For Quick Alerts
  ALLOW NOTIFICATIONS  
  For Daily Alerts

  ಕನ್ನಡ ಡಬ್ಬಿಂಗ್‌ಗೆ ಟೈಮ್ ಇಲ್ಲ, ಆದ್ರೆ ಹಿಂದಿಗೆ? ರಶ್ಮಿಕಾ ಹೇಳಿದ್ದು ಕೇಳಿದ್ರೆ ಕೋಪ ಬರೋದು ಗ್ಯಾರೆಂಟಿ!

  |

  ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಸದ್ಯ ದೇಶವ್ಯಾಪಿ ಹೆಸರು ಮಾಡಿರುವಂತ ನಟಿ. ಮೊದಲಿಗೆ ಕನ್ನಡದ ಸ್ಟಾರ್ ನಟರಾದ ಪುನೀತ್, ದರ್ಶನ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ರಶ್ಮಿಕಾ ಅದೇ ಸಮಯದಲ್ಲಿ ಕೆಲ ತೆಲುಗು ಚಿತ್ರಗಳಿಗೂ ಬಣ್ಣ ಹಚ್ಚಿದ್ದರು. ಈ ಪೈಕಿ ರಶ್ಮಿಕಾ ಮಂದಣ್ಣ ಸಿನಿಮಾ ಕೆರಿಯರ್‌ಗೆ ದೊಡ್ಡ ಮಟ್ಟದ ತಿರುವು ನೀಡಿದ್ದು ವಿಜಯ್ ದೇವರಕೊಂಡ ಜತೆ ಗೀತ ಗೋವಿಂದಂ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿದ್ದು.

  ಈ ಚಿತ್ರದ ಬಳಿಕ ಸಾಕಷ್ಟು ಸುದ್ದಿಗೀಡಾದ ರಶ್ಮಿಕಾ ಮಂದಣ್ಣ ತೆಲುಗಿನ ಘಟಾನುಘಟಿ ಸೂಪರ್ ಸ್ಟಾರ್‌ಗಳಾದ ಮಹೇಶ್ ಬಾಬು, ಅಲ್ಲು ಅರ್ಜುನ್ ಹಾಗೂ ತಮಿಳಿನ ಸ್ಟಾರ್ ನಟ ಕಾರ್ತಿ ಚಿತ್ರಗಳಲ್ಲಿಯೂ ನಟಿಯಾಗಿ ಬಣ್ಣ ಹಚ್ಚಿದ್ದರು. ಅಷ್ಟೇ ಅಲ್ಲದೇ ಪುಷ್ಟ ಮೂಲಕ ಪ್ಯಾನ್ ಇಂಡಿಯಾ ರೀಚ್ ಆದ ರಶ್ಮಿಕಾ ಮಂದಣ್ಣ ಜನಪ್ರಿಯತೆ ಮತ್ತಷ್ಟು ಹೆಚ್ಚಿತು, ಜತೆಗೆ ಆಕೆಯ ಕನ್ನಡ ಚಿತ್ರಗಳ ಸಂಖ್ಯೆಯೂ ಕಡಿಮೆ ಆಯಿತು.

  ಹೌದು, ಧ್ರುವ ಸರ್ಜಾ ಜತೆಗಿನ ಪೊಗರು ಸಿನಿಮಾ ಬಿಟ್ಟರೆ ಸದ್ಯ ರಶ್ಮಿಕಾ ಅಭಿನಯಿಸಲಿರುವ ಸಿನಿಮಾ ಪಟ್ಟಿಯಲ್ಲಿ ಕನ್ನಡ ಒಂದೇ ಒಂದು ಚಿತ್ರ ಕೂಡ ಇಲ್ಲ. ಈ ವಿಷಯ ಕನ್ನಡ ಸಿನಿ ಪ್ರೇಮಿಗಳ ಕೋಪಕ್ಕೆ ಕಾರಣವೂ ಹೌದು. ಕನ್ನಡ ಸಿನಿಮಾದಿಂದ ಮೇಲೆ ಬಂದು ಈಗ ಕನ್ನಡದ ಸಿನಿಮಾದಲ್ಲಿಯೇ ಅಭಿನಯಿಸಲು ತಯಾರಿಲ್ಲ ಎಂಬ ಅಪವಾದ ರಶ್ಮಿಕಾ ಮೇಲಿದೆ. ಹೀಗಿರುವಾಗ ರಶ್ಮಿಕಾ ನಟಿಯಾಗಿ ಬಾಲಿವುಡ್ ಪ್ರವೇಶಿಸಲು ಸಿದ್ಧರಾಗಿದ್ದು, ಈ ಸಿನಿಮಾದ ವಿಚಾರವಾಗಿ ಮತ್ತೊಮ್ಮೆ ಕನ್ನಡಿಗರ ಕೋಪಕ್ಕೆ ಒಳಗಾಗಿದ್ದಾರೆ.

