್ನೂ.. ಎಲ್ಲರಿಗೆ ಗೊತ್ತಿರುವಂತೆ ಭಾಗಿ ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಫ್ರಾಂಚೈಸಿ. ಇಂತಹ ಚಿತ್ರವನ್ನು ನಿರ್ದೇಶಿಸುವ ಸುವರ್ಣ ಅವಕಾಶ ಹರ್ಷಗೆ ಸಿಕ್ಕಿದೆ. ಇನ್ನೂ ಟೈಗರ್ ಶ್ರಾಫ್‌ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಬೆಳ್ಳಿಪರದೆಯ ಮೇಲೆ ಟೈಗರ್ ಶ್ರಾಫ್ ಸಾಹಸಗಾಥೆ ರೋಮ ನಿಲ್ಲುವಂತೆ ಮಾಡುತ್ತದೆ.

ಕೇವಲ ಹೊಡಿ ಬಡಿ ಆಟದಲ್ಲಿ ಮಾತ್ರ ಅಲ್ಲ ಟೈಗರ್ ಶ್ರಾಫ್ ಬಾಲಿವುಡ್‌ನ ಬೆಸ್ಟ್ ಡ್ಯಾನ್ಸರ್‌ಗಳಲ್ಲಿ ಒಬ್ಬರು. ಇನ್ನೂ ಹರ್ಷ ಬೆಸಿಕಲಿ ಕನ್ನಡದಲ್ಲಿ ನೃತ್ಯ ನಿರ್ದೇಶಕರಾಗಿದ್ದವರು. ಈ ಕಾರಣಕ್ಕೆ ಭಾಗಿ 4 ಕುತೂಹಲ ಕೆರಳಿಸಿದೆ. ಹರ್ಷ ಮತ್ತು ಟೈಗರ್ ಶ್ರಾಫ್ ಜೋಡಿಯ ಕುರಿತು ಬಾಲಿವುಡ್‌ನಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ. ಇನ್ನೂ ಪ್ರೇಕ್ಷಕರ ನಾಡಿ ಮಿಡಿತ ಮತ್ತು ಯಾವ ನಟರಿಗೆ ಎಂಥಾ ಕಥೆ ಬೇಕೆಂಬುದನ್ನು ಚೆನ್ನಾಗಿಯೇ ಅರ್ಥ ಮಾಡಿಕೊಳ್ಳೋ ಕಲೆ ಹರ್ಷಗೆ ಮೊದಲಿಂದ ಸಿದ್ದಿಸಿದೆ. ಅಂಥಾ ಸೂಕ್ಷ್ಮವಂತಿಕೆಯಿಂದಲೇ ತಮ್ಮ ಪ್ರತಿ ಚಿತ್ರವನ್ನು ರೂಪಿಸುತ್ತಾ ಬಂದವರು ಹರ್ಷ. ಇದಕ್ಕೆ ಕೈಗನ್ನಡಿ ಎಂಬಂತೆ ಭಾಗಿ 4 ಚಿತ್ರದ ಫಸ್ಟ್ ಲುಕ್‌ ಮೂಲಕ ಹರ್ಷ ಸದ್ಯಕ್ಕೆ ಬಾಲಿವುಡ್‌ನ ನಿಬ್ಬೇರಗಾಗಿಸಿದ್ದಾರೆ.

ಇನ್ನೂ ಸಾಜಿದ್ ನಾಡಿಯಾವಾಲ ಅವರನ್ನು ಹರ್ಷ ಭೇಟಿಯಾಗಿದ್ದು ಎಲ್ಲಿ, ಹೇಗೆ ಎನ್ನುವುದಕ್ಕೆ ಸದ್ಯ ಉತ್ತರ ಇಲ್ಲ. ಟೈಗರ್ ಶ್ರಾಫ್ ಜೊತೆ ಚಿತ್ರದಲ್ಲಿ ಯಾರೆಲ್ಲ ಇದ್ದಾರೆ, ಚಿತ್ರದ ನಾಯಕಿ ಯಾರು ಎಂಬ ಇತ್ಯಾದಿ ಪ್ರಶ್ನೆಗಳಿಗೆ ಕೂಡ ಉತ್ತರ ಸಿಕ್ಕಿಲ್ಲ. ಕೇವಲ ಚಿತ್ರದ ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ ಎನ್ನುವ ಸುದ್ದಿಯನ್ನಷ್ಟೇ ಚಿತ್ರತಂಡ ಹಂಚಿಕೊಂಡಿದೆ. ಮುಂದಿನ ವರ್ಷ ಸೆಪ್ಟೆಂಬರ್ 5ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದೆ.

ಅಂದ್ಹಾಗೇ ಈ ಹಿಂದೆ ಭಾಗಿ ಚಿತ್ರದ ಮೊದಲ ಭಾಗವನ್ನು ಸಬೀರ್ ಖಾನ್ 2016ರಲ್ಲಿ ನಿರ್ದೇಶಿಸಿದ್ದರು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆಯನ್ನು ಹರಿಸಿತ್ತು. ಇದರಿಂದ ಪ್ರೇರಿತರಾದ ಸಾಜಿದ್ ನಾಡಿಯಾವಾಲ 2018 ಮತ್ತು 2020ರಲ್ಲಿ ಭಾಗಿ ಚಿತ್ರದ ಮುಂದುವರೆದ ಭಾಗಗಳನ್ನು ನಿರ್ಮಾಣ ಮಾಡಿದರು. ಭಾಗಿ 2 ಮತ್ತು ಭಾಗಿ 3 ಚಿತ್ರವನ್ನು ಅಹಮದ್ ಖಾನ್ ನಿರ್ದೇಶಿಸಿದ್ದರು. ಇನ್ನೂ ಭಾಗಿ 1 ಮತ್ತು ಭಾಗಿ 3 ಚಿತ್ರದಲ್ಲಿ ಶ್ರದ್ಧಾ ಕಪೂರ್ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರೆ ಭಾಗಿ ಎರಡನೇ ಭಾಗದಲ್ಲಿ ದಿಶಾ ಪಠಾಣಿ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ಒಟ್ನಲ್ಲಿ ಸದ್ಯ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿ, ತಮ್ಮ ಚಿತ್ರಗಳ ಮೂಲಕ ಕನ್ನಡಿಗರ ಹೃದಯ ಗೆದ್ದ ಎ.ಹರ್ಷ ಸದ್ಯ ಬಾಲಿವುಡ್‌ನತ್ತ ಹೊರಟಿದ್ದಾರೆ. ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹರ್ಷ ಅವರ ಈ ಪ್ರಯತ್ನ ಯಶಸ್ವಿಯಾಗಲಿ ಎನ್ನುವುದೇ ಕನ್ನಡ ಚಿತ್ರರಂಗದವರ ಆಶಯ. ಗುಡ್ ಲಕ್ ಹರ್ಷ ಮಾಸ್ಟರ್.

More from Filmibeat

Read more about: a harsha tiger shroff bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X