ಮರಾಠಿಗೆ 'ದಿಯಾ' ಪೃಥ್ವಿ ಅಂಬರ್ ಹೀರೋ
ಕನ್ನಡದಲ್ಲಿ ಸೂಪರ್ ಹಿಟ್ ಆದ ಸಿನಿಮಾ 'ದಿಯಾ' ಈಗಾಗಲೇ ಹಿಂದಿಯಲ್ಲಿ ರೀಮೇಕ್ ಆಗಿದೆ. ಅದಾದ ಬಳಿಕ ಈಗ ಮರಾಠಿ ಭಾಷೆಗೂ ಲಗ್ಗೆ ಇಡುತ್ತಿದೆ.
2020 ರಲ್ಲಿ ಬಿಡುಗಡೆ ಆಗಿದ್ದ 'ದಿಯಾ' ಕನ್ನಡ ಸಿನಿಮಾ ಚಿತ್ರಮಂದಿರಗಳಲ್ಲಿ ಸಾಧಾರಣ ಪ್ರದರ್ಶನ ಕಂಡರು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಬಹುದೊಡ್ಡ ಹಿಟ್ ಆಯಿತು.
ಆ ಬಳಿಕ ಆ ಸಿನಿಮಾದ ನಾಯಕ ಪೃಥ್ವಿ ಅಂಬರ್, ನಾಯಕಿ ಖುಷಿ ರವಿ ಹಾಗೂ ನಿರ್ದೇಶಕ ಕೆಎಸ್ ಅಶೋಕ್‌ಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿಯಾಗಿದೆ. ಕೆ.ಎಸ್.ಅಶೋಕ್ ಈಗಾಗಲೇ 'ದಿಯಾ' ಸಿನಿಮಾದ ಹಿಂದಿ ರೀಮೇಕ್ ನಿರ್ದೇಶನ ಮಾಡಿದ್ದಾರೆ. ಇದೀಗ 'ದಿಯಾ' ಸಿನಿಮಾ ಮರಾಠಿಯಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿದೆ.

ಹಿಂದಿಯಲ್ಲಿ ನಿರ್ಮಾಣವಾಗಿದ್ದ 'ದಿಯಾ' ಸಿನಿಮಾ ದೊಡ್ಡ ಮಟ್ಟದ ಹಿಟ್ ಆಗಲಿಲ್ಲ. ಅಲ್ಲಿಯೂ ಸಹ ಪೃಥ್ವಿ ಅಂಬರ್ ನಟಿಸಿದ್ದರು. ಇದೀಗ ಮರಾಠಿಯಲ್ಲೂ ಸಿನಿಮಾ ನಿರ್ಮಾಣಗೊಳ್ಳುತ್ತಿದ್ದು ಅಲ್ಲಿಯೂ ಸಿನಿಮಾವನ್ನು ಕೆ.ಎಸ್.ಅಶೋಕ್ ಅವರೇ ನಿರ್ದೇಶನ ಮಾಡುತ್ತಿದ್ದು, ಪೃಥ್ವಿ ಅಂಬರ್ ಅವರೇ ನಾಯಕ ನಟರಾಗಿದ್ದಾರೆ.
ಮರಾಠಿ 'ದಿಯಾ'ನಲ್ಲಿ ಸಿನಿಮಾದಲ್ಲಿ ಮೃಣಾಲ್ ಕುಲಕರ್ಣಿ ಹಾಗೂ ಅಜಿಂಕ್ಯಾ ರೌತ್ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಬೆಂಗಳೂರು ಹಾಗೂ ಕರ್ನಾಟಕದ ಇನ್ನು ಕೆಲವು ಭಾಗಗಳಲ್ಲಿ ನಡೆಯಲಿದೆ. ಸಿನಿಮಾದ ಚಿತ್ರಿಕರಣ ಈಗಾಗಲೇ ಪ್ರಾರಂಭವಾಗಿದ್ದು, ಕೆಲವೇ ದಿನಗಳಲ್ಲಿ ಚಿತ್ರೀಕರಣ ಪೂರ್ಣವಾಗಲಿದೆ.
'ದಿಯಾ' ಸಿನಿಮಾವು ಈಗಾಗಲೆ ತೆಲುಗಿನಲ್ಲಿ 'ಡಿಯರ್ ಮೇಘಾ' ಹೆಸರಲ್ಲಿ ಬಿಡುಗಡೆ ಆಗಿದೆ. ಆದರೆ ಅಲ್ಲಿಯೂ ದೊಡ್ಡ ಮಟ್ಟದ ಹಿಟ್ ಆಗಲಿಲ್ಲ. ಹಿಂದಿಯಲ್ಲಿಯೂ ಹಿಟ್ ಎನಿಸಿಕೊಳ್ಳಲಿಲ್ಲ. ಆದರೆ ಈಗ ಮರಾಠಿಯಲ್ಲಿ ಬಿಡುಗಡೆ ಆಗುತ್ತಿದ್ದು, ಅಲ್ಲಾದರೂ ಹಿಟ್ ಆಗಲಿದೆಯೇ ಕಾದು ನೋಡಬೇಕಿದೆ.
ಇನ್ನು ಮರಾಠಿಯಲ್ಲಿಯೂ ನಾಯಕ ನಟನ ಪಾತ್ರದಲ್ಲಿ ನಟಿಸುತ್ತಿರುವ ಪೃಥ್ವಿ ಅಂಬರ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪೃಥ್ವಿ ನಟಿಸಿರುವ 'ಬೈರಾಗಿ' ಸಿನಿಮಾ ಶುಕ್ರವಾರವಷ್ಟೆ ಬಿಡುಗಡೆ ಆಗಿ, ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ 'ಶುಗರ್ ಲೆಸ್' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ ಈ ಸಿನಿಮಾದಲ್ಲಿ ಪೃಥ್ವಿ ಜೊತೆಗೆ ಮಿಲನಾ ನಾಗರಾಜ್ ನಾಯಕಿಯಾಗಿದ್ದಾರೆ. ಇದರ ಜೊತೆಗೆ 'ದೂರದರ್ಶನ' ಸಿನಿಮಾದಲ್ಲಿಯೂ ಪೃಥ್ವಿ ಅಂಬರ್ ನಟಿಸುತ್ತಿದ್ದಾರೆ. 'ಅಬ ಜಬ ದಬ', 'ಫಾರ್ ರಿಜಿಸ್ಟ್ರೇಷನ್', 'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾಗಳಲ್ಲಿಯೂ ಪೃಥ್ವಿ ಅಂಬರ್ ನಟಿಸುತ್ತಿದ್ದಾರೆ.


Click it and Unblock the Notifications