  ಅಮಿತಾಬ್ ಚಿತ್ರದಲ್ಲಿ ರಶ್ಮಿಕಾ ನಟನೆ

  ಅಮಿತಾಬ್ ಚಿತ್ರದಲ್ಲಿ ರಶ್ಮಿಕಾ ನಟನೆ

  ಈ ಹಿಂದೆ ಹಿಂದಿಯ ಟಾಪ್ ಟಕ್ಕರ್ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಅಮಿತಾಬ್ ಬಚ್ಚನ್ ಅಭಿನಯದ ಗುಡ್ ಬೈ ಎಂಬ ಹಿಂದಿ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಈ ಸಿನಿಮಾ ಅಕ್ಟೋಬರ್ 7ರಂದು ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಈ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ನಟಿ ರಶ್ಮಿಕಾ ಮಂದಣ್ಣ ಚಿತ್ರದ ಡಬ್ಬಿಂಗ್ ಕುರಿತ ಅನುಭವವನ್ನು ಹಂಚಿಕೊಂಡಿದ್ದಾರೆ.

  ಮೊದಲ ಹಿಂದಿ ಸಿನಿಮಾಗೆ ತನ್ನ ಸ್ವಂತ ವಾಯ್ಸ್!

  ಮೊದಲ ಹಿಂದಿ ಸಿನಿಮಾಗೆ ತನ್ನ ಸ್ವಂತ ವಾಯ್ಸ್!

  ಇನ್ನು ಗುಡ್ ಬೈ ಚಿತ್ರದ ಡಬ್ಬಿಂಗ್ ಕುರಿತು ಮಾತನಾಡಿದ ರಶ್ಮಿಕಾ ಗುಡ್ ಬೈ ಚಿತ್ರಕ್ಕೆ ತಾವೇ ಡಬ್ಬಿಂಗ್ ಮಾಡಿರುವುದಾಗಿ ತಿಳಿಸಿದ್ದಾರೆ. ಡಬ್ಬಿಂಗ್ ಮಾಡುವುದು ಯಾವಾಗಲೂ ಕಷ್ಟದ ಕೆಲಸ ಎಂದ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಹಿಂದಿ ಡಬ್ಬಿಂಗ್ ಮಾಡಿದ್ದೇನೆ ಹಾಗೂ ಅದು ಸವಾಲಿನ ಕೆಲಸವೂ ಆಗಿತ್ತು ಎಂದಿದ್ದಾರೆ ಮತ್ತು ಇದೇ ಸಮಯದಲ್ಲಿ ಹೊಸ ಭಾಷೆ ಕಲಿತಂತಾಯಿತು ಎಂದೂ ಸಹ ರಶ್ಮಿಕಾ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವಿಷಯ ಕೇಳಿದ ಕನ್ನಡಿಗರು ಕನ್ನಡ ಚಿತ್ರದ ಡಬ್ಬಿಂಗ್ ಮಾಡೋಕೆ ಟೈಮ್ ಇಲ್ಲ, ಆದರೆ ಹಿಂದಿ ಡಬ್ಬಿಂಗ್‌ಗೆ ಟೈಮ್ ಇದೆ ಅಲ್ವಾ ಎಂದು ರಶ್ಮಿಕಾ ವಿರುದ್ಧ ಕಿಡಿಕಾರಿದ್ದಾರೆ.

  ಕನ್ನಡ ಡಬ್ ಮಾಡಲು ಟೈಮ್ ಇಲ್ಲ ಎಂದಿದ್ದ ಶ್ರೀವಲ್ಲಿ

  ಕನ್ನಡ ಡಬ್ ಮಾಡಲು ಟೈಮ್ ಇಲ್ಲ ಎಂದಿದ್ದ ಶ್ರೀವಲ್ಲಿ

  ರಶ್ಮಿಕಾ ಅಭಿನಯಿಸಿದ್ದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಟ ದ ರೈಸ್‌ ಕನ್ನಡಕ್ಕೂ ಸಹ ಡಬ್ ಆಗಿ ಬಿಡುಗಡೆಗೊಂಡಿತ್ತು. ಈ ಚಿತ್ರದ ಬಿಡುಗಡೆ ಸಮಯದಲ್ಲಿ ಕನ್ನಡದಲ್ಲಿ ನೀವೇ ಡಬ್ ಮಾಡಬಹುದಿತ್ತಲ್ಲ ಎಂಬ ಪ್ರಶ್ನೆ ಎದುರಾದಾಗ ನಾನು ಡಬ್ಬಿಂಗ್ ಮಾಡಲು ಪ್ರಯತ್ನಿಸಿದ್ದೆ ಆದರೆ ಸಮಯ ಕೂಡಿ ಬರಲಿಲ್ಲ ಎಂದಿದ್ದರು ಹಾಗೂ ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ಸ್ವತಃ ತಾನೇ ಡಬ್ಬಿಂಗ್ ಮಾಡುವುದಾಗಿಯೂ ರಶ್ಮಿಕಾ ತಿಳಿಸಿದ್ದರು.

  English summary
  Kannada people trolled Rashmika Mandanna as she dubbed hindi in her own voice for Goodbye movie
  Saturday, September 24, 2022, 13:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X