ಬಿಗ್ ಬ್ರೇಕಿಂಗ್: ರಿಷಬ್ ಬಾಲಿವುಡ್‌ ಎಂಟ್ರಿ ಫಿಕ್ಸ್: ನಿರ್ದೇಶಕರು ಯಾರು? ಕಥೆ ಏನು? ಇಲ್ಲಿದೆ ಡಿಟೈಲ್ಸ್

'ಕಾಂತಾರ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ ರಿಷಬ್ ಶೆಟ್ಟಿ ಈಗ ಬಾಲಿವುಡ್‌ಗೆ ಪಾದಾರ್ಪಣೆ ಕೊಡುತ್ತಿದ್ದಾರೆ. ಸದ್ಯ 'ಕಾಂತಾರ' ಸಿನಿಮಾದಲ್ಲಿ ಡಿವೈನ್ ಸ್ಟಾರ್ ಬ್ಯುಸಿಯಾಗಿದ್ದು ಆ ಬಳಿಕ ಹಿಂದಿ ಸಿನಿಮಾದಲ್ಲಿ ನಟಿಸೋದು ಪಕ್ಕಾ ಆಗಿದೆ. ಈ ಬಗ್ಗೆ ಬಾಲಿವುಡ್ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಅಂದಹಾಗೆ ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಹೀರೊ ಆಗುವ ಕನಸು ಕಂಡು ಚಿತ್ರರಂಗಕ್ಕೆ ಬಂದ ರಿಷಬ್ ಶೆಟ್ಟಿ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಬಳಿಕ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಸಿನಿರಸಿಕರ ಮನಗೆದ್ದರು. 'ಬೆಲ್‌ಬಾಟಂ' ಸಿನಿಮಾ ಮೂಲಕ ಹೀರೊ ಆಗಿ ಬಣ್ಣ ಹಚ್ಚಿದರು. ಬಳಿಕ ನಿಧಾನವಾಗಿ ಒಂದೊಂದೇ ಸಿನಿಮಾದಲ್ಲಿ ನಟಿಸಲು ಆರಂಭಿಸಿದರು. ಆದರೆ 'ಕಾಂತಾರ' ನಿರ್ದೇಶಿಸಿ ನಟಿಸಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದರು. ಪರಭಾಷಾ ಫಿಲ್ಮ್ ಮೇಕರ್ಸ್ ಕೂಡ ರಿಷಬ್ ಕಾಲ್‌ಶೀಟ್‌ಗಾಗಿ ಕ್ಯೂ ನಿಲ್ಲುವಂತಾಯಿತು.

Kantara Actor Rishab shetty makes his bollywood debut with exciting project

ಅಂತೂ ಇಂತೂ ರಿಷಬ್ ಶೆಟ್ಟಿ ಬಾಲಿವುಡ್ ಪ್ರಾಜೆಕ್ಟ್‌ಗೆ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ. ಬಾಲಿವುಡ್ ಸೂಪರ್ ಹಿಟ್ ಸಿನಿಮಾಗಳ ಸರದಾರ ಅಶುತೋಷ್ ಗೋವಾರಿಕರ್ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ ಬಣ್ಣ ಹಚ್ಚುವ ಸುಳಿವು ಸಿಕ್ಕಿದೆ. 'ಪಿಂಕ್‌ವಿಲ್ಲಾ' ವೆಬ್‌ ಸೈಟ್ ವರದಿಯ ಪ್ರಕಾರ ಹಲವು ದಿನಗಳಿಂದ ರಿಷಬ್ ಶೆಟ್ಟಿ ಹಾಗೂ ಅಶುತೋಷ್ ಸಿನಿಮಾವೊಂದರ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಕೊನೆಗೂ ಮಾತುಕತೆ ಯಶಸ್ವಿಯಾಗಿದ್ದು ರಿಷಬ್ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.

