ಹಿಂದಿ 'ಡಿಯರ್ ದಿಯಾ' ಟ್ರೈಲರ್ ರಿಲೀಸ್: ಚೆನ್ನಾಗಿಲ್ಲ ಎಂದ ನೆಟ್ಟಿಗರು!
'ದಿಯಾ' ಎನ್ನುವ ಹೆಸರು ಮತ್ತೆ ಸಿನಿಮಾರಂಗದಲ್ಲಿ ಸದ್ದು ಮಾಡೋಕೆ ಶುರು ಮಾಡಿದೆ. ಆದರೆ ಈ ಬಾರಿ ದಿಯಾ ಜೊತೆಗೆ ಡಿಯರ್ ಕೂಡ ಸೇರಿದೆ. ಇಲ್ಲಿ ಹೇಳೋಕೆ ಹೊರಟಿರುವುದು ಹಿಂದಿಯ 'ಡಿಯರ್ ದಿಯಾ' ಬಗ್ಗೆ. ಕನ್ನಡದ 'ದಿಯಾ' ಸಿನಿಮಾ ಹಿಂದಿಗೆ ರಿಮೇಕ್ ಆಗಿ 'ಡಿಯರ್ ದಿಯಾ' ಎನ್ನುವ ಟೈಟಲ್‌ನಲ್ಲಿ ತೆರೆಗೆ ಬರುತ್ತಿದೆ.
ಈಗಾಗಲೇ ಕನ್ನಡದಲ್ಲಿ ರಿಲೀಸ್ ಆಗಿರುವ 'ದಿಯಾ' ಸಿನಿಮಾ ಹಿಟ್ ಲಿಸ್ಟ್ ಸೇರಿದೆ. ಇದು ಸಿನಿಮಾ ಆಗಿ ಮಾತ್ರ ಅಲ್ಲ ಒಂದು ರೀತಿಯ ಟ್ರೆಂಡ್ ಹುಟ್ಟು ಹಾಕಿತು. ಚಿತ್ರಮಂದಿರಗಳಲ್ಲಿ ಗಮನ ಸೆಳೆದು ನಂತರ ಒಟಿಟಿಯಲ್ಲಿ ಸಿನಿಮಾ ತೆರೆಗೆ ಬಂದು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಚಿತ್ರದಲ್ಲಿ ಒಂದೊಂದು ಪಾತ್ರವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಸದ್ಯ 'ಡಿಯರ್ ದಿಯಾ' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ಮೇಲೆ ಮಾತ್ರವಲ್ಲ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆ. ಆದರೆ ಈಗ ರಿಲೀಸ್ ಆಗಿರುವ ಟ್ರೈಲರ್ ನಿರಾಸೆ ಮೂಡಿಸಿದೆ. ಕನ್ನಡದಲ್ಲಿ 'ದಿಯಾ' ಚಿತ್ರವನ್ನು ನೋಡಿದವರಿಗೆ 'ಡಿಯರ್ ದಿಯಾ' ಟ್ರೈಲರ್ ನಿರಾಸೆ ಮೂಡಿಸಿದೆ. ಅಷ್ಟಕ್ಕೂ ಟ್ರೈಲರ್‌ನಲ್ಲಿ ಅಂತಹದ್ದೇನಿದೆ? ಏನಿಲ್ಲ ಎನ್ನುವ ಬಗ್ಗೆ ಮುಂದೆ ಓದಿ.
'ಡಿಯರ್ ದಿಯಾ' ಟ್ರೈಲರ್ ರಿಲೀಸ್!
'ದಿಯಾ' ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಲಾಗಿದೆ. ಹಿಂದಿಯಾ 'ಡಿಯರ್ ದಿಯಾ'ವನ್ನು ಕನ್ನಡದಲ್ಲಿ 'ದಿಯಾ' ಚಿತ್ರವನ್ನು ಮಾಡಿದ್ದ ಅಶೋಕ್ ಅವರೇ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಜೂನ್ 10ಕ್ಕೆ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಇದೆ ಬೆನ್ನಲ್ಲೇ ಟ್ರೈರಲ್ ರಿಲೀಸ್ ಮಾಡಲಾಗಿದೆ. ಕನ್ನಡದ ನಟ ಪೃಥ್ವಿ ಅಂಬರ್ ಹಿಂದಿಯಲ್ಲಿ ನಟಿಸಿದ್ದಾರೆ.