ಅಶುತೋಷ್ ಗೋವಾರಿಕರ್ ತಮ್ಮ ಮುಂದಿನ ಸಿನಿಮಾ ಕತೆಗೆ ರಿಷಬ್‌ ಶೆಟ್ಟಿ ನ್ಯಾಯ ಒದಗಿಸುತ್ತಾರೆ ಎಂದು ಭಾವಿಸಿದ್ದರಂತೆ. ಹಾಗಾಗಿ ಮಾತುಕತೆ ನಡೆದಿದೆ. ರಿಷಬ್ ಕೂಡ ನಿರ್ದೇಶಕರು, ಬರಹಗಾರರು. ಹಾಗಾಗಿ ಇವರಿಬ್ಬರ ಕಾಂಬಿನೇಷನ್‌ ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ. ಇದೇ ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ಕೆಲಸ ಮಾಡಲು ಮುಂದಾಗಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾ ಪ್ರೀ ಪ್ರೊಡಕ್ಷನ್ ಶೀಘ್ರದಲ್ಲೇ ಶುರುವಾಗಲಿದೆ. ಮುಂದಿನ ವರ್ಷ ಮಧ್ಯಭಾಗದಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ.

'ಕಾಂತಾರ'-2 ಚಿತ್ರೀಕರಣ ಮುಗಿದ ಬಳಿಕ ಅಶುತೋಷ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. 'ಕಾಂತಾರ' ಪ್ರೀಕ್ವೆಲ್ ಶೂಟಿಂಗ್ ಯಾವಾಗ ಮುಗಿಯುತ್ತೆ ಎನ್ನುವುದರ ಮೇಲೆ ಮುಂದಿನ ಸಿನಿಮಾ ಶುರುವಾಗುವುದು ಯಾವಾಗ ಎನ್ನುವುದು ತಿಳಿಯುತ್ತದೆ. 'ಲಗಾನ್', 'ಸ್ವದೇಶ್', 'ಜೋಧಾ ಅಕ್ಬರ್', 'ಪಾಣಿಪಟ್' ರೀತಿಯ ಅದ್ಭುತ ಸಿನಿಮಾಗಳನ್ನು ಕಟ್ಟಿಕೊಟ್ಟ ನಿರ್ದೇಶಕ ಅಶುತೋಷ್ ಗೋವಾರಿಕರ್. ಇದೀಗ ಅಶುತೋಷ್ ನಿರ್ದೇಶನದ ಚಿತ್ರದಲ್ಲಿ ರಿಷಬ್ ನಟಿಸುತ್ತಾರೆ ಎನ್ನುವ ಸುದ್ದಿಯೇ ಭಾರೀ ಸದ್ದು ಮಾಡುತ್ತಿದೆ.

Kantara Actor Rishab shetty makes his bollywood debut with exciting project

ಕಾರಣಾಂತರಗಳಿಂದ 'ಕಾಂತಾರ' ಪ್ರೀಕ್ವೆಲ್ ಸೆಟ್ಟೇರುವುದು ತಡವಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ಸೆಟ್ಟೇರಬೇಕಿತ್ತು. ಬಹಳ ಹಿಂದೆಯೇ ಸಿನಿಮಾ ಪ್ರೀ ಪ್ರೊಡಕ್ಷನ್ ಶುರುವಾಗಿತ್ತು. ಆದರೆ ಇನ್ನು ಚಿತ್ರೀಕರಣ ಮಾತ್ರ ಶುರುವಾಗಿಲ್ಲ. ಕಳೆದ ವರ್ಷ ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ 350 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು.

ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ ನಂತರ ತಮಿಳು, ತೆಲುಗು, ಹಿಂದಿ, ಮಲಯಾಳಂ, ಇಂಗ್ಲೀಷ್ ಹಾಗೂ ತುಳು ಭಾಷೆಗಳಿಗೆ ಡಬ್ ಆಗಿತ್ತು. ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ರಿಷಬ್ ಶೆಟ್ಟಿ ನಟನೆಗೆ ಬಾಲಿವುಡ್ ಪ್ರೇಕ್ಷಕರು ಫಿದಾ ಆಗಿದ್ದರು. ಈ ಸಿನಿಮಾ ಮೂಲಕ ರಿಷಬ್ ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದರು.

More from Filmibeat

English summary
Rishab shetty bollywood entry with Ashutosh Gowariker'sdirectorial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X