'ಡಿಯರ್ ದಿಯಾ' ಟ್ರೈಲರ್‌ಗೆ ಟೀಕೆಗಳ ಸುರಿಮಳೆ!
'ಡಿಯರ್ ದಿಯಾ' ಟ್ರೈಲರನ್ನು ಚಿತ್ರತಂಡ ಹಂಚಿಕೊಳ್ಳುತ್ತಿದ್ದಂತೆಯೇ, ಟ್ರೈಲರ್ ಬಗ್ಗೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಂದೇ ಮಾತಲ್ಲಿ ಟ್ರೈಲರ್ ಚೆನ್ನಾಗಿ ಇಲ್ಲ ಎಂದಿದ್ದಾರೆ. ಕನ್ನಡದ 'ದಿಯಾ' ಮುಂದೆ ಈ 'ಡಿಯರ್ ದಿಯಾ' ಏನೇನು ಇಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಇನ್ನು ಮುಖ್ಯವಾಗಿ 'ಡಿಯರ್ ದಿಯಾ' ಪಾತ್ರ ವರ್ಗದ ಬಗ್ಗೆಯೇ ಹೆಚ್ಚು ಚರ್ಚೆ ಶುರುವಾಗಿದೆ.

ನಟಿ ಖುಷಿಯ ಮುಂದೆ ಮಂಕಾದ ಮಿಹಿಕಾ ಕುಶ್ವಾಹಾ!
'ದಿಯಾ' ಎನ್ನುವ ಟೈಟಲ್ಲೇ ಹೇಳುತ್ತೆ ಸಿನಿಮಾದಲ್ಲಿ ದಿಯಾ ಎನ್ನುವ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು. ಕನ್ನಡದಲ್ಲಿ ದಿಯಾ ಪಾತ್ರವನ್ನು ನಟಿ ಖುಷಿ ಮಾಡಿದ್ದಾರೆ. ಖುಷಿಯನ್ನು ದಿಯಾ ರೂಪದಲ್ಲಿ ನೋಡಿದ ಪ್ರೇಕ್ಷಕರು ಆಕೆಯ ಅಭಿನಯಕ್ಕೆ ಫಿದಾ ಆಗಿದ್ದರು. ಹಿಂದಿಯ 'ಡಿಯರ್ ದಿಯಾ' ಚಿತ್ರದಲ್ಲಿ ಇದೇ ಪಾತ್ರವನ್ನು ಮಿಹಿಕಾ ಕುಶ್ವಾಹಾ ಮಾಡಿದ್ದಾರೆ. ಆದರೆ ದಿಯಾ ಪಾತ್ರಕ್ಕೆ ಇರುವ ಆರ್ದ್ರತೆಯನ್ನು ವ್ಯಕ್ತ ಪಡಿಸುವಲ್ಲಿ ಸೋತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತೆ. ಇದು ಟ್ರೈರಲ್ ಮಾತ್ರ ಹಾಗಾಗಿ ಚಿತ್ರದಲ್ಲಿ ಚೆನ್ನಾಗಿ ಇದ್ದರೂ ಇರಬಹುದೇನೊ.

'ದಿಯಾ' ರಿಮೇಕ್ ಬದಲು ಡಬ್ ಮಾಡಬಹುದಿತ್ತು!
'ದಿಯಾ' ಸಿನಿಮಾದ್ದು, ಕನ್ನಡದ ಭಾಷೆ ಗೊತ್ತಿಲ್ಲದೇ ಇರುವವರಿಗೂ ಕನೆಕ್ಟ್ ಆಗುವಂತಹ ಭಾವನಾತ್ಮಕ ಕಥೆ. ಹಾಗಾಗಿ ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುವ ಅವಶ್ಯಕತೆ ಇರಲಿಲ್ಲ. ರಿಮೇಕ್ ಮಾಡುವ ಬದಲಿಗೆ ಚಿತ್ರವನ್ನು ಡಬ್ ಮಾಡಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು ಎನ್ನಲಾಗುತ್ತಿದೆ. ಆದರೂ ಸದ್ಯ ಟ್ರೈಲರ್ ಮಾತ ರಿಲೀಸ್ ಆಗಿದ್ದು, ಜೂನ್ 10ಕ್ಕೆ ಸಿನಿಮಾ ಬಂದ ಮೇಲೆ ಹೇಗಿರಲಿ ಎನ್ನುವುದು ತಿಳಿಯುತ್ತದೆ.


Click it and Unblock the Notifications











